ಅಮರನಾಥ ಯಾತ್ರೆ ಮೇಲಿನ ದಾಳಿಯ ರೂವಾರಿ 3 ನಿಮಿಷಗಳಲ್ಲಿ ಫಿನಿಷ್
Recommended Video

ಅಮರನಾಥ ಯಾತ್ರೆ ಮೇಲೆ ದಾಳಿ ಮಾಡಿದ್ದ ಉಗ್ರ ಫಿನಿಷ್ | Oneindia Kannada
ಜಮ್ಮು ಮತ್ತು ಕಾಶ್ಮೀರ, ಸೆಪ್ಟಂಬರ್ 15: ಅಮರನಾಥ ಯಾತ್ರೆ ಮೇಲಿನ ದಾಳಿಯ ರೂವಾರಿ ಅಬು ಇಸ್ಮಾಯಿಲ್ ನನ್ನು ಭಾರತೀಯ ಭದ್ರತಾ ಪಡೆಗಳು ಕೇವಲ ಮೂರೇ ಮೂರು ನಿಮಿಷದಲ್ಲಿ ಹತ್ಯೆ ಮಾಡಿ ಪರಾಕ್ರಮ ಮೆರೆದಿವೆ.
ಲಷ್ಕರ್ ಇ ತಯ್ಯಬಾ ಉಗ್ರರಾದ ಅಬು ಇಸ್ಮಾಯಿಲ್ ಮತ್ತು ಆತನ ಸಹಚರ ಚೋಟಾ ಅಲಿಯಾಸ್ ಅಬು ಕಾಸಿಮ್ ನನ್ನು ಗುರುವಾರ ನಡೆದ ಎನ್ನಕೌಂಟರ್ ನಲ್ಲಿ ಕೊಲ್ಲಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಈ ಇಬ್ಬರು ಉಗ್ರರನ್ನು ಹೊಡೆದುರುಳಿಸಲು ಗುರುವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸೈನಿಕರ ಕೈಯಿಂದ ತಪ್ಪಿಸಿಕೊಳ್ಳಲು ಉಗ್ರರು ಯತ್ನಿಸಿದರಾದರೂ ಕೇವಲ ಮೂರು ನಿಮಿಷಗಳನ್ನು ಅವರನ್ನು ಹತ್ಯೆ ಮಾಡಲಾಗಿದೆ.
ಅಬು ಇಸ್ಮಾಯಿಲ್ ಭದ್ರತಾ ಪಡೆಗಳ ಮೋಸ್ಟ್ ವಾಂಟೆಂಡ್ ಲಿಸ್ಟ್ ನಲ್ಲಿದ್ದ ಉಗ್ರನಾಗಿದ್ದು, ಆತನೀಗ ಹತನಾಗಿದ್ದಾನೆ.












Click it and Unblock the Notifications