ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಿಂದ ಮುಂಬೈಗೂ ಕಾಲಿಟ್ಟ ವಾಯುಮಾಲಿನ್ಯ: ಆತಂಕದಲ್ಲಿ ಜನ

|
Google Oneindia Kannada News

ಮುಂಬೈ ಡಿಸೆಂಬರ್ 19: ವಾಯುಮಾಲಿನ್ಯ ದೆಹಲಿಯಿಂದ ಸದ್ಯ ಮುಂಬೈಗೂ ಕಾಲಿಟ್ಟಿದೆ. ಮುಂಬೈನಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು ಜನರನ್ನು ಆತಂಕಕ್ಕೆ ತಳ್ಳಿದೆ. ಮುಂಬೈನಲ್ಲಿರುವ ವಾಹನಗಳು ಮತ್ತು ಕಾರ್ಖಾನೆಗಳಿಂದ ಹೊರಬರುವ ಹೊಗೆ ಅಪಾಯಕಾರಿಯಾಗಿಲ್ಲ. ಮುಂಬೈ ನಿವಾಸಿಗಳು ಅವುಗಳಿಂದ ವಾಯು ಮಾಲಿನ್ಯವನ್ನು ಎದುರಿಸುತ್ತಿಲ್ಲ. ಆದರೆ ಸಮುದ್ರದ ತಂಗಾಳಿಯಿಂದಾಗಿ ಮಾಲಿನ್ಯ ದೂರವಾಗುತ್ತಿದ್ದು, ನಗರದ ನಿವಾಸಿಗಳು ಆತಂಕ ಪಡಬೇಕಾಗಿಲ್ಲ.

ಆದರೆ ಈ ಬಾರಿ ಸಮುದ್ರದ ಗಾಳಿಯ ಸ್ವರೂಪವೇ ಬದಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಮುಂಬೈ ನಿವಾಸಿಗಳು ಕಲುಷಿತ ಗಾಳಿಯನ್ನು ಉಸಿರಾಡಬೇಕಾಗಿದೆ. ಕಳೆದ ಹಲವು ದಿನಗಳಿಂದ ಮುಂಬೈನ ಹವಾ ದೆಹಲಿಗಿಂತ ಕೆಟ್ಟದಾಗಿದೆ. ಸಮುದ್ರದಿಂದ ಬೀಸುವ ಗಾಳಿ ಗಾಳಿಯಲ್ಲಿರುವ ಮಾಲಿನ್ಯಕಾರಕಗಳನ್ನು ಒಯ್ಯುತ್ತದೆ. ಮೂರ್ನಾಲ್ಕು ದಿನಗಳ ಅಂತರದಲ್ಲಿ ಗಾಳಿಯು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತದೆ. ಗಾಳಿಯ ದಿಕ್ಕನ್ನು ಬದಲಾಯಿಸುವ ಈ ಚಕ್ರ ಮೂರರಿಂದ ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಮುಂಬೈನ ಗಾಳಿಯು ತುಲನಾತ್ಮಕವಾಗಿ ಶುದ್ಧವಾಗಿರುತ್ತದೆ. ಆದರೆ ಈ ಬಾರಿ ಈ ಚಕ್ರ ತಿರುಗಿದೆ.

ಮುಂಬೈನಲ್ಲಿ ತಾಪಮಾನ ಹೆಚ್ಚಳ

ಮುಂಬೈನಲ್ಲಿ ತಾಪಮಾನ ಹೆಚ್ಚಳ

ಸಮುದ್ರದಿಂದ ಬಂದು ಸಮುದ್ರದ ಕಡೆಗೆ ಹೋಗುವ ಗಾಳಿಯು ಹೆಚ್ಚು ಸಮಯ ತೆಗೆದುಕೊಂಡಿದೆ. ಮೂರರಿಂದ ನಾಲ್ಕು ದಿನಗಳವರೆಗೆ ಸಮುದ್ರ ಕಡೆಗೆ ಸಾಗಬೇಕಾಗಿದ್ದ ಗಾಳಿ ಏಳರಿಂದ ಹತ್ತು ದಿನಕ್ಕೆ ಹೆಚ್ಚಿದೆ. ಆದ್ದರಿಂದ ಮಾಲಿನ್ಯಕಾರಕಗಳು ಮುಂಬೈನ ಗಾಳಿಯಲ್ಲಿ ಉಳಿದುಕೊಂಡಿವೆ. ಜನರು ಕೊಳಕು ಗಾಳಿಯನ್ನು ಉಸಿರಾಡಬೇಕಾಗಿದೆ. ಕಳೆದ ಡಿಸೆಂಬರ್ 5 ರಿಂದ, ಎಕ್ಯೂಐ ಸೂಚ್ಯಂಕದ ಪ್ರಕಾರ ಮುಂಬೈನ ಗಾಳಿಯು ಅತ್ಯಂತ ಕಳಪೆ ವಿಭಾಗದಲ್ಲಿದೆ. ಈ ಕೆಟ್ಟ ಗಾಳಿ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ.

ಮುಂಬೈನಲ್ಲಿ ಗಾಳಿಯ ವೇಗ ಈ ವರ್ಷ ಗಮನಾರ್ಹವಾಗಿ ಕಡಿಮೆಯಾಗಿದೆ. ಮಾಲಿನ್ಯಕಾರಕಗಳನ್ನು ಸಾಗಿಸುವ ಸಾಮಾರ್ಥ್ಯವನ್ನು ಕಡಿಮೆಯಾಘಿದೆ. ಗಾಳಿಯ ಗುಣಮಟ್ಟವನ್ನು ಅಳೆಯುವ SAFARನ ಮಾಜಿ ನಿರ್ದೇಶಕ ಡಾ ಗುಫ್ರಾನ್ ಬೇಗ್ ಪ್ರಕಾರ, ಇದಕ್ಕೆ ಕಾರಣ ಅರ್ಥವಾಗುತ್ತಿಲ್ಲ. ಆದರೆ ಈ ವರ್ಷ ಗಾಳಿಯ ವೇಗ ಗಮನಾರ್ಹವಾಗಿ ಕಡಿಮೆಯಾಗಿದೆ, ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಆಳವಾದ ಅಧ್ಯಯನದ ಅಗತ್ಯವಿದೆ ಎಂದಿದ್ದಾರೆ.

ಮುಂಬೈನಲ್ಲಿ ಮಾಲಿನ್ಯಕಾರಕಗಳು ಹೆಚ್ಚಳ

ಮುಂಬೈನಲ್ಲಿ ಮಾಲಿನ್ಯಕಾರಕಗಳು ಹೆಚ್ಚಳ

ಮುಂಬೈನಲ್ಲಿ ಗಾಳಿಯು ಕೆಲವು ದಿನಗಳವರೆಗೆ ಭೂಮಿಯಿಂದ ಸಮುದ್ರದ ಕಡೆಗೆ ಸಾಗುತ್ತದೆ. ನಂತರ ಕೆಲವು ದಿನಗಳವರೆಗೆ ಅದು ಸಮುದ್ರದಿಂದ ಭೂಮಿಯ ಕಡೆಗೆ ಸಾಗುತ್ತದೆ. ಯಾವಾಗ ಗಾಳಿಯು ಭೂಮಿಯಿಂದ ಸಮುದ್ರಕ್ಕೆ ಚಲಿಸುವುದಿಲ್ಲವೋ, ಆಗ ಗಾಳಿಯಲ್ಲಿರುವ ಕೊಳಕು ಇಲ್ಲಿಯೇ ಉಳಿಯುತ್ತದೆ. ಗಾಳಿಯ ದಿಕ್ಕು ಬದಲಾದಾಗ, ಮಾಲಿನ್ಯಕಾರಕಗಳು ಸಮುದ್ರದ ಕಡೆಗೆ ಚಲಿಸುತ್ತವೆ.

ಈ ವರ್ಷ ಸಮುದ್ರದ ಕಡೆಯಿಂದ ಬಂದು ಹೋಗುವ ಗಾಳಿಯ ಚಕ್ರವೇ ಬದಲಾಗಿದೆ. ಮೂರು-ನಾಲ್ಕು ದಿನಗಳಲ್ಲಿ ಪುನರಾವರ್ತನೆಯಾಗುವ ಬದಲು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಪುನರಾವರ್ತನೆಯಾಗುತ್ತಿದೆ. ಇದರಿಂದಾಗಿ ಮಹಾನಗರದ ಗಾಳಿಯಲ್ಲಿ ಮಾಲಿನ್ಯಕಾರಕಗಳು ಸೇರಿಕೊಂಡಿವೆ. ಈ ರೀತಿಯಾಗಿ ಗಾಳಿಯ ಗುಣಮಟ್ಟ ಹದಗೆಡುತ್ತಿದೆ. ಗಾಳಿ ಬೀಸಿದಾಗಲೂ ಅದರ ವೇಗ ಕಡಿಮೆ ಇರುವುದರಿಂದ ಮಾಲಿನ್ಯಕಾರಕಗಳು ಹೊರಬರಲು ಸಾಧ್ಯವಾಗುತ್ತಿಲ್ಲ.

ಮಾಲಿನ್ಯಕಾರಕಗಳು ಉತ್ಪತ್ತಿಗೆ ಕಾರಣ

ಮಾಲಿನ್ಯಕಾರಕಗಳು ಉತ್ಪತ್ತಿಗೆ ಕಾರಣ

ಈ ಬದಲಾವಣೆಯನ್ನು ಹವಾಮಾನಶಾಸ್ತ್ರಜ್ಞರು ತನಿಖೆ ಮಾಡಬೇಕಾಗಿದೆ ಎಂದು ಡಾ ಬೇಗ್ ಹೇಳಿದರು. ಅದರ ಹಿಂದೆ ಯಾವ ಜಾಗತಿಕ ಕಾರಣವಿದೆ ಎಂಬುದು ಇದೀಗ ನಮಗೆ ತಿಳಿದಿಲ್ಲ. ಇದು ಪೆಸಿಫಿಕ್ ಸಾಗರದ ಮೇಲ್ಮೈಯನ್ನು ಅಸಾಮಾನ್ಯವಾಗಿ ತಂಪಾಗಿಸುವಿಕೆಯಿಂದ ಉಂಟಾಗುತ್ತದೆ ಮತ್ತು ಪ್ರಪಂಚದಾದ್ಯಂತ ಹವಾಮಾನದ ಮೇಲೆ ಪ್ರಭಾವ ಬೀರುತ್ತದೆ. ಇದಲ್ಲದೆ ಅಧ್ಯಯನದ ನಂತರ ತಿಳಿಯಬಹುದಾದ ಕೆಲವು ಕಾರಣಗಳಿವೆ. ಗಾಳಿಯ ವೇಗದಲ್ಲಿನ ಈ ಬದಲಾವಣೆಯು ತಾತ್ಕಾಲಿಕ ಅಥವಾ ದೀರ್ಘಕಾಲೀನವಾಗಿದೆಯೇ ಎಂದು ನಮಗೆ ತಿಳಿದಿಲ್ಲ ಎಂದಿದ್ದಾರೆ.

ವಾಹನಗಳಿಂದ ಹೊರಸೂಸುವಿಕೆ ವಿಶೇಷವಾಗಿ ನಿರ್ಮಾಣ ಚಟುವಟಿಕೆಗಳಲ್ಲಿ ಹೆಚ್ಚಳ, ಮುಂಬೈ ಮೆಟ್ರೋ ಮತ್ತು ಕರಾವಳಿ ರಸ್ತೆ ಯೋಜನೆಗಳು ಸೇರಿದಂತೆ ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ. ಈ ಯೋಜನೆಗಳ ಕಾಮಗಾರಿಯು ಕಳೆದ ಕೆಲವು ತಿಂಗಳುಗಳಿಂದ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇವುಗಳಿಂದ ಹೆಚ್ಚಿನ ಪ್ರಮಾಣದ ಮಾಲಿನ್ಯಕಾರಕಗಳು ಉತ್ಪತ್ತಿಯಾಗುತ್ತಿವೆ.

