Amazon Sale 2026: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್' ಶುಭಾರಂಭ! ಮಾರಾಟ 100% ಏರಿಕೆ, ನಿಮಿಷಗಳಲ್ಲೇ ಡೆಲಿವರಿ!

Amazon Sale 2026: ಆನ್‌ಲೈನ್ ಶಾಪಿಂಗ್ ಪ್ರಿಯರು ಕಾತುರದಿಂದ ಕಾಯುತ್ತಿದ್ದ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026' ಭರ್ಜರಿಯಾಗಿ ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೇಲ್ ಆರಂಭವಾದ ಕೇವಲ 12 ಗಂಟೆಗಳಲ್ಲಿ, ಆರ್ಡರ್‌ಗಳ ಸಂಖ್ಯೆಯಲ್ಲಿ ಬರೋಬ್ಬರಿ ಶೇ. 100ರಷ್ಟು ದಾಖಲೆಯ ಏರಿಕೆ ಕಂಡು ಬಂದಿದೆ.ಈ ಸೇಲ್ ಪ್ರೈಮ್ ಚೆಂದಾದಾರರಿಗೆ ಅಕ್ಟೋಬರ್ 7ರಂದು ರಾತ್ರಿ ಶುರುವಾದರೆ, ಇತರರಿಗೆ ಅಕ್ಟೋಬರ್ 8ರಂದು ರಾತ್ರಿ ಶುರುವಾಗಿದೆ.

ದೇಶದ ಮೂಲೆ ಮೂಲೆಗಳ ಜನರು ಅಮೆಜಾನ್‌ನಲ್ಲಿ ಮುಗಿಬಿದ್ದು ಖರೀದಿಸಿದ್ದಾರೆ. ಭಾರತದ ಪ್ರತಿಯೊಂದು ಪಿನ್-ಕೋಡ್‌ನಿಂದಲೂ ಗ್ರಾಹಕರು ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಬ್ಯೂಟಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದೆ. ಇದು ಅಮೆಜಾನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಓಪನಿಂಗ್ ಸೇಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Amazon Great Indian Festival 2026

EMIನಲ್ಲೇ ಹೆಚ್ಚು ಖರೀದಿ, ಸೇಲ್ ಶುರುವಾಗುತ್ತಿದ್ದಂತೆ ಡೆಲಿವರಿ!

ಗ್ರಾಹಕರು ಆರ್ಡರ್ ಮಾಡಿದ ಕೇವಲ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವಸ್ತುಗಳನ್ನು ಡೆಲಿವರಿ ಮಾಡಲಾಗಿದೆ. 'ಅಮೆಜಾನ್ ನೌ' ತ್ವರಿತ ಸೇವೆ ಇರುವ 120ಕ್ಕೂ ಹೆಚ್ಚು ನಗರಗಳಲ್ಲಿ, ಆರ್ಡರ್ ಮಾಡಿದ ಪ್ರತಿ 2 ವಸ್ತುಗಳಲ್ಲಿ ಒಂದು ವಸ್ತುವನ್ನು ಕೇವಲ ನಿಮಿಷಗಳಲ್ಲಿಯೇ ಮನೆಬಾಗಿಲಿಗೆ ತಲುಪಿಸಲಾಗಿದೆ. ದುಬಾರಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಇಎಂಐ ಆಯ್ಕೆಯನ್ನು ಹೆಚ್ಚು ಬಳಸುತ್ತಿದ್ದಾರೆ. ಪ್ರತಿ 2 ಗ್ರಾಹಕರಲ್ಲಿ ಒಬ್ಬರು ವಸ್ತುಗಳ ಖರೀದಿಗೆ ಇಎಂಐ ಮೊರೆ ಹೋಗಿದ್ದು ಅಂಕಿ ಅಂಶಗಳಿಂದ ತಿಳಿದು ಬಂದಿದೆ ಎಂದು ಅಮೆಜಾನ್ ಕಂಪನಿ ತಿಳಿಸಿದೆ.

ಅಮೆಜಾನ್ ಪ್ರೈಮ್ ಸದಸ್ಯರು ಮೊದಲ 12 ಗಂಟೆಗಳಲ್ಲೇ ಪ್ರೈಮ್-ಓನ್ಲಿ ಆಫರ್‌ಗಳ ಮೂಲಕ ಕಳೆದ ವರ್ಷಕ್ಕಿಂತ ಶೇ. 100ರಷ್ಟು ಹೆಚ್ಚಿನ ಹಣ ಉಳಿತಾಯ ಮಾಡಿದ್ದಾರೆ. ಪ್ರತಿ ಮೂರು ವಸ್ತುಗಳ ಖರೀದಿಯಲ್ಲಿ ಒಂದು ವಸ್ತುವಿಗೆ ಭರ್ಜರಿ ಕ್ಯಾಶ್‌ಬ್ಯಾಕ್ ಸಿಕ್ಕಿದೆ.

