ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಅಮಿತ್ ಶಾ ಊರಲ್ಲಿ ರಾಹುಲ್ ಗಾಂಧಿ ಎತ್ತಿನಗಾಡಿ ಶೋ!

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ರಾಜ್ಯದ ಮೂರು ದಿನಗಳ ಪ್ರವಾಸ ಸೋಮವಾರ (ಸೆ 25) ಆರಂಭಿಸಿದ್ದಾರೆ. ಶ್ರೀಕೃಷ್ಣನ ಪುಣ್ಯನಾಡು ದ್ವಾರಕದಲ್ಲಿ ಪೂಜೆ ಸಲ್ಲಿಸಿದ ನಂತರ ರಾಹುಲ್ ಯಾತ್ರೆ ಎತ್ತಿನ ಗಾಡಿಯ ಮೂಲ

|
Google Oneindia Kannada News

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಚುನಾವಣಾ ಹೊಸ್ತಿಲಲ್ಲಿರುವ ಗುಜರಾತ್ ರಾಜ್ಯದ ಮೂರು ದಿನಗಳ ಪ್ರವಾಸ ಸೋಮವಾರ (ಸೆ 25) ಆರಂಭಿಸಿದ್ದಾರೆ. ಶ್ರೀಕೃಷ್ಣನ ಪುಣ್ಯನಾಡು ದ್ವಾರಕದಲ್ಲಿ ಪೂಜೆ ಸಲ್ಲಿಸಿದ ನಂತರ ರಾಹುಲ್ ಯಾತ್ರೆ ಆರಂಭವಾಗಿದೆ.

ತೆರೆದ ಜೀಪಿನಲ್ಲಿ ಯಾತ್ರೆ ನಡೆಸಲು ಪೊಲೀಸ್ ಅನುಮತಿ ದೊರಕದ ಹಿನ್ನಲೆಯಲ್ಲಿ ಎತ್ತಿನಗಾಡಿಯ ಮೂಲಕ ರಾಹುಲ್ ಶೋ ಆರಂಭವಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಸೋಮವಾರ ಬೆಳಗ್ಗೆ ದ್ವಾರಕಾಗೆ ಆಗಮಿಸಿದ ರಾಹುಲ್ ಅವರನ್ನು, ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.

ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಸೌರಾಷ್ಟ್ರ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆ ಗುರಿಯಾಗಿರಿಸಿಕೊಂಡು ರಾಹುಲ್ ಗಾಂಧಿ ಯಾತ್ರೆ ನಡೆಯಲಿದೆ. ಪಟೇದಾರ್ ಚಳುವಳಿಯ ರೂವಾರಿಯಾಗಿರುವ ಹಾರ್ಥಿಕ್ ಪಟೇಲ್, ರಾಹುಲ್ ಅವರನ್ನು ದ್ವಾರಕದಲ್ಲಿಂದು ಭೇಟಿಯಾಗಿದ್ದಾರೆ.

ಜಮ್ನಾನಗರ, ಮೊರ್ಬಿ, ಸುರೇಂದ್ರನಗರ ಮತ್ತು ರಾಜಕೋಟ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿಯ 'ನವಸರ್ಜನ್ ಯಾತ್ರೆ' ಸಾಗಲಿದೆ. ಯಾತ್ರೆಯ ವೇಳೆ, ರೈತರು, ಕಾರ್ಮಿಕರು ಮತ್ತು ವ್ಯಾಪಾರಸ್ಥರನ್ನು ರಾಹುಲ್ ಭೇಟಿಯಾಗಲಿದ್ದಾರೆ.

58 ಅಸೆಂಬ್ಲಿ ಕ್ಷೇತ್ರಗಳನ್ನು ಹೊಂದಿರುವ ಸೌರಾಷ್ಟ್ರ ಭಾಗ, ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗಿದೆ. ಬಿಜೆಪಿಯ ಬೆಲ್ಟ್ ಎಂದೇ ಕರೆಯಲ್ದಡುವ ಈ ಭಾಗದಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಲು ರಾಹುಲ್ ಯಾತ್ರೆ ಉಪಯೋಗವಾಗಲಿದೆ ಎಂದು ಗುಜರಾತ್ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ

ರಾಹುಲ್ ಗಾಂಧಿ ಯಾತ್ರೆಗಾಗಿ ವಿಶೇಷ ಬಸ್

ರಾಹುಲ್ ಗಾಂಧಿ ಯಾತ್ರೆಗಾಗಿ ವಿಶೇಷ ಬಸ್

ಇದೇ ಮೊದಲ ಬಾರಿಗೆ ಸೌರಾಷ್ಟ್ರ ಭಾಗಕ್ಕೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ ಯಾತ್ರೆಗಾಗಿ ವಿಶೇಷ ಬಸ್ ರೆಡಿ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾ, ಮೈಕ್ ಸಹಿತ ಹಲವು ಸೌಲಭ್ಯಗಳನ್ನು ಹೊಂದಿರುವ ಈ ಬಸ್ಸಿನಲ್ಲಿ ಪ್ರಯಾಣಿಸುವ ರಾಹುಲ್, 450 ಕಿ.ಮೀ ಯಾತ್ರೆಯಲ್ಲಿ ಅಲ್ಲಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

