ಶುಕ್ರವಾರದಿಂದ ಗೋವಾದಲ್ಲಿ ಹಿಂದೂ ಅಧಿವೇಶನ
ಬೆಂಗಳೂರು, ಜೂ. 19 : ಅಖಿಲ ಭಾರತೀಯ ಹಿಂದೂ ಅಧಿವೇಶನ ಆರು ದಿನಗಳ ಕಾಲ ಗೋವಾದಲ್ಲಿ ನಡೆಯಲಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಈ ಅಧಿವೇಶನವನ್ನು ಆಯೋಜಿಸಲಾಗಿದ್ದು, ಜೂ.20ರ ಶುಕ್ರವಾರ ಅಧಿವೇಶನಕ್ಕೆ ಚಾಲನೆ ಸಿಗಲಿದೆ.
ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದುತ್ವ ನಿಷ್ಠ ಸಂಘಟನೆಗಳು ಹಾಗೂ ಸಂಪ್ರದಾಯಗಳನ್ನು ಒಂದೇ ವ್ಯಾಸಪೀಠದಲ್ಲಿ ಕರೆತರುವುದಕ್ಕೆ ಈ ಅಧಿವೇಶನ ಸಹಕಾರಿಯಾಗಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಪ್ರೊ.ಡಾ.ಚಾರುದತ್ತ ಪಿಂಗಳಕಿ ಅವರು ಹೇಳಿದ್ದಾರೆ.

ಅಖಿಲ ಭಾರತೀಯ ಹಿಂದೂ ಅಧಿವೇಶನಕ್ಕೆ ಜೂ.20ರ ಶುಕ್ರವಾರ ಚಾಲನೆ ದೊರೆಯಲಿದ್ದು, ಜೂ.26ರವರೆಗೆ ಅಧಿವೇಶನ, ಪೋಂಡಾದ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾರ್ಥಿರಾಜ ಸಭಾಗೃಹದಲ್ಲಿ ನಡೆಯಲಿದೆ. ಹಿಂದೂ ಧರ್ಮ ವಿರೋಧಿ ಷಡ್ಯಂತ್ರಗಳು ಮತ್ತು ಹಿಂದೂ ಧರ್ಮೀಯರ ಮೇಲಿನ ಅನ್ಯಾಯ ಹಾಗೂ ದೌರ್ಜನ್ಯ ತಡೆಗಟ್ಟಲು ಈ ಅಧಿವೇಶನ ಸಹಕಾರಿಯಾಗಲಿದೆ ಎಂದು ಪ್ರೊ.ಡಾ.ಚಾರುದತ್ತ ಪಿಂಗಳಜಿ ತಿಳಿಸಿದ್ದಾರೆ. [ಅಧಿವೇಶನವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]
20 ರಾಜ್ಯದ ಅಭ್ಯರ್ಥಿಗಳು : ಆರು ದಿನಗಳ ಈ ಅಧಿವೇಶನದಲ್ಲಿ ದೇಶದ 20 ರಾಜ್ಯಗಳು ಮತ್ತು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಅಮೆರಿಕ ಸೇರಿದಂತೆ 125ಕ್ಕೂ ಹೆಚ್ಚು ದೇಶಗಳ ಹಿಂದೂ ಸಂಘಟನೆಗಳು ಹಾಗೂ 360 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಅಧಿವೇಶವನ್ನು ಬೆಳಗ್ಗೆ 10 ಗಂಟೆಯಿಂದ 12.30ರವರೆಗೆ ಮತ್ತು ಸಂಜೆ 5 ರಿಂದ 5.30ರವೆರೆಗೆ http://www.hindujagruti.org/ ಮೂಲಕ ನೇರ ಪ್ರಸಾರಮಾಡಲಾಗುತ್ತದೆ.
ಹಿಂದೂ ಧರ್ಮ ಹಾಗೂ ಧರ್ಮೀಯರ ಹಿತರಕ್ಷಣೆಗಾಗಿ ರಾಮಸೇತುವೆ, ದೇವನದಿ, ಗಂಗೆ ಮುಂತಾದ ಹಿಂದೂಗಳ ಗೌರವದ ಪ್ರತೀಕಗಳ ರಕ್ಷಣೆ, ಗೋ ಪಾಲನೆ ಮತ್ತು ರಕ್ಷಣೆ, ದೇವಸ್ಥಾನ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆ, ಪಾಶ್ಚಾತ್ಯ ಸಂಸ್ಕೃತಿಯ ಪ್ರತಿಕಾರ ಸಂಕಷ್ಟಕ್ಕೀಡಾದ ಹಿಂದೂಗಳ ಪುನರ್ವಸತಿ, ಹಿಂದೂ ಸಮಾಜಕ್ಕೆ ಸ್ವ ರಕ್ಷಣಾ ತರಬೇತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆರು ದಿನದ ಈ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.












Click it and Unblock the Notifications