ಭಾರತದಲ್ಲಿ ಆರಂಭವಾಗಲಿದೆ ಮೊದಲ ಫ್ಲೈಯಿಂಗ್ ಸ್ಕೂಲ್: ಏನಿದು, ಇದರ ಪ್ರಯೋಜನ ಏನು?
ದೇಶದ ವಿದ್ಯಾರ್ಥಿಗಳು ಖುಷಿ ಸುದ್ದಿ.. ಅಲ್ಲದೆ ನಮ್ಮದೇ ದೇಶದಲ್ಲಿ ಪೈಲಟ್ ತರಬೇತಿಯನ್ನು ನೀವು ಕಡಿಮೆ ಖರ್ಚಿನಲ್ಲಿ ಪಡೆಯಲು ಇನ್ನು ಮುಂದೆ ಸಾಧ್ಯ. ಈ ನಿಟ್ಟಿನಲ್ಲಿ ಯೋಜನೆ ರೂಪಗೊಂಡಿದ್ದು, ಸ್ವದೇಶದಲ್ಲೇ ಹಾರುವ ಆಸೆಗೆ ಬಣ್ಣ ಬಳೆಯುವ ಕೆಲಸಕ್ಕೆ ಈ ಸಂಸ್ಥೆ ಮುಂದಾಗಿದೆ.
ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಫ್ಲೈಯಿಂಗ್ ಸ್ಕೂಲ್ ಆರಂಭವಾಗಲಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೈಲಟ್ ಆಗುವ ತರಬೇತಿ ನೀಡಲಾಗುತ್ತದೆ. ದೇಶದಲ್ಲಿ ತಲೆ ದೂರುತ್ತಿರುವ ಪೈಲಟ್‌ಗಳ ಸಮಸ್ಯೆಯನ್ನು ನಿವಾರಿಸಲು ಇದು ಸಾಹಯಕ. ದೇಶದ ಮೊದಲ ವಿಮಾನಯಾನ ಶಾಲೆಯನ್ನು ಏರ್ ಇಂಡಿಯಾ ಆಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ.

ಈ ಶಾಲೆಗಾಗಿ ಏರ್ ಇಂಡಿಯಾ ಸ್ಥಳವನ್ನು ಸಹ ನಿಗದಿ ಮಾಡಿದ್ದು, ಮಹಾರಾಷ್ಟ್ರದ ಅಮರಾವತಿಯಲ್ಲಿ ಫ್ಲೈಯಿಂಗ್ ಸ್ಕೂಲ್ ಆರಂಭವಾಗಲಿದೆ. ಈ ಶಾಲೆಯಲ್ಲಿ 180 ಜನರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದ್ದು, ತರಬೇತಿಯ ಬಳಿಕ ಪೈಲೇಟ್‌ಗಳು ಪೈಲಟ್‌ಗಳಾಗಿ ಕೆಲಸ ಆರಂಭಿಸಲಿದ್ದಾರೆ.
ಈ ವಿಮಾನಗಳಲ್ಲಿ ತರಬೇತಿ
ತರಬೇತಿಗಾಗಿ ಕಂಪನಿಯು 34 ವಿಮಾನಗಳನ್ನು ಖರೀದಿಸುತ್ತಿದೆ. ಇದು 30 ಸಿಂಗಲ್ ಎಂಜಿನ್ ಮತ್ತು 4 ಮಲ್ಟಿ ಇಂಜಿನ್ ವಿಮಾನಗಳನ್ನು ಒಳಗೊಂಡಿದೆ. ಸಂಸ್ಥೆಯು ತನ್ನ ತರಬೇತಿ ಫ್ಲೀಟ್‌ಗಾಗಿ ಅಮೇರಿಕನ್ ಕಂಪನಿ ಪೈಪರ್ ಮತ್ತು ಯುರೋಪಿಯನ್ ತಯಾರಕ ಡೈಮಂಡ್‌ನಿಂದ ಸುಮಾರು 30 ಏಕ-ಎಂಜಿನ್ ಮತ್ತು ನಾಲ್ಕು ಬಹು-ಎಂಜಿನ್ ವಿಮಾನಗಳನ್ನು ಆಯ್ಕೆ ಮಾಡಿದೆ.