ದೆಹಲಿಯಂತೆ ಮುಂಬೈನಲ್ಲೂ ಕಲುಷಿತ ಗಾಳಿ

ದೆಹಲಿಯಂತೆ ಮುಂಬೈನಲ್ಲೂ ಕಲುಷಿತ ಗಾಳಿ

ಈ ಯೋಜನೆಗಳಿಂದಾಗಿ ಮಾಲಿನ್ಯಕಾರಕಗಳ ಪ್ರಮಾಣ ಹೆಚ್ಚಾಗಲು ಸಾಧ್ಯ ಎನ್ನುತ್ತಾರೆ ದೇಶದ ಪ್ರಮುಖ ವಾಯು ಗುಣಮಟ್ಟದ ತಜ್ಞ ಹಾಗೂ ಐಐಟಿ ಕಾನ್ಪುರದ ಪ್ರೊಫೆಸರ್ ಎಸ್.ಎನ್.ತ್ರಿಪಾಠಿ. ಏಕೆಂದರೆ ಮುಂಬೈನ ಗಾಳಿಯಲ್ಲಿ PM 10 ರ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದು ನಿರ್ಮಾಣ ಚಟುವಟಿಕೆಗಳ ಪರಿಣಾಮವಾಗಿದೆ. ವಾಹನಗಳು ಮತ್ತು ಕಾರ್ಖಾನೆಗಳು ಇತ್ಯಾದಿಗಳು PM 2.5 ಸೂಕ್ಷ್ಮ ಕಣಗಳ ಪ್ರಮಾಣವನ್ನು ಹೆಚ್ಚಿಸುತ್ತವೆ.

ಕಾರಣ ಏನೇ ಇರಲಿ, ಮುಂಬೈನ ಜನರು ಕಳೆದ ಒಂದು ತಿಂಗಳಿನಿಂದ ದೆಹಲಿಯಂತಹ ಕಲುಷಿತ ಗಾಳಿಯನ್ನು ಎದುರಿಸುತ್ತಿದ್ದಾರೆ. ಅದನ್ನು ತೊಡೆದುಹಾಕಲು ತಕ್ಷಣದ ಮಾರ್ಗವಿಲ್ಲ. ಇದರೊಂದಿಗೆ ಮುಂಬೈನ ವಾತಾವರಣವೂ ಅಸಾಮಾನ್ಯವಾಗಿ ಬಿಸಿ ಏರಿದೆ. ಈ ದಿನಗಳಲ್ಲಿ ದೇಶವು ತೀವ್ರ ಚಳಿಯನ್ನು ಅನುಭವಿಸುತ್ತಿದ್ದರೆ, ಮಹಾರಾಷ್ಟ್ರದ ಮುಂಬೈನ ಸಾಂತಾಕ್ರೂಜ್‌ನಲ್ಲಿ ಶುಕ್ರವಾರ 35.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. IMD ಪ್ರಕಾರ, ಮುಂಬೈನ ಸಾಂತಾಕ್ರೂಜ್‌ನಲ್ಲಿ ದಾಖಲಾದ ತಾಪಮಾನವು ದೇಶದಲ್ಲೇ ಅತಿ ಹೆಚ್ಚು ಆಗಿದೆ. ಸಮುದ್ರದಿಂದ ಬರುವ ಗಾಳಿಯ ಮಾಲಿನ್ಯ ಮತ್ತು ಅಸಾಮಾನ್ಯ ವರ್ತನೆಯಿಂದಲೂ ಈ ಶಾಖವು ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ.

English summary
Air pollution in Mumbai: Increasing air pollution in Mumbai has made people anxious.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X