ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಅಖಿಲೇಶ್ ಯಾದವ್ ಪುನರಾಯ್ಕೆ
ಆಗ್ರಾ, ಅಕ್ಟೋಬರ್ 5: ಐದು ವರ್ಷಗಳ ಅವಧಿಗೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಆಗ್ರಾದಲ್ಲಿ ಇಂದು ನಡೆದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಸಮಾಜವಾದಿ ನಾಯಕ ರಾಮ್ ಗೋಪಾಲ್ ಯಾದವ್ ಈ ಘೋಷಣೆ ಮಾಡಿದ್ದಾರೆ.

ಈ ಹಿಂದೆ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಯ ಅವಧಿ ಮೂರು ವರ್ಷಗಳಾಗಿತ್ತು. ಇದೀಗ ಈ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಲಾಗಿದೆ.
ಐದು ವರ್ಷದ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ 2019ರ ಲೋಕಸಭೆ ಚುನಾವಣೆ ಮತ್ತು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿಯನ್ನು 44 ವರ್ಷದ ಅಖಿಲೇಶ್ ಯಾದವ್ ಅವರೇ ಮುನ್ನಡೆಸಲಿದ್ದಾರೆ.
ಕಳೆದ ಉತ್ತರ ಪ್ರದೇಶ ಚುನಾವಣೆವರೆಗೂ ಸಮಾಜವಾದಿ ಪಕ್ಷದ ನೇತೃತ್ವವನ್ನು ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ಯಾದವ್ ವಹಿಸಿದ್ದರು. ನಂತರ ನಡೆದಿದ್ದ ಕೌಟುಂಬಿಕ ಕದನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಖಿಲೇಶ್ ಯಾದವ್ ಬಂದು ಕೂತಿದ್ದರು.












Click it and Unblock the Notifications