ಭಾರತ ಸರ್ಕಾರವು ದೇಶದಲ್ಲಿ ವಾಣಿಜ್ಯ ಪೈಲಟ್ ತರಬೇತಿಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತಿದೆ. ದೇಶದ 40% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಇದರ ವೆಚ್ಚ 1.5-2 ಕೋಟಿ ರೂ. ಆಗಿರುತ್ತದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳಿಗೆ ಇದೆ ಸವಾಲು
ಈ ಶಾಲೆಯಲ್ಲಿ ಪ್ರವೇಶಕ್ಕಾಗಿ ಯಾವುದೇ ರೀತಿಯ ಹಾರಾಟದ ಅನುಭವದ ಅಗತ್ಯವಿರುವುದಿಲ್ಲ. ಆದಾಗ್ಯೂ, ಇಲ್ಲಿ ಪ್ರವೇಶಕ್ಕಾಗಿ, ವಿದ್ಯಾರ್ಥಿಯು ಕಠಿಣ ಆಯ್ಕೆ ಪ್ರಕ್ರಿಯೆಯ ಎದುರಿಸಬೇಕಾಗುತ್ತದೆ. ಇದರಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ದೈಹಿಕ ಸಾಮರ್ಥ್ಯದ ಜೊತೆಗೆ ವೈಯಕ್ತಿಕ ಸಂದರ್ಶನವೂ ಸೇರಿರುತ್ತದೆ.
ವಾಯುಯಾನ ತರಬೇತಿ ನಿಯಮಾವಳಿಗಳ ಪ್ರಕಾರ, ಮಹತ್ವಾಕಾಂಕ್ಷಿ ಪೈಲಟ್‌ಗಳು ಪರವಾನಗಿ ಪಡೆಯಲು ಮೊದಲು ಆರಂಭಿಕ ತರಬೇತಿಯನ್ನು ಪೂರ್ಣಗೊಳಿಸಬೇಕು. ಏರ್‌ಬಸ್ A320 ಅಥವಾ ಬೋಯಿಂಗ್ 737 ನಂತಹ ನಿರ್ದಿಷ್ಟ ವಿಮಾನ ಪ್ರಕಾರಗಳನ್ನು ನಿರ್ವಹಿಸಲು ಮತ್ತು ಅಗತ್ಯ ಪರವಾನಗಿ ಅನುಮೋದನೆಗಳನ್ನು ಪಡೆಯಲು ಟೈಪ್-ರೇಟೆಡ್ ತರಬೇತಿಯ ಅಗತ್ಯವಿದೆ. ಇದಕ್ಕಾಗಿ ಏರ್‌ಬಸ್ ಮತ್ತು ಅಮೆರಿಕದ ಎಲ್3 ಹ್ಯಾರಿಸ್ ಸಹಯೋಗದೊಂದಿಗೆ, ವಿಮಾನಯಾನ ಸಂಸ್ಥೆಯು ಗುರ್‌ಗಾಂವ್‌ನಲ್ಲಿ ತನ್ನದೇ ಆದ ತರಬೇತಿ ಸೌಲಭ್ಯವನ್ನು ಸ್ಥಾಪಿಸಿದೆ.
Air India (AI) is planning to establish its own flying school to train pilots in the country. According to a report by ET, a Gurugram-based carrier will set up the training academy in Amravati, Maharashtra#AirIndia #Tata #Pilot #Flying #News #AI #Indiahttps://t.co/emJnr0XOmz pic.twitter.com/s1HYLpGTOM
— Aviation A2z (@Aviationa2z) June 18, 2024
ಬೇಡಿಕೆ ಹೆಚ್ಚು
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪೈಲಟ್‌ಗಳ ಕೊರತೆಯಿದೆ. ತರಬೇತಿಯ ಗುಣಮಟ್ಟದ ಕೊರತೆಯಿದೆ. ಮತ್ತೊಂದೆಡೆ, ಮುಂದಿನ ದಿನಗಳಲ್ಲಿ ದೇಶದಲ್ಲಿ ಪೈಲಟ್‌ಗಳ ಬೇಡಿಕೆ ಹೆಚ್ಚಾಗಲಿದೆ. ಇಂಡಿಗೋ 956 ವಿಮಾನಗಳಿಗೆ, ಏರ್ ಇಂಡಿಯಾ 458 ಮತ್ತು ಆಕಾಶ ಏರ್‌ಲೈನ್ಸ್ 204 ವಿಮಾನಗಳಿಗೆ ಆರ್ಡರ್ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೈಲಟ್ ಗಳ ಬೇಡಿಕೆ ಹೆಚ್ಚಲಿದೆ. ಏರ್ ಇಂಡಿಯಾ ಗುಣಮಟ್ಟದ ತರಬೇತಿಯನ್ನು ನೀಡಿದರೆ ವಿದ್ಯಾರ್ಥಿಗಳು ತರಬೇತಿಗಾಗಿ ದೇಶದಿಂದ ಹೊರಗೆ ಹೋಗುವ ಅವಶ್ಯಕತೆ ಇಲ್ಲ. ಕಡಿಮೆ ಖರ್ಚಿನಲ್ಲಿ ನಮ್ಮದೇ ದೇಶದಲ್ಲಿ ತರಬೇತಿಯನ್ನು ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬಹುದು.












Click it and Unblock the Notifications