ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ರನ ರಕ್ಷಣೆಗೆ ಭಿನ್ನರ ಉಸಿರು ಎತ್ತದಂತೆ ಮಾಡಿ ಜಾಣ ನಡೆಯಿಟ್ಟ ಸೋನಿಯಾ ಗಾಂಧಿ

|
Google Oneindia Kannada News

ಕಳೆದ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ, ಒಂದು ರೀತಿಯಲ್ಲಿ ಅನಾಥವಾಗಿದ್ದ ಎಐಸಿಸಿ ಅಧ್ಯಕ್ಷ ಹುದ್ದೆಗೆ ಮುಂದಿನ ದಿಕ್ಕು ಯಾರು ಎನ್ನುವುದು ಸದ್ಯದ ಮಟ್ಟಿಗೆ ಇತ್ಯರ್ಥವಾಗಿದೆ. ನಾನೇ ಪೂರ್ಣಾವಧಿ ಅಧ್ಯಕ್ಷೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಒಂದು ಕಾಲದಲ್ಲಿ ತಮ್ಮ ಪರಮಾಪ್ತರು ಆಗಿದ್ದವರು, ಪರ್ಮನೆಂಟ್ ಅಧ್ಯಕ್ಷರು ಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡಲು ಆರಂಭಿಸಿದ್ದರಿಂದ, ಶತಮಾನದ ಇತಿಹಾಸವಿರುವ ಪಕ್ಷ ಹಲವು ಬಾರಿ ಮುಜುಗರವನ್ನು ಎದುರಿಸಬೇಕಾಗಿ ಬಂದಿತ್ತು.

ಕೈ ನಾಯಕರದ್ದು ಒಂದೇ ಕೂಗು: ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ 2ನೇ ಬಾರಿ ರಾಹುಲ್ ಗಾಂಧಿ!?ಕೈ ನಾಯಕರದ್ದು ಒಂದೇ ಕೂಗು: ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ 2ನೇ ಬಾರಿ ರಾಹುಲ್ ಗಾಂಧಿ!?

ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ್ ಸಿಂಗ್ ಸೇರಿದಂತೆ ಬಹುತೇಕ ಗಾಂಧಿ ಕುಟುಂಬದ ಜೊತೆಗೆ ಆಪ್ತರಾಗಿದ್ದವರೇ (ಜಿ - 23 ಗುಂಪು), ಪೂರ್ಣಾವಧಿಗೆ ಅಧ್ಯಕ್ಷ ಮತ್ತು ಪಕ್ಷದ ಪ್ರಮುಖ ಮುಖಂಡರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತ ಪಡಿಸುತ್ತಿದ್ದರು.

ಪಕ್ಷದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪೂರ್ಣಾವಧಿಗೆ ನಾನೇ ಅಧ್ಯಕ್ಷೆ ಎಂದು ಸೋನಿಯಾ ಗಾಂಧಿ ಪ್ರಕಟಿಸಿದ ವೇಳೆಗೆ ಸರಿಯಾಗಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಪರಿಶೀಲಿಸುವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ಮೂಲಕ, ಅಷ್ಟು ಸುಲಭವಾಗಿ ಪಕ್ಷದ ಮೇಲೆ ಹಿಡಿತ ಬಿಟ್ಟುಕೊಡುವುದಿಲ್ಲ ಎಂದು ಸಾರಿದ್ದಾರೆ. ಮಗನ ರಕ್ಷಣೆಗೆ ಭಿನ್ನರ ಉಸಿರು ಎತ್ತದಂತೆ ಮಾಡಿ ಜಾಣ ನಡೆಯಿಟ್ಟ ಸೋನಿಯಾ, ಮುಂದೆ ಓದಿ..

Breaking News: 2022ರ ಸೆಪ್ಟೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆBreaking News: 2022ರ ಸೆಪ್ಟೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ತೀವ್ರ ಅಸಮಾಧಾನಗೊಂಡ ಜಿ - 23 ಗುಂಪಿನ ನಾಯಕರು

ತೀವ್ರ ಅಸಮಾಧಾನಗೊಂಡ ಜಿ - 23 ಗುಂಪಿನ ನಾಯಕರು

ಕಳೆದ ಲೋಕಸಭಾ ಚುನಾವಣೆ, ಇದಾದ ನಂತರ ನಡೆದ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಹೈರಾಣವಾಗಿತ್ತು. ಪಶ್ಚಿಮ ಬಂಗಾಳದಲ್ಲಂತೂ ಒಂದೇ ಒಂದು ಸೀಟು ಗೆಲ್ಲಲು ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. ಪಕ್ಷದ ಪರಿಸ್ಥಿತಿ ನೋಡಿ, ತೀವ್ರ ಅಸಮಾಧಾನಗೊಂಡ ಜಿ - 23 ಗುಂಪಿನ ನಾಯಕರು, ಹಂಗಾಗಿ ಅಧ್ಯಕ್ಷರು ಬೇಡ, ಪೂರ್ಣಾವಧಿಗೆ ಅಧ್ಯಕ್ಷರು ಬೇಕು ಎಂದು ಮಾಧ್ಯಮಗಳ ಮುಂದೆಯೇ ಹೇಳಿಕೆಯನ್ನು ನೀಡಲು ಆರಂಭಿಸಿದರು. ಈಗ, ಸೋನಿಯಾ ಗಾಂಧಿ ಇದಕ್ಕೆ ಬ್ರೇಕ್ ಹಾಕಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಪರಿಶೀಲಿಸುವೆ ಎಂದ ರಾಹುಲ್

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಪರಿಶೀಲಿಸುವೆ ಎಂದ ರಾಹುಲ್

"ನಾನೇ ಪೂರ್ಣಾವಧಿಗೆ ಅಧ್ಯಕ್ಷೆ, ನಿಮ್ಮ ಯಾವುದೇ ಅಸಮಾಧಾನಗಳಿದ್ದರೆ ಅದನ್ನು ನನ್ನೊಂದಿಗೆ ಚರ್ಚಿಸಿ. ನಿಮ್ಮ ಸಲಹೆಗಳಿಗೆ ನಮ್ಮ ಮನೆ ಬಾಗಿಲು ತೆರಿದಿರುತ್ತದೆ, ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಬಿಟ್ಟಿ ಸಲಹೆಗಳನ್ನು ನನಗೆ ನೀಡಲು ಬರಬೇಡಿ" ಎಂದು ಸೋನಿಯಾ ಗಾಂಧಿ ಖಡಕ್ಕಾಗಿ ಹೇಳಿದ್ದಾರೆ. ಸೋನಿಯಾ ಅವರ ಈ ಹೇಳಿಕೆಯ ಬೆನ್ನಿಗೆ ರಾಹುಲ್ ಗಾಂಧಿ ಕೂಡಾ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಪರಿಶೀಲಿಸುವೆ ಎಂದು ರಾಹುಲ್ ಹೇಳಿದ್ದಾರೆ.

ಸೋನಿಯಾ ಗಾಂಧಿಗೆ ಹೆಚ್ಚುಕಮ್ಮಿ ಒಂದು ವರ್ಷದ ಅವಧಿ ಸಿಗಲಿದೆ

ಸೋನಿಯಾ ಗಾಂಧಿಗೆ ಹೆಚ್ಚುಕಮ್ಮಿ ಒಂದು ವರ್ಷದ ಅವಧಿ ಸಿಗಲಿದೆ

ಇದಾದ ನಂತರ ನೂತನ ಅಧ್ಯಕ್ಷರ ಆಯ್ಕೆಯ ಚುನಾವಣೆಯ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಸೋನಿಯಾ ಗಾಂಧಿ ಜಾಣ ನಡೆ ಇಟ್ಟಿದ್ದಾರೆ. ಇದೊಂದು ದೊಡ್ಡ ಪ್ರಕ್ರಿಯೆಯಾಗಿದ್ದು, ಮುಂದಿನ ವರ್ಷದ ಸೆಪ್ಟಂಬರ್ ಅಂತ್ಯಕ್ಕೆ ಅಧ್ಯಕ್ಷ ಚುನಾವಣೆಯ ಪ್ರಕ್ರಿಯೆ ಮುಗಿಯಲಿದೆ. ಸದಸ್ಯತ್ವ ಅಭಿಯಾನದ ಮೂಲಕ ಇದು ಆರಂಭಗೊಳ್ಳಲಿದೆ. ಹೀಗಾಗಿ, ಸೋನಿಯಾ ಗಾಂಧಿಗೆ ಹೆಚ್ಚುಕಮ್ಮಿ ಒಂದು ವರ್ಷದ ಅವಧಿ ಸಿಗಲಿದೆ.

ಪುತ್ರನನ್ನು ರಾಜಕೀಯವಾಗಿ ರೆಡಿ ಮಾಡಲು ಸೋನಿಯಾಗೆ ಸಮಯಾವಕಾಶ

ಪುತ್ರನನ್ನು ರಾಜಕೀಯವಾಗಿ ರೆಡಿ ಮಾಡಲು ಸೋನಿಯಾಗೆ ಸಮಯಾವಕಾಶ

ಇದರಿಂದಾಗಿ, ಪುತ್ರನನ್ನು ರಾಜಕೀಯವಾಗಿ ರೆಡಿ ಮಾಡಲು ಮತ್ತು ಭಿನ್ನರ ಧ್ವನಿಯನ್ನು ಅಡಗಿಸಲು ಸೋನಿಯಾಗೆ ಸಮಯಾವಕಾಶ ಸಿಕ್ಕಿದೆ. ಆ ಮೂಲಕ, ಅಧ್ಯಕ್ಷ ಹುದ್ದೆ ನಮ್ಮದೇ ಸ್ವತ್ತು ಎನ್ನುವುದನ್ನು ಮತ್ತೆ ಸೋನಿಯಾ ಗಾಂಧಿ ರುಜುವಾತು ಪಡಿಸಲು ಮುಂದಾಗಿರುವುದು ಸ್ಪಷ್ಟ. ಚುನಾವಣೆ ಘೋಷಣೆ ಮಾಡಿದ್ದರಿಂದ, ಜಿ - 23 ಗುಂಪಿನ ನಾಯಕರು ಮುಂದಿನ ಒಂದು ವರ್ಷ ಏನೂ ಮಾತನಾಡದಂತೆ ಸೋನಿಯಾ ಗಾಂಧಿ ರಣತಂತ್ರ ಹಣೆದಿದ್ದಾರೆ. ಗುಲಾಂ ನಬಿ, ಆನಂದ್ ಸಿಂಗ್ ಮುಂತಾದವರು ಬೇರೆ ದಾರಿಯಿಲ್ಲದೇ, ಸೋನಿಯಾ ಗಾಂಧಿ ನಿರ್ಧಾರಕ್ಕೆ ತಲೆದೂಗಿದ್ದಾರೆ.

English summary
I’m a full-time, hands-on Congress president’ : Sonia Gandhi hits out at G23 leaders to save Rahul Gandhi. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X