182 ಕ್ಷೇತ್ರವನ್ನು ಹೊಂದಿರುವ ಗುಜರಾತ್ ಅಸೆಂಬ್ಲಿ

182 ಕ್ಷೇತ್ರವನ್ನು ಹೊಂದಿರುವ ಗುಜರಾತ್ ಅಸೆಂಬ್ಲಿ

182 ಕ್ಷೇತ್ರವನ್ನು ಹೊಂದಿರುವ ಗುಜರಾತ್ ಅಸೆಂಬ್ಲಿಗೆ ಚುನಾವಣೆ ಈ ವರ್ಷಾಂತ್ಯದೊಳಗೆ ನಡೆಯಬೇಕಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ನಾಡಿನಲ್ಲಿ ಬಿಜೆಪಿ 2002ರಿಂದ ಸತತವಾಗಿ ಅಧಿಕಾರದಲ್ಲಿದೆ. ಕಳೆದ (2012) ಚುನಾವಣೆಯಲ್ಲಿ ಬಿಜೆಪಿ 116 ಮತ್ತು ಕಾಂಗ್ರೆಸ್ 60 ಸ್ಥಾನದಲ್ಲಿ ಜಯಗಳಿಸಿತ್ತು.

ರಾಹುಲ್ ಇನ್ ಗುಜರಾತ್ ಟ್ರೆಂಡಿಂಗ್

ರಾಹುಲ್ ಇನ್ ಗುಜರಾತ್ ಟ್ರೆಂಡಿಂಗ್

ಎಂದಿನಂತೆ #RahulInGujarat ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದ್ದು, ಬಿಜೆಪಿಯ ಸುಳ್ಳುಪೊಳ್ಳು ಭರವಸೆಗಳನ್ನು ಜನರ ಮುಂದೆ ಅನಾವರಣ ಮಾಡಲು ರಾಹುಲ್ ಗಾಂಧಿ ಯಾತ್ರೆ ಆರಂಭವಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಹೇಳಿದೆ.

ಆಡಳಿತ ವಿರೋಧಿ ಅಲೆ

ಆಡಳಿತ ವಿರೋಧಿ ಅಲೆ

ಗುಜರಾತಿನ ರೂಪಾನಿ ಸರಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಎದ್ದಿದೆ, ಸಮೀಕ್ಷೆಯೊಂದರ ಪ್ರಕಾರ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನೂರಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ, ಶ್ರೀಕೃಷ್ಣನ ಆಶೀರ್ವಾದ ಪಡೆದು ರಾಹುಲ್ ಗಾಂಧಿ ನವಸರ್ಜನ್ ಯಾತ್ರೆ ಆರಂಭಿಸಿದ್ದಾರೆನ್ನುವ ಟ್ವೀಟ್.

 ಪರ ವಿರೋಧ ಟ್ವೀಟುಗಳು

ಪರ ವಿರೋಧ ಟ್ವೀಟುಗಳು

ರಾಹುಲ್ ಗುಜರಾತ್ ಯಾತ್ರೆಯ ಪರ ವಿರೋಧ ಟ್ವೀಟುಗಳು ಹರಿದು ಬರುತ್ತಲೇ ಇದೆ. ನೀವು ನಮಗೆ ವೋಟ್ ಹಾಕಿ, ನಾವು ನಿಮಗೆ ಹಗರಣಗಳನ್ನು ನೀಡುತ್ತೇವೆ. ರಾಹುಲ್ ಗಾಂಧಿಯವರ ಏಕೈಕ ಸಾಧನೆಯೆಂದರೆ ಆಕ್ಸಿಜನ್ ಅನ್ನು ಕಾರ್ಬನ್ ಡಯಾಕ್ಷೈಡಿಗೆ ಪರಿವರ್ತನೆ ಮಾಡಿದ್ದು. ಇದು ನವಸರ್ಜನ್ ಯಾತ್ರೆಯಲ್ಲ ಇದು ಕಾಂಗ್ರೆಸ್ ವಿಸರ್ಜನ್ ಯಾತ್ರೆ ಎಂದು ಅಣಕಿಸಲಾಗುತ್ತಿದೆ.

English summary
Ahead of the crucial Assembly election in Gujarat, Congress vice-president Rahul Gandhi started 3 day campaign in the state on Monday (Sep 25). Since the state police has refused him permission for an open-jeep roadshow citing security concerns, Rahul covered a small stretch of the the trip in a traditionally decked up bullock cart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X