ನನ್ನ ಮಗಳ ನಗ್ನ ಫೋಟೋ ಕೇಳಿದ್ರು: ಸೈಬರ್ ಕ್ರೈಂ ಬಗ್ಗೆ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಮುಂಬೈ, ಅಕ್ಟೋಬರ್ 04: ಇತ್ತೀಚೆಗೆ ಸೈಬರ್ ವಂಚಕರು ಸಾಮಾನ್ಯರ ಜೊತೆಗೆ ಸೆಲೆಬ್ರೆಟಿಗಳಿಗೆ, ಅವರ ಮಕ್ಕಳಿಗೂ ಗಾಳ ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ನಟ ಉಪೇಂದ್ರ ಮತ್ತವರ ಪತ್ನಿ ಪ್ರಿಯಾಂಕ ಅವರ ಮೊಬೈಲ್ ಹ್ಯಾಕ್ ಮಾಡಿ, ಆಪ್ತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದ ಘಟನೆ ನಡೆದಿತ್ತು. ಇದೀಗ ಗೇಮಿಂಗ್ ಹೆಸರಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುತ್ರಿಯ ನಗ್ನ ಫೋಟೋ ಕೇಳಿದ್ದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಹೌದು, ತನ್ನ ಹದಿ ಹರೆಯದ 13 ವರ್ಷದ ಮಗಳು ಎಂದಿನಂತೆ ಆನ್‌ಲೈನ್‌ನಲ್ಲಿ ಗೇಮ್ ಆಡುತ್ತಿದ್ದಳು. ಆಗ ದುಷ್ಕರ್ಮಿಯೊಬ್ಬ ನನ್ನ ಮಗಳ ನೂಡ್ (ನಗ್ನ) ಫೋಟೋ ಕಳುಹಿಸುವಂತೆ ಕೇಳಿದ್ದ ಎಂದು ನಟ ಅಕ್ಷಯ್ ಕುಮಾರ್ ಅವರು ತಿಳಿಸಿದ್ದಾರೆ. ಈ ಘಟನೆ ನಡೆದು ಕೆಲವು ತಿಂಗಳಾಗಿವೆ ಎಂದು ಅವರು ಮುಂಬೈನಲ್ಲಿ ನಡೆದ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

Akshay Kumar Urges Cyber Safety Classes in Schools After Daughter s Online Incident

"ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ಒಂದು ಸಣ್ಣ ಘಟನೆ ನಡೆಯಿತು. ಅದನ್ನು ನಾನು ನಿಮ್ಮೆಲ್ಲರೆದುರು ಹೇಳಲು ಬಯಸುತ್ತೇನೆ. ಇಂದು ಆನ್‌ಲೈನ್‌ನಲ್ಲಿ ನೀವು ಯಾರೊಂದಿಗೆ ಬೇಕಾದರೂ ವಿಡಿಯೋ ಗೇಮ್ ಆಡಬಹುದು. ಅಷ್ಟು ಗೇಮ್‌ಗಳಿವೆ. ನೀವು ಅಪರಿಚಿತರ ಜೊತೆಗೆ ಆಟವಾಡುತ್ತಿರುವ ಕೆಲವೊಮ್ಮೆ ಅವರಿಂದ ಸಂದೇಶಗಳು ಬರಬಹುದು. ನನ್ನ ಮಗಳು ಅಡುವಾಗ ಅದೇ ರೀತಿ ಆಯಿತು.'

