ಮದ್ಯಪ್ರಿಯರಿಗೆ ಬಿಗ್ ಶಾಕ್; ಜುಲೈ 13ರಿಂದ 15ರ ವರೆಗೂ ಬಾರ್‌ಗಳೆಲ್ಲಾ ಬಂದ್!
ಈಗಾಗಲೇ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ ಹಲವೆಡೆ ವಿವಿಧ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಈ ಭಾಗದಲ್ಲಿ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಸೇರಿದಂತೆ ಬಾರ್‌ಗಳನ್ನು ಜುಲೈ 13ರಿಂದ 15ರ ವರೆಗೂ ಮುಚ್ಚಲಾಗುತ್ತದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಹಲವೆಡೆ ಈಗಾಗಲೇ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಹಾಗೆಯೇ ಇದೀಗ ತೆಲಂಗಾಣದಲ್ಲಿ ಬೋನಾಲು ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ವೇಳೆ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆಸ. ಆದರೆ ಇದು, ತೆಲಂಗಾಣದಲ್ಲಿ ಅಲ್ಲ, ಹೈದರಾಬಾದ್‌ನ ಸಿಕಂದರಾಬಾದ್ ಪ್ರದೇಶದಲ್ಲಿ ಮಾತ್ರ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇವರನ್ನು ಹೆಚ್ಚು ಪೂಜಿಸುವ ಹೈದರಾಬಾದ್‌ನಲ್ಲಿಯೂ ಕೂಡ ಅಪಾರ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತಿದೆ. ಈ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ, ಬೋನಾಲು ಜಾತ್ರೆಯ ವೇಳೆ ಮದ್ಯದ ಅಂಗಡಿಗಳನ್ನು ಕ್ಲೋಸ್ ಮಾಡಲಾಗುತ್ತದೆ. ಹೈದರಾಬಾದ್‌ನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಭಾನುವಾರ ನಡೆಯಲಿರುವ ಬೋನಾಲು ಜಾತ್ರೆಯ ಸಮಯದಲ್ಲಿ ಎರಡು ದಿನಗಳ ಕಾಲ ವೈನ್ ಶಾಪ್‌ಗಳನ್ನು ಮುಚ್ಚಲಾಗುವುದು ಎಂದು ಅಬಕಾರಿ ಇಲಾಖೆ ಘೋಷಣೆ ಮಾಡಿದೆ. ಆದರೆ, ಇದು ಇಡೀ ಹೈದರಾಬಾದ್ ಅಲ್ಲ, ಬದಲಾಗಿ ಲಷ್ಕರ್ ಬೋನಾಲು ನಡೆಯುವ ಸಿಕಂದರಾಬಾದ್ ಪ್ರದೇಶಕ್ಕೆ ಮಾತ್ರ ಅನ್ವಯ ವಆಗುತ್ತಿದೆ.
ಜುಲೈ 13ರಂದು ಬೆಳಗ್ಗೆ 6ರಿಂದ ಜುಲೈ 15ರಂದು ಬೆಳಗ್ಗೆ 6 ಗಂಟೆಯವರೆಗೆ ಸಿಕಂದರಾಬಾದ್ ಪ್ರದೇಶದಲ್ಲಿ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಮಧ್ಯ, ಪೂರ್ವ ಮತ್ತು ಪಶ್ಚಿಮ ಹೈದರಾಬಾದ್‌ನಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚುವುದಾಗಿ ಸರ್ಕಾರ ಘೋಷಣೆ ಮಾಡಿದೆ.
ಸಿಕಂದರಾಬಾದ್ ಮತ್ತು ಉಜ್ಜಯಿನಿಯಲ್ಲಿ ಮಹಾಕಾಳಿ ಬೋನಾಲ ಸಂದರ್ಭದಲ್ಲಿ ಹೈದರಾಬಾದ್ ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಮದ್ಯದಂಗಡಿಗಳು ಮತ್ತು ಬಾರ್‌ಗಳನ್ನು ಮುಚ್ಚಲಾಗುವುದು ಎಂದು ಪೊಲೀಸ್ ಆಯುಕ್ತ ಸಿ.ವಿ.ಆನಂದ್ ಆದೇಶ ಹೊರಡಿಸಿದ್ದಾರೆ.
ಹೈದರಾಬಾದ್ ಪೊಲೀಸ್ ಕಮಿಷನರೇಟ್‌ನ ಕೇಂದ್ರ ವಲಯದ ಗಾಂಧಿ ನಗರ, ಚಿಲುಕಲ್‌ಗೂಡ, ಲಾಲಾಗೂಡ, ಪೂರ್ವ ವಲಯದ ಚಿಲುಕಲ್‌ಗುಡ ಪ್ರದೇಶದ ವರಸೀಗುಡ, ಉತ್ತರ ವಲಯದ ಬೇಗಂಪೇಟೆ, ಗೋಪಾಲಪುರಂ, ತುಕಾರಾಂ ಗೇಟ್, ಗೋಪಾಲಪುರಂ ಪ್ರದೇಶದ ಮಾರೆಡುಪಲ್ಲಿ, ಮಹಾಂಕಳಿ ಪ್ರದೇಶದ ಮಹಾಂಕಳಿ ಪ್ರದೇಶ, ರಾಮಗೋಪಾಲಪೇಟೆ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಮದ್ಯದಂಗಡಿಗಳು ಕ್ಲೋಸ್ ಆಗಲಿವೆ.












Click it and Unblock the Notifications