ಶ್ರೀರಾಮ, ಮೋದಿಗೆ ಜನ್ಮ ನೀಡಿದ್ದೇ ಅಲ್ಲಾಹ್: ನೇರಪ್ರಸಾರದಲ್ಲಿ ಮೌಲಿ ಉದ್ದಟತನ!

ರಾಮನಿಗೂ ಅಲ್ಲಾಹುವಿಗೂ ಹೋಲಿಕೆ ಮಾಡಲು ಹೋಗಬೇಡಿ. ರಾಮನಿಗೆ ಯಾಕೆ ನಿಮ್ಮ ಮೋದಿಗೂ ಜನ್ಮ ನೀಡಿದ್ದೂ ಅಲ್ಲಾಹ್ ಎನ್ನುವ ವಿವಾದಕಾರಿ ಹೇಳಿಕೆಯನ್ನು ವಾಹಿನಿಯ ಚರ್ಚೆಯೊಂದರಲ್ಲಿ ಮೌಲಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಹಿಂದೂ ದೇವಾನುದೇವತೆ, ಹಿಂದೂ ಪೂಜಾಪದ್ದತಿಗಳ ಬಗ್ಗೆ ಮನಬಂದಂತೆ ಅಪಮಾನಿಸುವ ಘಟನೆಗಳು ದೇಶದಲ್ಲಿ ಅವ್ಯಾಹುತವಾಗಿ ನಡೆಯುತ್ತಿದ್ದರೂ, ಗಪ್ ಚುಪ್ ಎನ್ನುವ ಎಡಪಂಥೀಯರು ಮತ್ತು ಬುದ್ದಿಜೀವಿಗಳ ಕೆಲವೊಂದು ವರ್ಗ, ಮೌಲಿಯೊಬ್ಬರು ನೇರಪ್ರಸಾರದಲ್ಲಿ ನೀಡಿದ ಹೇಳಿಕೆಗೆ ಈಗ ಏನಂತಾರೋ?

ಹಿಂದೂಗಳ ಬಗ್ಗೆ ತುಚ್ಚವಾಗಿ ಮಾತನಾಡುವ ಕೆ ಎಸ್ ಭಗವಾನ್, ಯೋಗೇಶ್ ಮಾಸ್ಟರ್ ಮುಂತಾದವರ ಸಾಲಿಗೆ ಮೌಲಿಯೊಬ್ಬರು ಸೇರಿಕೊಂಡಿದ್ದಾರೆ.. ನೇರಪ್ರಸಾರದ ಕಾರ್ಯಕ್ರಮವೊಂದರಲ್ಲಿ ಪ್ರಭು ಶ್ರೀರಾಮಚಂದ್ರನಿಗೆ ಜನ್ಮ ನೀಡಿದ್ದೇ ಅಲ್ಲಾಹ್ ಎನ್ನುವ ಮಾತನ್ನು ಮೌಲಿ ಹೇಳಿದ್ದಾರೆ. (ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ)

ನ್ಯೂಸ್ 18-ಇಂಡಿಯಾ ವಾಹಿನಿಯ ಚರ್ಚೆಯ ವೇಳೆ, ರಾಮನಿಗೂ ಅಲ್ಲಾಹುವಿಗೂ ಹೋಲಿಕೆ ಮಾಡಲು ಹೋಗಬೇಡಿ. ರಾಮನಿಗೆ ಮಾತ್ರ ಯಾಕೆ ನಿಮ್ಮ ಮೋದಿಗೂ ಜನ್ಮ ನೀಡಿದ್ದೂ ಅಲ್ಲಾಹ್ ಎನ್ನುವ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.

