Air India Plane Crash: ಟೇಕ್ ಆಫ್ ಆದ ಕೆಲವೊತ್ತಲ್ಲೇ 900 ಅಡಿ ಎತ್ತರದಿಂದ ಬಿದ್ದ ಮತ್ತೊಂದು ಏರ್ ಇಂಡಿಯಾ ವಿಮಾನ
Air India Plane Crash: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ ದುರಂತದಲ್ಲಿ 240ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ವಿಮಾನ ಅವಘಡ ನಡೆದಿದೆ. ಹಾಗಾದ್ರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಹಮದಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 240ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದಾದ ಕೆಲ ದಿನಗಳ ನಂತರ, ಮತ್ತೊಂದು ವಿಮಾನ ಅವಘಡ ಸಂಭವಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ದೆಹಲಿ-ವಿಯೆನ್ನಾಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 187 ತಾಂತ್ರಿಕ ದೋಷ ಹಿನ್ನೆಲೆ ಆಕಾಶದಲ್ಲಿ 900 ಅಡಿಗಳಷ್ಟು ಕೆಳಗಿಳಿದ ಆತಂಕಕಾರಿ ಘಟನೆ ಸಂಭವಿಸಿದೆ. ಈ ಘಟನೆಯು ಜೂನ್ 14, 2025ರಂದು ನಡೆದಿದ್ದು, ಏರ್ ಇಂಡಿಯಾದ ಸುರಕ್ಷತೆಯ ಕುರಿತು ಭಾರೀ ಚರ್ಚೆಗಳು ಆಗುತ್ತಿವೆ. ಮತ್ತೊಂದೆಡೆ ಮತ್ತಷ್ಟು ಆತಂಕವನ್ನ ಹೆಚ್ಚಾಗುವಂತೆ ಮಾಡಿದೆ. ಈ ಘಟನೆಯಿಂದ ಯಾವುದೇ ಜೀವಹಾನಿ ಆಗಿಲ್ಲ. ಆದರೂ, ಇದು ಏರ್ ಇಂಡಿಯಾದ ತಾಂತ್ರಿಕ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳು ಉದ್ಭವವಾಗಿವೆ.
ದೆಹಲಿ ವಿಮಾನ ನಿಲ್ದಾಣದಿಂದ ವಿಯೆನ್ನಾಗೆ ತೆರಳುತ್ತಿದ್ದ ಈ ವಿಮಾನವು ಜೂನ್ 14, 2025ರಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷಕ್ಕೊಳಗಾಯಿತಿ. ವಿಮಾನವು ಆಕಾಶದಲ್ಲಿ 900 ಅಡಿಗಳಷ್ಟು ಕೆಳಗಿಳಿಯಿತು, ಇದಕ್ಕೆ ಹವಾಮಾನ ವೈಪರೀತ್ಯ ಮತ್ತು ತಾಂತ್ರಿಕ ದೋಷಗಳ ಸಂಯೋಜನೆ ಕಾರಣ ಆಗಿರಬಹುದು ಎಂದು ವರದಿ ಆಗಿದೆ. ಆದರೆ, ಪೈಲಟ್ ಸಕಾಲಿಕ ಕ್ರಮದಿಂದಾಗಿ ವಿಮಾನವನ್ನು ಸ್ಥಿರಗೊಳಿದ್ದು, ವಿಯೆನ್ನಾದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಏರ್ ಇಂಡಿಯಾ ವಿಮಾನ AI 187 ದುರಂತದಿಂದ ಯಾವುದೇ ಸಾವು ನೋವುಗಳು ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಇಂತಹ ಘಟನೆಗಳು ಆಗಿರುವುದು ಇದೇ ಮೊದಲೇನಲ್ಲ. ಇಂತಹ ಸುಮಾರು ಘಟನೆಗಳು ಸಂಭವಿಸಿವೆ.
ಹೆಲಿಕಾಪ್ಟರ್ ಪತನ: ಇತ್ತೀಚೆಗಷ್ಟೇ ಉತ್ತರಾಖಂಡ್‌ನಲ್ಲಿ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕ್ಯಾಪ್ಟರ್‌ವೊಂದು ಪತನ ಆಗಿತ್ತು. ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ದುರ್ಮರಣ ಹೊಂದಿದ್ದರು.
ಉತ್ತರಾಖಾಂಡನ ಕೇದಾರನಾಥದ ಬಳಿ ಗೌರಿ ಕೊಂಡ ಅರಣ್ಯದಲ್ಲಿ ಹೆಲಿಕ್ಯಾಪ್ಟರ್ ಪತನ ಆಗಿತ್ತು. ಹೆಲಿಕ್ಯಾಪ್ಟರ್‌ನಲ್ಲಿ ಪೈಲಟ್ ಓರ್ವ ಮಗು ಸೇರಿದಂತೆ 7 ಮಂದಿ ಪ್ರಯಾಣ ಮಾಡುತ್ತಿದ್ದರು. ಘಟನೆಯಲ್ಲಿ ಎಲ್ಲರೂ ದುರ್ಮರಣ ಹೊಂದಿದ್ದರು ಎಂದು ವರದಿಯಾಗಿತ್ತು.
ಗೌರಿ ಕುಂಡ್‌ನಲ್ಲಿ ಕಾಣೆಯಾಗಿದ್ದ ಪತನಗೊಂಡ ಹೆಲಿಕಾಪ್ಟರ್‌ನಲ್ಲಿ 6 ಜನ ಪ್ರಯಾಣಿಕರಿದ್ದರು. ಈ ಘಟನೆ ಕೇದಾರನಾಥ ಧಾಮದಿಂದ ಗುಪ್ತಕಾಶಿಗೆ ಹೋಗುತ್ತಿದ್ದ ವೇಳೆ ನಡೆದಿದ್ದು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದವು.
ಈ ದುರಂತ ಹವಾಮಾನ ವೈಪರೀತ್ಯದದಿಂದ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ರುದ್ರಪ್ರಯಾಗ್ ಜಿಲ್ಲೆಯಲ್ಲಿ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ಹೆಲಿಕಾಪ್ಟರ್ ಹೊತ್ತಿ ಉರಿದಿದೆ. ಘಟನೆ ಕುರಿತು ಕಮೀಷನರ್ ವಿನಯ್ ಶಂಕರ್ ಪಾಂಡೆ ಪ್ರತಿಕ್ರಿಯಿಸಿ, ಹೆಲಿಕ್ಯಾಪ್ಟರ್ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಪೈಲಟ್ ಚೌಹನ್, ಒಂದು ಮಗು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಕೇದಾರನಾಥ್ ದೇವಸ್ಥಾನ ಸಮಿತಿಯ ಸದಸ್ಯರೊಬ್ಬರು ಸಹ ಇದೇ ಹೆಲಿಕಾಪ್ಟರ್‌ನಲ್ಲಿದ್ದರು. ಈ ಹೆಲಿಕಾಪ್ಟರ್ ಆರ್ಯನ್ ಕಂಪನಿಗೆ ಸೇರಿದೆ ಎಂದು ಮಾಹಿತಿ ನೀಡಿದ್ದರು.












Click it and Unblock the Notifications