ಪಾನಿಪುರಿ ಪ್ರಿಯರೇ ಎಚ್ಚರ.. ಎಚ್ಚರ! ತಿನ್ನುವ ಮೊದಲು ಈ ವಿಡಿಯೋ ನೋಡಿ..!

ಪಾನಿಪುರಿ ಇಷ್ಟಪಡದೇ ಇರೋರು ಯಾರಿದ್ದಾರೆ ಹೇಳಿ..? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಪಾನಿಪುರಿಯ ಲವರ್ಸ್‌ ಆಗಿರ್ತಾರೆ. ಅದರಲ್ಲೂ ಕೆಲವರಿಗೆ ಪಾನಿಪುರಿ ಕಂಡರೆ ಸಾಕು ಬೇಡ ಬೇಡ ಅಂದರೂ ಬಾಯಲ್ಲಿ ನೀರು ಬಂದೇ ಬಿಡುತ್ತೆ. ಆದ್ರೆ ಹೀಗೆ ಬಾಯಿ ಚಪಲ ತೀರಿಸಿಕೊಳ್ಳುವ ಅವಸರದಲ್ಲಿ ಕಂಡ ಕಂಡ್ಕಡೆ ಪಾನಿಪುರಿ ತಿನ್ನಲು ಹೋಗದಿರಿ. ಯಾಕಂದ್ರೆ ಪಾನಿಪುರಿ ವ್ಯಾಪಾರಿ ಅದರಲ್ಲಿ ಏನು ಬೇಕಾದ್ರೂ ಹಾಕಿ ಕೊಡ್ತಾನೆ ಅಂತಿದೆ ಈ ವಿಡಿಯೋ. ಅಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ.

'ಗೋಲ್ ಗಪ್ಪ' ವ್ಯಾಪಾರಿ ಮಗ್‌ನಲ್ಲಿ ಮೂತ್ರ ವಿಸರ್ಜಿಸಿ ಮೂತ್ರವನ್ನು ನೀರಿಗೆ ಮಿಕ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ ಕಣ್ರೀ ಅದೇ ಮೂತ್ರ ಚೆಲ್ಲಿದ್ದ ನೀರನ್ನೇ ಪಾನಿಪುರಿಯ ತಯಾರಿಕೆಗೂ ಬಳಸಿದ್ದಾನೆ ಆ ಮನುಷ್ಯ. ಇವನ ವಿಕೃತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಶೇರ್ ಮಾಡುತ್ತಿರುವ ಜನ ವಿಕೃತ ವ್ಯಾಪಾರಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

Allegedly Pani Puri seller arrested after he mixed urine in water

ಘಟನೆ ನಡೆದಿದ್ದು ಎಲ್ಲಿ..?
ಅಂದಹಾಗೆ ಈ ಘಟನೆ ನಡೆದಿರೋದು ಅಸ್ಸಾಂನ ಗುವಾಹಟಿಯಲ್ಲಿ. ಇದು ಗೌಹಾಟಿಯ ಆಫ್ ಏಯ್ಟ್ ಗಾನ್ ಪ್ರದೇಶದಲ್ಲಿ ಬಯಲಾದ ಘಟನೆ. ಇನ್ನು ಈ ವಿಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ವಿಕೃತ ವ್ಯಾಪಾರಿ ಅರೆಸ್ಟ್ ಆಗಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಈತನ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೇಶಾದ್ಯಂತ ಪಾನಿಪುರಿ ವ್ಯಾಪಾರಿಯ ಈ ವಿಕೃತ ಬುದ್ಧಿಯ ಬಗ್ಗೆ ಚರ್ಚೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ತಕ್ಷಣ ವಿಡಿಯೋ ರೆಕಾರ್ಡ್
ಸ್ಥಳದಲ್ಲೇ ಇದ್ದ ವ್ಯಕ್ತಿಯೊಬ್ರು ಪಾನಿಪುರಿ ವ್ಯಾಪಾರಿಯ ಚಲನವಲನ ಗಮನಿಸಿದ್ದಾರೆ. ಪಾನಿಪುರಿ ತಯಾರಿಕೆಗೆ ಬಳಸುವ ಮಗ್ ಒಳಗೆ ಈತ ಮೂತ್ರ ವಿಸರ್ಜನೆ ಮಾಡುವುದು ಕಂಡಿದೆ. ತಕ್ಷಣ ತಡ ಮಾಡದೇ ಕ್ಯಾಮೆರಾ ಆನ್ ಮಾಡಿ, ತಮ್ಮ ಫೋನ್‌ನಲ್ಲಿ ಈ ಘಟನೆ ಚಿತ್ರಿಸಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸ್ವತಃ ಹಲವು ಪಾನಿಪುರಿ ವ್ಯಾಪಾರಿಗಳು ಹಾಗೂ ತಯಾರಕರು ಕೂಡ ಈತನ ವರ್ತನೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ಬೇಸರದ ಸಂಗತಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+