ಕಾರಿನ ಮುಂಭಾಗದ ಆಸನಗಳಿಗೆ ಏರ್‌ಬ್ಯಾಗ್ ಅಳವಡಿಕೆ ಕಡ್ಡಾಯ: ಕೇಂದ್ರ
ನವದೆಹಲಿ, ಡಿಸೆಂಬರ್ 30:ಕಾರಿನ ಮುಂಭಾಗದ ಆಸನಗಳಿಗೆ ಏರ್‌ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
1989ರ ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.ಈ ಕುರಿತು ಡಿ. 28ರಂದು ಕರಡು ಅಧಿಸೂಚನೆ ಹೊರಡಿಸಲಾಗಿದ್ದು ಸಲಹೆ ಸೂಚನೆ ಹಾಗೂ ಆಕ್ಷೇಪಣೆ ಸಲ್ಲಿಸಲು ಮೂವತ್ತು ದಿನಗಳ ಸಮುಯಾವಕಾಶ ನೀಡಲಾಗಿದೆ.
ಉಪ-ನಿಯಮ (9)ರ ಅಡಿ ಇರುವ ಮಾಹಿತಿಯಷ್ಟೇ ಅಲ್ಲದೆ 2021ರ ಏಪ್ರಿಲ್ 01ರಂದು ಮತ್ತು ಆ ನಂತರ ತಯಾರಾದ ಹೊಸ ಮಾದರಿಯ ಯಾವುದೇ ವಾಹನವಿದ್ದರೂ, ಮತ್ತು ಅಸ್ತಿತ್ವದಲ್ಲಿರುವ ಮಾದರಿಗಳ ಸಂದರ್ಭದಲ್ಲಿ, 2021ರ ಜೂನ್ 01ರಂದು ಹಾಗೂ ಆನಂತರ ತಯಾರಾದ ಯಾವುದೇ ವಾಹನಗಳಿದ್ದರೂ ಚಾಲಕನನ್ನು ಹೊರತುಪಡಿಸಿದಂತೆ ಮುಂಭಾಗದಲ್ಲಿ ವ್ಯಕ್ತಿಗಳು ಕೂರುವ ಆಸನದಲ್ಲಿ ಏರ್‌ಬ್ಯಾಗ್ ಅಳವಡಿಸುವುದು.

ಅಂತಹ ಏರ್‌ಬ್ಯಾಗ್‌ನ ಅರ್ಹತೆಯು ಬಿಐಎಸ್ ಕಾನೂನಿನಡಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಗದಿಪಡಿಸುವ ಮಾನದಂಡಗಳ ಅಧಿಸೂಚನೆ ಹೊರಬೀಳುವವರೆಗೆ ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ 2016ರ ಎಐಎಸ್ 145ರ ಪ್ರಕಾರ ಇರಲಿದೆ.
ಏಪ್ರಿಲ್ 2021ರ ನಂತರ ಹೊಸ ಮಾದರಿ ವಾಹನಗಳಿಗೆ ಮತ್ತು ಜೂನ್ 2021ರ ನಂತರ ಅಸ್ತಿತ್ವದಲ್ಲಿರುವ ವಾಹನ ಮಾದರಿಗಳಿಗೆ ಏರ್ ಬ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.












Click it and Unblock the Notifications