ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಮಿಂಚು, ರಮ್ಯಾ ಕಾಲ್ಗುಣ ಕಾರಣವೇ?

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 19: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಮಾಡಿದ ಟ್ವೀಟ್ ಗಳನ್ನು ಸಾರ್ವಜನಿಕರು ಅತಿ ಹೆಚ್ಚು ರೀಟ್ವೀಟ್ ಮಾಡಿದ್ದು, ಈ ರೀತಿ ರೀಟ್ವೀಟ್ ದಾಖಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಿಂತ ಮುಂದೆ ಇದ್ದಾರೆ ರಾಹುಲ್ ಗಾಂಧಿ.

ಇದೇನಿದು ರಾಹುಲ್ ಮಾತುಗಳಲ್ಲಿ ಹಾಸ್ಯ, ವ್ಯಂಗ್ಯದ ಹೊನಲು!

ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗ ಆಗಿದ್ದು, ಕಳೆದ ಒಂದು ವಾರದಲ್ಲಿ ರಾಹುಲ್ ಗಾಂಧಿ ಅವರು ಮಾಡಿದ ಟ್ವೀಟ್ ಅನ್ನು ಅತಿ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ವಿಪರೀತ ಚಟುವಟಿಕೆಯಿಂದ ಇದ್ದಾರೆ.

AICC Vice president Rahul Gandhi is challenging Narendra Modi on Twitter

ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ ಜುಲೈ ಹಾಗೂ ಸೆಪ್ಟೆಂಬರ್ ಮಧ್ಯದ ಅವಧಿಯಲ್ಲಿ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಗೆ ಹತ್ತು ಲಕ್ಷ ಹೊಸ ಹಿಂಬಾಲಕರು ಸೇರ್ಪಡೆಯಾಗಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ರಾಜಕಾರಣಿಗಳ ಪಟ್ಟಿಯಲ್ಲಿ ರಾಹುಲ್ ಗೆ ಎರಡನೇ ಸ್ಥಾನ.

AICC Vice president Rahul Gandhi is challenging Narendra Modi on Twitter

ಈ ವಿಚಾರ ಪ್ರಚಾರಕ್ಕೆ ಬರುತ್ತಿದ್ದಂತೆಯೇ ಮಂಡ್ಯದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಬಗ್ಗೆ ಕೂಡ ಒಳ್ಳೆ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ನಲ್ಲಿ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯನ್ನು ರಮ್ಯಾಗೆ ವಹಿಸಿದ ನಂತರವೇ ಕಾಂಗ್ರೆಸ್ ಚಟುವಟಿಕೆ ಹೆಚ್ಚಾಗಿದೆ ಎಂಬ ಮಾತು ಕೇಳಿಬರುತ್ತಿದೆ.

AICC Vice president Rahul Gandhi is challenging Narendra Modi on Twitter

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಟೀಕೆ ಮಾಡಲು, ಪರಿಣಾಮಕಾರಿ ವಾಗ್ದಾಳಿ ನಡೆಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿದೆ ಎಂಬುದು ಕೂಡ ಚರ್ಚೆಯಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice president Rahul Gandhi is capturing social media traction. According to a Hindustan Times, people retweeted Gandhi in recent weeks more than Prime Minister Narendra Modi and Delhi chief minister Arvind Kejriwal, the first and second most-followed Indian politicians on the micro-blogging site twitter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