Air india: ಜುಲೈ 1ರಿಂದಲೇ ಆಫರ್ ಅನ್ವಯ, ಬರೀ ₹833 ಏರ್ ಇಂಡಿಯಾದಲ್ಲಿ ಹಾರಾಡಿ
ಬೆಂಗಳೂರು, ಜೂನ್ 28: ವಿಮಾನಯಾನ ಕೈಗೊಳ್ಳುವವರಿಗೆ ಏರ್‌ಇಂಡಿಯಾ ವಿಶೇಷ ಅವಕಾಶ, ಆಫರ್ ಘೋಷಿಸಿದೆ. ಈ ಮೂಲಕ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕಡಿಮೆ ದರದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.
ಏರ್‌ಇಂಡಿಯಾ ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರಯಾಣಿಕರಿಗೆ ವಿಶೇಷ ಆಫರ್ ನೀಡಿದೆ. ಮುಂದಿನ ಜುಲೈ 1ರಿಂದ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಈ ವಿಮಾನಯಾನ ಸಂಸ್ಥೆ ಸ್ಲ್ಪಾಶ್ ಸೇಲ್ (ಸ್ಪ್ಲಾಶ್ ಸೇಲ್) ಹೆಸರಿನಲ್ಲಿ ಕೇವಲ ₹883ರಿಂದ ವಿಮಾನ ಟಿಕೆಟ್ ನೀಡುತ್ತಿದೆ. ಒಟ್ಟು ಎರಡು ರೀತಿಯ ಟಿಕೆಟ್ ಗಳನ್ನು ನೀಡಲಾಗುತ್ತಿದೆ.

ಈ ಕಡಿಮೆ ಬೆಲೆಗೆ ದೇಶಿಯ ವಿಮಾನಯಾನ ಸೇವೆ ಪಡೆಯುವ ಆಸಕ್ತರಿಗೆ ಟಿಕೆಟ್ ಬುಕ್ಕಿಂಗ್‌ಗೆ ಜೂನ್ 28ರ ಸಂಜೆಯೊಳಗೆ ಅವಧಿ ನೀಡಲಾಗಿದೆ. ನಿಗದಿತ ಸಮಯದೊಳಗೆ ಪ್ರಯಾಣಿಕರು ತಮ್ಮ ತಮ್ಮ ಟಿಕೆಟ್ ಗಳನ್ನು ರೂ. 883ಕೊಟ್ಟು ಬುಕ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಕನ್ವಿನಿಯನ್ಸ್ ಶುಲ್ಕ ಇರುವುದಿಲ್ಲ. ಜೊತೆಗೆ, ಎಕ್ಸ್‌ಪ್ರೆಸ್ ವ್ಯಾಲ್ಯೂ ಫೇರ್ (ಎಕ್ಸ್‌ಪ್ರೆಸ್ ಮೌಲ್ಯ ದರಗಳು) ಟಿಕೆಟ್‌ಗಳ ಬೆಲೆಗಳು ರೂ.1096 ರಿಂದ ಆರಂಭವಾಗಲಿವೆ ಎಂದು ತಿಳಿಸಲಾಗಿದೆ.
ಸೆಪ್ಟಂಬರ್ 30ರ ತನಕ ಪ್ರಯಾಣ
ಟಿಕೆಟ್‌ಗಳನ್ನು ಜೂನ್ 28ರೊಳಗೆ ಬುಕ್ ಮಾಡಿದವರಿಗೆ ಜುಲೈ 1 ರಿಂದ ಸೆಪ್ಟೆಂಬರ್ 30ರ ನಡುವೆ ಯಾವುದೇ ಸಮಯದಲ್ಲಿ ಆದರೂ ವಿಮಾನದಲ್ಲಿ ಪ್ರಯಾಣಿಸಬಹುದು. ಮುಂದಿನ ಮೂರು ತಿಂಗಳಿನಲ್ಲಿ ಯಾವುದೇ ಪ್ರವಾಸವನ್ನು ಯೋಜಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಏರ್ ಎಕ್ಸ್‌ಪ್ರೆಸ್ ವಿಮಾನವು ಲೈಟ್ ಫೇರ್ ಟಿಕೆಟ್‌ಗಳಲ್ಲಿ 350 ರೂಪಾಯಿ ಕನ್ವಿನಿಯನ್ಸ್ ಶುಲ್ಕವನ್ನು ಮನ್ನಾ ಮಾಡಿದೆ. ಹೀಗಾಗಿ ಈ ಪ್ರಯಾಣ ಗ್ರಾಹಕರಿಗೆ ಲಾಭ ಎನ್ನಬಹುದು ಈ ಕನ್ವಿನಿಯನ್ಸ್ ಶುಲ್ಕ ವಿನಾಯಿತಿ ಪಡೆಯಲು, ನೀವು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕೃತ ವೆಬ್‌ಸೈಟ್ www.airindiaexpress.com ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕ್ ಮಾಡಬೇಕಿದೆ ಎಂದು ಕಂಪನಿ ತಿಳಿಸಿದೆ.
ಹಣ ಹಿಂತಿರುಗಿಸುವ ಮಾಹಿತಿ ಏನಿದೆ?
ವಿಮಾನಯಾನ ಪ್ರಯಾಣಿಕರಿಗೆ ಸೀಮಿತ ಅವಧಿಗೆ ಈ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆಫರ್ ಅಡಿ ನೀಡಿರುವ ಟಿಕೆಟ್ ಗಳು ಭರ್ತಿಯಾದರೆ ಅಂದರೆ, ಸೀಟು ಪೂರ್ಣಗೊಂಡರೆ, ನಂತರ ಟಿಕೆಟ್ ಬುಕ್ ಮಾಡುವವರಿಗೆ ಸಾಮಾನ್ಯ ಟಿಕೆಟ್ ನಿಯಮಗಳು ಅನ್ವಯಿಸುತ್ತವೆ. ಇನ್ನೂ ಕಡಿಮೆ ಬೆಲೆಯ ಮೊತ್ತ ಕೊಟ್ಟು ಏರ್ ಇಂಡಿಯಾ ಆಫರ್ ಟಿಕೆಟ್ ಬುಕ್ ಮಾಡಿದವರಿಗೆ ಯಾವುದೇ ಕಾರಣಕ್ಕೂ ರದ್ದಾದರೆ, ಹಣ ಹಿಂತಿರುಗಿಸಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ನಾಡಿದ್ದು ಅಂದರೆ ಜುಲೈ 1ರಿಂದ ಕಡಿಮೆ ಬೆಲೆಯಲ್ಲಿ ದೇಶಿಯ ಮಟ್ಟದಲ್ಲಿ ವಿಮಾನಯಾನಕ್ಕೆ ಸಜ್ಜಾಗಬೇಕಿದೆ. ಈ ರೀತಿ ಆಫರ್ ಕೆಲವು ದಿನಗಳ ಹಿಂದೆ ಘೋಷಣೆ ಆಗಿದ್ದು, ಟಿಕೆಟ್ ಬುಕ್ಕಿಂಗ್ ಶುಕ್ರವಾರಕ್ಕೆ ಅಂತ್ಯವಾಗಿದೆ. ಮುಂದಿನ ಸೆಪ್ಟಂಬರ್ ಅಂತ್ಯದವರೆಗೆ ಕಡಿಮೆ ಬೆಲೆಗೆ ಟಿಕೆಟ್ ಬುಕ್ ಮಾಡಿದವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications