ವಿಮಾನದಲ್ಲಿ ಪೇಪರ್ ನಿಂದ ಗಾಳಿ ಬೀಸಿಕೊಂಡ ಪ್ರಯಾಣಿಕರುǃ
ಕೋಲ್ಕತ್ತಾ, ಜುಲೈ 03: ಸಾಲದ ಸುಳಿಯಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನದಲ್ಲಿ ಎಸಿ ಕೈಕೊಟ್ಟಿದ್ದರಿಂದ, ಅನೇಕ ಪ್ರಯಾಣಿಕರು ನ್ಯೂಸ್ ಪೇಪರ್ ನಿಂದ ಗಾಳಿ ಬೀಸಿಕೊಂಡ ವಿಡಿಯೋ ಎಲ್ಲೆಡೆ ಹಂಚಿಕೆಯಾಗುತ್ತಿದೆ.
ಪಶ್ವಿಮ ಬಂಗಾಳದ ಬಗ್ದೋರ್ಗ ಏರ್‌ಪೋರ್ಟ್‌ನಿಂದ ಹೊರಟ AI-880 ವಿಮಾನವು ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವಿಮಾನದಲ್ಲಿ ಸುಮಾರು 168 ಜನ ಪ್ರಯಾಣಿಕರಿದ್ದರು.

ಸಂಜೆ 6 ಗಂಟೆಗೆ ಹಾರಾಟ ಆರಂಭಿದ ವಿಮಾನ ಈಗ ಸುದ್ದಿಯಲ್ಲಿದೆ. ವಿಮಾನದಲ್ಲಿ ಎಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅನೇಕರು ದೂರಿದ್ದಾರೆ. ಆದರೆ, ಪರಿಹಾರ ಸಿಗದ ಕಾರಣ, ನ್ಯೂಸ್ ಪೇಪರ್ ಗಳಿಂದ ಗಾಳಿ ಬೀಸಿಕೊಂಡಿದ್ದಾರೆ.
Air India Delhi-Bagdogra flight took off with faulty AC system, passengers protested complaining of suffocation (ANI) pic.twitter.com/rEK3u8cZ3y
— Republic (@republic) July 3, 2017
ಎಸಿ ವ್ಯವಸ್ಥೆ ತೊಂದರೆ ನಡುವೆಯೂ ಸರಿಯಾದ ಸಮಯಕ್ಕೆ ವಿಮಾನವು ನಿಗದಿತ ತಾಣ ತಲುಪಿದೆ. ಪ್ರಯಾಣಿಕರಿಗೆ ತೊಂದರೆಯಾಗಿದ್ದು, ನಿಜ, ಇದಕ್ಕಾಗಿ ವಿಷಾದಿಸುತ್ತೇವೆ, ಎಸಿ ವ್ಯವಸ್ಥೆ ಹದಗೆಟ್ಟಿತ್ತು ಎಂದು ಏರ್ ಇಂಡಿಯಾ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಆದರೆ, ಅನೇಕ ಪ್ರಯಾಣಿಕರು, ವಿಡಿಯೋ, ಚಿತ್ರಗಳನ್ನು ಹಂಚಿಕೊಂಡು ತಮಗಾದ ಅನುಭವವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಡಿದ್ದಾರೆ.












Click it and Unblock the Notifications