ಚುನಾವಣಾ ಪ್ರಚಾರಕ್ಕೆ ಸೋನಿಯಾ ಕೊನೆಗೂ ಬರಲೇ ಇಲ್ಲ, ಏನಿರಬಹುದು ಸಮಸ್ಯೆ?
ಕೊನೆಯ ಹಂತದ ಚುನಾವಣೆ ಉತ್ತರಪ್ರದೇಶದಲ್ಲಿ ಬುಧವಾರ (ಮಾ 8) ಚಾಲ್ತಿಯಲ್ಲಿದೆ. ಆರು ಹಂತದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಒಮ್ಮೆಯೂ ಸೋನಿಯಾ ಭಾಗವಹಿಸಲಿಲ್ಲ.
ಆರು ಹಂತದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದ ಚುನಾವಣೆ, ಬುಧವಾರ (ಮಾ 8) ಚಾಲ್ತಿಯಲ್ಲಿದೆ. ಜಿದ್ದಾಜಿದ್ದಿಯಲ್ಲಿ ಮುಕ್ತಾಯಗೊಳ್ಳುತ್ತಿರುವ ಚುನಾವಣಾ ಪ್ರಚಾರದ ಫಲಿತಾಂಶ ಶನಿವಾರ (ಮಾ 11) ಹೊರಬೀಳಲಿದೆ.
ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ನಿರ್ಣಾಯಕ ಎನ್ನುವುದು ಒಂದೆಡೆಯಾದರೂ, ಪ್ರಮುಖವಾಗಿ ಗಾಂಧಿ ಕುಟುಂಬಕ್ಕೆ ಉತ್ತರಪ್ರದೇಶ ರಾಜಕೀಯ ಕರ್ಮಭೂಮಿ. ಹಾಗಿದ್ದಾಗ್ಯೂ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಚುನಾವಣಾ ಪ್ರಚಾರದ ವೇಳೆ ಉತ್ತರಪ್ರದೇಶದ ಕಡೆ ತಲೆಹಾಕಲಿಲ್ಲ.[ಮೋದಿಯವರಿಗೆ ವಯಸ್ಸಾಯಿತು ಅಂತ ವ್ಯಂಗ್ಯವಾಡಿದ ರಾಹುಲ್]
ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ತೀವ್ರ ಹಿನ್ನಡೆಯಾಗುತ್ತಿರುವ ಈ ಸಮಯದಲ್ಲಿ, ಅಖಿಲೇಶ್ ಜೊತೆ ಕೈಜೋಡಿಸಿ ಪಕ್ಷದ ಗತ ಇತಿಹಾಸವನ್ನು ಮರುಳಿಸಲು ತೆರೆಯ ಹಿಂದೆ ಸೋನಿಯಾ ಗಾಂಧಿ ಮಾಡುತ್ತಿರುವ ಇನ್ನಿಲ್ಲದ ಪ್ರಯತ್ನದ ಫಲಿತಾಂಶ ಇನ್ನೆರಡು ದಿನಗಳಲ್ಲಿ ಹೊರಬೀಳಲಿದೆ. ಏನಾಗುತ್ತೋ ನೋಡೋಣ!!
ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗ ಅದರಲ್ಲಿ ಸೋನಿಯಾ ಗಾಂಧಿ ಹೆಸರಿರಲಿಲ್ಲ. ಆರೋಗ್ಯ ಸಂಬಂಧವಾಗಿ ಸೋನಿಯಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದರೂ, ಕಾರಣ ಬೇರೆನೇ ಇದೆ ಎನ್ನುವ ಮಾತು ಅಲ್ಲಲ್ಲಿ ಚಾಲ್ತಿಯಲ್ಲಿದೆ.[ಬಿಜೆಪಿ ನಾಯಕಿಗೆ ಅಶ್ಲೀಲ ಸಂದೇಶ ಕಳಿಸಿದ್ದವನ ಬಂಧನ]
ಎಪ್ಪತ್ತು ವರ್ಷದ ಸೋನಿಯಾ ಗಾಂಧಿಗೆ ಆರೋಗ್ಯ ಸಮಸ್ಯೆ ಇದೆ ಎನ್ನುವುದು ಸರಿಯಾದ ಮಾಹಿತಿಯಾಗಿದ್ದರೂ, ತಮ್ಮ ಸ್ವಕ್ಷೇತ್ರಗಳಾದ ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ಸೋನಿಯಾ ಪ್ರಚಾರ ನಡೆಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು ಕಾಂಗ್ರೆಸ್ ಕಾರ್ಯಕರ್ತರು. ಆದರೆ ಅದು ಹುಸಿಯಾಯಿತು..ಮುಂದೆ ಓದಿ..