"ಕೆಲವು ತಿಂಗಳ ಹಿಂದೆ ನನ್ನ ಮಗಳು ಅದೇ ರೀತಿ ವಿಡಿಯೋ ಗೇಮ್ ಆಡುತ್ತಿದ್ದಳು. ಆಗ ಆ ಕಡೆಯಿಂದ (ದುಷ್ಕರ್ಮಿ) ನೀವು ಒಂದು ಸಂದೇಶ ಬಂತು. ನೀವು ಗಂಡೋ? ಹೆಣ್ಣೋ? ಕೇಳಲಗಿತ್ತು. ಅದಕ್ಕೆ ನನ್ನ ಗಮಳು ಹೆಣ್ಣು (ಫಿಮೇಲ್) ಎಂದು ಉತ್ತರಿಸಿದ್ದಾರೆ. ತದನಂತರ ದುಷ್ಕರ್ಮಿ ಮತ್ತೊಂದು ಸಂದೇಶ ಕಳುಹಿಸಿದ್ದಾನೆ. ನಿಮ್ಮ ನಗ್ನ ಚಿತ್ರಗಳನ್ನು ನನಗೆ ಕಳುಹಿಸಬಹುದೇ? ಎಂದು ಕೇಳಿದ್ದಾನೆ. ಈ ಸಂದೇಶ ನೋಡುತ್ತಿದ್ದಂತೆ ನನ್ನ ಮಗಳು ವಿಡಿಯೋ ಗೇಮ್ಸ್ ಎಲ್ಲವನ್ನು ಆಫ್ ಮಾಡಿಟ್ಟು ತನ್ನ ತಾಯಿ ಬಳಿ ಹೋಗಿ ನಡೆದ ಸಂಗತಿ, ವಿವರಿಸಿದ್ದಾಳೆ' ಎಂದು ನಟ ಅಕ್ಷಯ್ ಕುಮಾರ್ ವಿವರಿಸಿದ್ದಾರೆ.

ಮುಖ್ಯಮಂತ್ರಿ ಬಳಿ ಅಕ್ಷಯ್ ಕುಮಾರ್ ಮನವಿ ಏನು?

"ಇಂತಹ ಸಂಗತಿಗಳು ಈ ರೀತಿ ಆರಂಭವಾಗುತ್ತವೆ. ಸೈಬರ್ ಕ್ರೈಂ ಸಹ ಬೇರೆ ಬೇರೆ ರೀತಿಯಲ್ಲಿ ಆರಂಭಗೊಳ್ಳುತ್ತಿದೆ. ಗೇಮಿಂಗ್ಸ್ ಮೂಲಕ ಅನೇಕ ಮಹಿಳೆಯರಿಗೆ ಇಂತಹ ವಂಚನೆ, ತೊಂದರೆ ಆಗಿರಬಹುದು. ಇದೆಲ್ಲವು ಸೈಬರ್ ಅಪರಾಧದ ಒಂದು ಭಾಗವೂ ಆಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಏಳನೇ, ಎಂಟನೇ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಲ್ಲಿವಿದ್ಯಾರ್ಥಿಗಳಿಗೆ ಪ್ರತಿ ವಾರಕ್ಕೆ ಒಂದು ತರಗತಿ ಸೈಬರ್ ಅಪರಾಧ, ಹಾಗೆಂದರೇನು? ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ?, ಸೈಬರ್ ಕ್ರೈಂ ಆದಾಗ ಏನು ಮಾಡಬೇಕು? ' ಎಂಬುದೆಲ್ಲದರಕುರಿತು ಹೇಳಿಕೊಡಬೇಕು.

"ಈ ಬಗ್ಗೆ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಲ್ಲಿ ವಿನಂತಿಸುತ್ತೇನೆ, ತರಗತಿಗಳಲ್ಲಿ ಮಕ್ಕಳಿಗೆ ಅದರ ಬಗ್ಗೆ ವಿವರಿಸಬೇಕು. ಈ ಅಪರಾಧವು ಬೀದಿ ಅಪರಾಧಕ್ಕಿಂತ ದೊಡ್ಡದಾಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಇಂತಹ ಅಪರಾಧಗಳನ್ನು ತಡೆಯಬೇಕು. ಮಕ್ಕಳನ್ನು, ಭವಿಷ್ಯ ಕಾಪಾಡಬೇಕು' ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+