ಅಕ್ರಮ ಸಂಬಂಧ: ಸಹೋದ್ಯೋಗಿಯನ್ನೇ ಕೊಂದ ವಾಯುಸೇನಾಧಿಕಾರಿ
ಸಹೋದ್ಯೋಗಿಯನ್ನು ಕೊಂದಿದ್ದಲ್ಲದೆ, ಸತ್ತವನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಆ ಭಾಗಗಳನ್ನು ಬೇರೆ ಬೇರೆ ಪ್ಲಾಸ್ಟಿಕ್ ಕವರ್ ಗಳಲ್ಲಿ ಬಚ್ಚಿಟ್ಟಿದ್ದ ಆರೋಪಿ.
ಬತಿಂಡಾ (ಪಂಜಾಬ್), ಫೆಬ್ರವರಿ 22: ತನ್ನ ಪತ್ನಿಯ ಪ್ರಿಯಕರನನ್ನು ಕೊಂದಿದ್ದ ಆರೋಪದ ಮೇರೆಗೆ ಬಂತಿಂಡಾದ ಪೊಲೀಸರು, ಇಲ್ಲಿನ ಭಿಸಿಯಾನಾ ವಾಯು ನೆಲೆಯ ಅಧಿಕಾರಿಯಾದ ಸುಲೇಶ್ ಕುಮಾರ್ ಹಾಗೂ ಅವರ ಪತ್ನಿಯನ್ನು ಬಂಧಿಸಿದ್ದಾರೆ. ವಿಪಿನ್ ಶುಕ್ಲಾ ಕೊಲೆಯಾದ ದುರ್ದೈವಿ. ಈತನೂ ಭಿಸಿಯಾನಾ ವಾಯುನೆಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
'ಹಿಂದೂಸ್ತಾನ್ ಟೈಮ್ಸ್' ವರದಿಯ ಪ್ರಕಾರ, ಫೆಬ್ರವರಿ 15ರಿಂದ ವಿಪಿನ್ ಶುಕ್ಲಾ ನಾಪತ್ತೆಯಾಗಿದ್ದ. ಹಾಗಾಗಿ, ಆತನ ಪತ್ನಿ ಕುಂಕುಮ್ ಅವರು, ಬತಿಂಡಾದ ನಥಾನಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.[ಸರಸವಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ಟೆಕ್ಕಿ]

ದೂರಿನ ಆಧಾರದ ಮೇಲೆ, ವಾಯುನೆಲೆಯ ಅಧಿಕಾರಿಗಳ ಕ್ವಾರ್ಟರ್ಸ್ ನಲ್ಲಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಸುಲೇಶ್ ಕುಮಾರ್ ಅವರ ಮನೆಯ ಆವರಣದಿಂದ ಅಲ್ಪ ಸ್ವಲ್ಪ ಕೊಳೆತ ಮಾಂಸದ ವಾಸನೆ ಬಡಿದಿತ್ತು. ಇದರ ಜಾಡು ಹಿಡಿದು ಹೋಗಿ ಸುಲೇಶ್ ಮನೆಯನ್ನು ಜಾಲಾಡಿದ ಪೊಲೀಸರು ಶವವೊಂದರ ತುಂಡಾದ ದೇಹಗಳು ಅಲ್ಲಲ್ಲಿ ಅಡಗಿಸಿಟ್ಟಿದ್ದು ಪತ್ತೆಯಾಗಿತ್ತು.[ಅನೈತಿಕ ಸಂಬಂಧ: ಮಳವಳ್ಳಿಯಲ್ಲಿ ಡಬಲ್ ಮರ್ಡರ್]
ತಕ್ಷಣವೇ ಸುಲೇಶ್ ನನ್ನು ವಿಚಾರಣೆಗೊಳಿಸಿದ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಸುಲೇಶ್, ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದಲೇ ವಿಪಿನ್ ನನ್ನು ಕೊಲೆಗೈದಿದ್ದಾಗಿ ಹೇಳಿಕೆ ನೀಡಿದ್ದಾನೆ.
ತನ್ನ ಪತ್ನಿ ವಿಪಿನ್ ನಿಂದಾಗಿ ಗರ್ಭವತಿಯಾಗಿದ್ದು ಅತೀವ ಬೇಸರ ತರಿಸಿದ್ದರಿಂದ, ಪ್ರತೀಕಾರಕ್ಕಾಗಿ ವಿಪಿನ್ ಕೊಲೆಗೆ ಸಂಚು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.












Click it and Unblock the Notifications