ವಾರಣಾಸಿಯಿಂದಲೇ ಆರಂಭವಾದ ಪ್ರಚಾರ
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಿಂದಲೇ ಪಕ್ಷದ ಚುನಾವಣಾ ಪ್ರಚಾರಕ್ಕೆ ತೆಂಗಿನಕಾಯಿ ಹೊಡೆದಿದ್ದ ಸೋನಿಯಾ, ಪ್ರಚಾರದ ಮಧ್ಯೆಯೇ ಅನಾರೋಗ್ಯಕ್ಕೆ ಒಳಗಾಗಿ ದೆಹಲಿಗೆ ವಾಪಸ್ ಆದದ್ದು ಎಲ್ಲರಿಗೂ ಗೊತ್ತಿರುವ ವಿಚಾರ.[ಗಾಯತ್ರಿ ಪ್ರಜಾಪತಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ]

ಎರಡು ಕ್ಷೇತ್ರದ ಚುನಾವಣೆಗಷ್ಟೇ ಪ್ರಿಯಾಂಕ ಸೀಮಿತ
ಉತ್ತರಪ್ರದೇಶದಲ್ಲಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕ ಗಾಂಧಿ ವಾಧ್ರಾ ಇಳಿಯಲೇಬೇಕು ಎಂದು ಕಾಂಗ್ರೆಸ್ಸಿನ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ಪರಿಪರಿಯಾಗಿ ಕೇಳಿಕೊಂಡಿದ್ದರೂ, ಎಂದಿನಂತೆ ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ಮಾತ್ರ ಬಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿ, ಪ್ರಿಯಾಂಕ ಹೋಗಿದ್ದರು.

ರಾಹುಲ್ ಗಾಂಧಿ ಅಲ್ಟಿಮೇಟ್ ನಾಯಕ
ಕೆಲವೊಮ್ಮೆ ತಮ್ಮ ಅಪ್ರಬುದ್ದ ಹೇಳಿಕೆ ಮತ್ತು ರಾಜಕೀಯ ನಡೆಯಿಂದ ಪಕ್ಷಕ್ಕೆ ಮುಜುಗರ ತರುತ್ತಿದ್ದರೂ, ಪಕ್ಷದ ಅಲ್ಟಿಮೇಟ್ ನಾಯಕನನ್ನಾಗಿ ರಾಹುಲ್ ಗಾಂಧಿಯನ್ನೇ ಮುಂದೆ ತರಬೇಕು ಎನ್ನುವ ಕಾರಣಕ್ಕಾಗಿಯೇ ಸೋನಿಯಾ, ಐದು ರಾಜ್ಯಗಳ ಚುನಾವಣಾ ಪ್ರಚಾರದಿಂದ ಸಂಪೂರ್ಣ ದೂರ ಸರಿದರು ಎನ್ನುವ ಮಾತು ಚಾಲ್ತಿಯಲ್ಲಿದೆ.

ಎಐಸಿಸಿ ಉಪಾಧ್ಯಕ್ಷರಿಗೆ ಸೋನಿಯಾ ಫ್ರೀಹ್ಯಾಂಡ್
ಇನ್ನು ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪಕ್ಷದ ಕೆಲವು ಮುಖಂಡರಿಂದ ವಿರೋಧವಿದ್ದರೂ, ಇದರ ಸಾಧಕಬಾಧಕಗಳ ಹೊಣೆಯನ್ನು ವಹಿಸಿಕೊಳ್ಳಲು ರಾಹುಲ್ ಗಾಂಧಿಗೆ ಫ್ರೀಹ್ಯಾಂಡ್ ನೀಡುವ ಮೂಲಕ ಸೋನಿಯಾ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಕೊನೆಗೂ ಸೋನಿಯಾ ಪ್ರಚಾರಕ್ಕೆ ಬರಲೇ ಇಲ್ಲ
ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಷ್ಟು ಸೋನಿಯಾಗೆ ಆರೋಗ್ಯ ಸರಿಯಿಲ್ಲದಿದ್ದರೂ, ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಲು ಕೆಲವು ಸಭೆಯಲ್ಲಾದರೂ ಯಾಕೆ ಭಾಗವಹಿಸಲಿಲ್ಲ ಎನ್ನುವುದೇ ಕಾಡುತ್ತಿರುವ ಪ್ರಶ್ನೆ.












Click it and Unblock the Notifications