ನೇರಪ್ರಸಾರದಲ್ಲಿ ಹಿಂದೂಗಳನ್ನು ಅವಮಾನಿಸಿರುವ ಮುಲ್ಲಾ ಅಬ್ದುರ್ ರೆಹಮಾನ್, ರಾಮ ಸೇರಿದಂತೆ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳ ಸೃಷ್ಟಿಕರ್ತ ಅಲ್ಲಾಹ್, ಅದನ್ನು ನೀವೆಲ್ಲಾ ಒಪ್ಪಿಕೊಳ್ಳಬೇಕೆಂದು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಪ್ರವಾಸದ ವೇಳೆ ಬಹಳಷ್ಟು ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದ್ದರು. 'ಭಕ್ತಿಯಿಂದ ಕಾಂಗ್ರೆಸ್ಸಿಗೆ ಶಕ್ತಿ ಸಿಗುತ್ತಾ' ಎನ್ನುವ ವಿಷಯವನ್ನು ಇಟ್ಟುಕೊಂಡು ಚರ್ಚೆ ನಡೆಯುತ್ತಿದ್ದ ವೇಳೆ ಅಬ್ಧುರ್ ರೆಹಮಾನ್ ಮೇಲಿನ ಮಾತನ್ನು ಹೇಳಿದ್ದಾರೆ.

ನ್ಯೂಸ್ 18-ಇಂಡಿಯಾ ವಾಹಿನಿಯ panel discussion

ನ್ಯೂಸ್ 18-ಇಂಡಿಯಾ ವಾಹಿನಿಯ panel discussion

ನ್ಯೂಸ್ 18-ಇಂಡಿಯಾ ವಾಹಿನಿಯ panel discussion ನಲ್ಲಿ ಬಿಜೆಪಿಯ ಸಂಬಿತ್ ಪಾತ್ರ, ಕಾಂಗ್ರೆಸ್ಸಿನ ಅಖಿಲೇಶ್ ಪ್ರತಾಪ್, ಸಮಾಜವಾದಿ ಪಕ್ಷದ ಮುಖಂಡ, ಮೌಲಾನ ಅಬ್ದುರ್ ರೆಹಮಾನ್ ಆಬಿದ್ ಸೇರಿದಂತೆ ಆರು ಜನ ಭಾಗವಹಿಸಿದ್ದರು. ರಾಮ, ರಾವಣ, ಮೋದಿ ಎಲ್ಲರಿಗೂ ಜನ್ಮ ನೀಡಿದ್ದು ಅಲ್ಲಾಹ್ ಎನ್ನುವ ಮಾತನ್ನು ಮುಲ್ಲಾ ರೆಹಮಾನ್ ಈ ಸಂದರ್ಭದಲ್ಲಿ ಹೇಳಿದರು.

ನಾನು, ನೀವು, ಮೋದಿ, ಈ ಸ್ಟುಡಿಯೋದಲ್ಲಿ ಇರುವ ಎಲ್ಲರೂ ಅಲ್ಲಾಹ್ ಸೃಷ್ಟಿ

ನಾನು, ನೀವು, ಮೋದಿ, ಈ ಸ್ಟುಡಿಯೋದಲ್ಲಿ ಇರುವ ಎಲ್ಲರೂ ಅಲ್ಲಾಹ್ ಸೃಷ್ಟಿ

ದಯವಿಟ್ಟು ರಾಮ ಮತ್ತು ಅಲ್ಲಾಹ್ ಗೆ ಹೋಲಿಕೆ ಮಾಡುವ ಸಾಹಸವನ್ನು ಯಾವತ್ತೂ ಮಾಡಬೇಡಿ. ಶ್ರೀರಾಮ, ನಾನು, ನೀವು, ಮೋದಿ, ಈ ಸ್ಟುಡಿಯೋದಲ್ಲಿ ಇರುವ ಎಲ್ಲರನ್ನೂ ಅಲ್ಲಾಹ್ ಸೃಷ್ಟಿಸಿದ್ದು ಎನ್ನುವ ಮಾತನ್ನು ನೇರಪ್ರಸಾರದಲ್ಲಿ ಮುಲ್ಲಾ ಅಬ್ದುರ್ ರೆಹಮಾನ್ ಹೇಳಿದ್ದಾರೆ.

ಮೌಲಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ

ಮೌಲಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ

ಮೌಲಿಯ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಸಂಬಿತ್ ಪಾತ್ರ, ಅಲ್ಲಾಹ್ ಬಗ್ಗೆ ನಮಗೆ ಗೌರವವಿದೆ, ಆದರೆ ಇನ್ನೊಂದು ಸಮುದಾಯದ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡಬೇಡಿ. ರಾಮ, ಶಿವ, ಬ್ರಹ್ಮ ಇವರ ಬಗ್ಗೆ ಲಕ್ಷಾಂತರ ವರ್ಷದ ಇತಿಹಾಸವಿದೆ ಎಂದು ತಿರುಗೇಟು ನೀಡಿದರು.

ದ್ರೌಪದಿ ವಸ್ತ್ರಾಪರಣವಾದಾಗ ನಿಮ್ಮ ದೇವರು ಎಲ್ಲಿದ್ದರು

ದ್ರೌಪದಿ ವಸ್ತ್ರಾಪರಣವಾದಾಗ ನಿಮ್ಮ ದೇವರು ಎಲ್ಲಿದ್ದರು

ನಿಮ್ಮ ಹೇಳಿಕೆಗೆ ನೀವು ಕ್ಷಮೆ ಕೇಳಲೇಬೇಕು, ನಿಮ್ಮ ಪ್ರಕಾರ ಈ ಜಗತ್ತಿನ ಸೃಷ್ಟಿಕರ್ತ ಅಲ್ಲಾಹ್ ಎಂದಾರೆ, ದ್ರೌಪದಿ ವಸ್ತ್ರಾಪರಣವಾದಾಗ ನಿಮ್ಮ ದೇವರು ಎಲ್ಲಿದ್ದರು, ಕಾಪಾಡಬೇಕಿತ್ತಲ್ಲವೇ? ಬ್ರಹ್ಮಾಂಡದ ಇತಿಹಾಸವಿರುವ ಶ್ರೀರಾಮ, ಹಿಂದೂ ಸಂಸ್ಕೃತಿಯ ಬಗ್ಗೆ ಯೋಚಿಸಿ ಮಾತನಾಡಿ ಎಂದು ಬಿಜೆಪಿ ವಕ್ತಾರ ಕೆಂಡಕಾರಿದ್ದಾರೆ. (ಚಿತ್ರದಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ)

ಭಕ್ತಿಯಿಂದ ಕಾಂಗ್ರೆಸ್ಸಿಗೆ ಶಕ್ತಿ ಸಿಗುತ್ತಾ ಎನ್ನುವ ವಿಷಯದ ಬಗ್ಗೆ ಚರ್ಚೆ

ಭಕ್ತಿಯಿಂದ ಕಾಂಗ್ರೆಸ್ಸಿಗೆ ಶಕ್ತಿ ಸಿಗುತ್ತಾ ಎನ್ನುವ ವಿಷಯದ ಬಗ್ಗೆ ಚರ್ಚೆ

ಭಕ್ತಿಯಿಂದ ಕಾಂಗ್ರೆಸ್ಸಿಗೆ ಶಕ್ತಿ ಸಿಗುತ್ತಾ ಎನ್ನುವ ವಿಷಯದ ಬಗ್ಗೆ ಮಾತನಾಡುತ್ತಾ ಬಿಜೆಪಿಯ ಸಂಬಿತ್ ಪಾತ್ರ, ಭಕ್ತಿ ಎಂದು ಮುಖವಾಡ ಹಾಕಿಕೊಂಡು ಹೋಗುವ ಇವರೆಲ್ಲಾ ಪಕ್ಕಾ ನಕಲಿಗಳು. ಹಿಂದೂ ಸಂಸ್ಕೃತಿ ಅವಹೇಳನಗೊಳ್ಳುತ್ತಿದ್ದಾಗ ಇವರೆಲ್ಲಾ ಎಲ್ಲಿ ಹೋಗಿದ್ದರು ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಗುಜರಾತ್ ಪ್ರವಾಸಕ್ಕೆ ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+