ಯಾವೆಲ್ಲ ವಸ್ತುಗಳು ಹೆಚ್ಚು ಆರ್ಡರ್ ಆಗಿವೆ?

ಎಂದಿನಂತೆ ಈ ಬಾರಿಯು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಗ್ರಾಹಕರು ಹೊಸ ಫೋನ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿದ್ದು, ಪ್ರೀಮಿಯಂ ಆಂಡ್ರಾಯ್ಡ್ ಫೋನ್‌ಗಳ ಮಾರಾಟ ಶೇ. 70ರಷ್ಟು ಹೆಚ್ಚಾಗಿದೆ. ಆಪಲ್ ಐಫೋನ್ 16, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌25 ಅಲ್ಟ್ರಾ, ಒನ್‌ಪ್ಲಸ್ ನಾರ್ಡ್ 6, ಶಿಯೋಮಿ 17 ಮತ್ತು ಐಕ್ಯೂಒಒ 15ಆರ್‌ ಫೋನ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಇನ್ನು ಆಪಲ್ ಮ್ಯಾಕ್‌ಬುಕ್ ನಿಯೋ ಲ್ಯಾಪ್‌ಟಾಪ್‌ಗಳ ಮಾರಾಟ ಸಾಮಾನ್ಯ ದಿನಗಳಿಗಿಂತ ಬರೋಬ್ಬರಿ 65 ಪಟ್ಟು ಹೆಚ್ಚಾಗಿದೆ. ಸ್ಮಾರ್ಟ್ ವಾಚ್‌ಗಳ ಮಾರಾಟ 80 ಪಟ್ಟು ಹೆಚ್ಚಾಗಿದೆ..

ಮನೆಯನ್ನು ಸಿನಿಮಾ ಥಿಯೇಟರ್ ಮಾಡಿಕೊಳ್ಳುವ ಕ್ರೇಜ್ ಕೂಡ ಈ ಬಾರಿ ಹೆಚ್ಚಾಗಿದೆ. ಹೋಮ್ ಎಂಟರ್‌ಟೈನ್‌ಮೆಂಟ್ ವಸ್ತುಗಳ ಮಾರಾಟ 77 ಪಟ್ಟು ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ. ಮಾರಾಟವಾದ ಟಿವಿಗಳಲ್ಲಿ ಶೇ. 65ರಷ್ಟು 55-ಇಂಚು ಮತ್ತು ಅದಕ್ಕಿಂತ ದೊಡ್ಡ ಟಿವಿಗಳೇ ಆಗಿವೆ. ಸೋನಿ, ಜೆಬಿಎಲ್‌ನಂತಹ ಪ್ರೀಮಿಯಂ ಹೋಮ್ ಥಿಯೇಟರ್‌ಗಳ ಮಾರಾಟದಲ್ಲಿ 100 ಪಟ್ಟು ಜಿಗಿತ ಕಂಡು ಬಂದಿದೆ.

ವಾಷಿಂಗ್ ಮೆಷಿನ್ ಮತ್ತು ಫ್ರಿಡ್ಜ್ ವಿಚಾರಕ್ಕೆ ಬರುವುದಾದರೆ, 9 ಕೆ.ಜಿ ಮತ್ತು ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಪ್ರೀಮಿಯಂ ವಾಷಿಂಗ್ ಮೆಷಿನ್‌ಗಳ ಮಾರಾಟ 80 ಪಟ್ಟು ಹೆಚ್ಚಾಗಿದೆ. ಸ್ಯಾಮ್‌ಸಂಗ್, ಎಲ್‌ಜಿ, ಬಾಷ್, ಹೈಯರ್ ಕಂಪನಿಯ ಫ್ರಿಡ್ಜ್‌ಗಳ ಮಾರಾಟ 60 ಪಟ್ಟು ಏರಿಕೆ ಕಂಡಿದ್ದು, ಡೈಕಿನ್, ಪ್ಯಾನಾಸೋನಿಕ್ ಎಸಿಗಳ ಮಾರಾಟವೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಫ್ಯಾಷನ್, ಬ್ಯೂಟಿ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ

ಬಟ್ಟೆ ಮತ್ತು ಫ್ಯಾಷನ್ ವಸ್ತುಗಳ ಮಾರಾಟ ಸಾಮಾನ್ಯ ದಿನಕ್ಕಿಂತ 7 ಪಟ್ಟು ಹೆಚ್ಚಾಗಿದೆ. ಪ್ರತಿ ಸೆಕೆಂಡಿಗೆ 7 ಜೊತೆ ಶೂಗಳು (ನೈಕ್, ಅಡಿಡಾಸ್, ವುಡ್‌ಲ್ಯಾಂಡ್ ಇತ್ಯಾದಿ) ಮಾರಾಟವಾಗುತ್ತಿವೆ. ಪುರುಷರ ಜೀನ್ಸ್ ಪ್ಯಾಂಟ್‌ಗಳಿಗೆ (ಲಿವೈಸ್, ರಾಂಗ್) ಭಾರೀ ಬೇಡಿಕೆ ಇದ್ದು, ಪ್ರತಿ ಗಂಟೆಗೆ 1,500 ಜೊತೆ ಜೀನ್ಸ್ ಪ್ಯಾಂಟ್‌ಗಳು ಸೇಲ್ ಆಗುತ್ತಿವೆ. ಮಹಿಳೆಯರ ಕುರ್ತಾಗಳು ಪ್ರತಿ ನಿಮಿಷಕ್ಕೆ 100ರಂತೆ ಮಾರಾಟವಾಗುತ್ತಿವೆ.

ಆನ್‌ಲೈನ್‌ನಲ್ಲಿ ಮಾರಾಟವಾದ ಪ್ರತಿ 4 ವಸ್ತುಗಳಲ್ಲಿ 1 ಬ್ಯೂಟಿ ಪ್ರಾಡಕ್ಟ್ (ಸೌಂದರ್ಯವರ್ಧಕ) ಆಗಿದೆ. ಪ್ರೀಮಿಯಂ ಸ್ಕಿನ್-ಕೇರ್ ಮತ್ತು ಹೇರ್-ಕೇರ್ ಉತ್ಪನ್ನಗಳು ಪ್ರತಿ ನಿಮಿಷಕ್ಕೆ 150ರಂತೆ ಮಾರಾಟವಾಗುತ್ತಿವೆ. ಐಷಾರಾಮಿ ಪರ್ಫ್ಯೂಮ್‌ಗಳು ಪ್ರತಿ ನಿಮಿಷಕ್ಕೆ 12 ಸೇಲ್ ಆಗುತ್ತಿವೆ. ಸ್ನಾನದ ಸೋಪ್ ಮತ್ತು ಶವರ್ ಜೆಲ್‌ಗಳು ಪ್ರತಿ ನಿಮಿಷಕ್ಕೆ ಬರೋಬ್ಬರಿ 800ರಂತೆ ಮಾರಾಟವಾಗುತ್ತಿವೆ ಎಂದು ಕಂಪನಿ ತಿಳಿಸಿದೆ.

ಆರೋಗ್ಯದ ಕಡೆಗೂ ಗ್ರಾಹಕರ ಚಿತ್ತ

ಜನರು ಆರೋಗ್ಯದ ಕಡೆಗೂ ಗಮನ ಹರಿಸುತ್ತಿದ್ದಾರೆ. ಗಾಳಿಯನ್ನು ಶುದ್ಧೀಕರಿಸುವ ಏರ್ ಪ್ಯೂರಿಫೈಯರ್ ಮತ್ತು ಎಣ್ಣೆ ಇಲ್ಲದೆ ಕರಿಯುವ ಏರ್ ಫ್ರೈಯರ್‌ಗಳ ಮಾರಾಟ 30 ಪಟ್ಟು ಹಾಗೂ ಜ್ಯೂಸರ್‌ಗಳ ಮಾರಾಟ 23 ಪಟ್ಟು ಹೆಚ್ಚಾಗಿದೆ.

"ಗ್ರಾಹಕರ ಬೆಂಬಲ ನಮ್ಮ ನಿರೀಕ್ಷೆಯನ್ನೂ ಮೀರಿದೆ. ಕಾಸ್ಮೋಪಾಲಿಟನ್ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೆ, ಇಡೀ ಭಾರತ ಅತ್ಯುತ್ತಮ ಡೀಲ್ ಮತ್ತು ವೇಗದ ಡೆಲಿವರಿಗಾಗಿ ಅಮೆಜಾನ್ ಅನ್ನು ಆಯ್ಕೆ ಮಾಡುತ್ತಿರುವುದು ನಮಗೆ ಅತೀವ ಖುಷಿ ತಂದಿದೆ," ಎಂದು ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಸೌರಭ್ ಶ್ರೀವಾಸ್ತವ ಹರ್ಷ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+