ಕಾವೇರಿಗಾಗಿ ಪ್ರಧಾನಿ ಕಚೇರಿಗೆ ಎಐಎಡಿಎಂಕೆ ಸಂಸದರ ಜಾಥಾ

Posted By:
Subscribe to Oneindia Kannada

ನವದೆಹಲಿ, ಅ 4: ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ ಎನ್ನುವ ಕೇಂದ್ರ ಸರಕಾರದ ನಿಲುವಿನ ವಿರುದ್ದ ಎಐಎಡಿಎಂಕೆ ಸಂಸದರು ಪ್ರಧಾನಮಂತ್ರಿ ಕಚೇರಿಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ (ಅ 4) ಪಕ್ಷದ ಸಂಸದ ಮತ್ತು ಲೋಕಸಭೆಯ ಡೆಪ್ಯುಟಿ ಸ್ಪೀಕರ್ ತಂಬಿದೊರೈ ನೇತೃತ್ವದಲ್ಲಿ ಪಾರ್ಲಿಮೆಂಟಿನಿಂದ ಪ್ರಧಾನಮಂತ್ರಿ ಕಚೇರಿವರೆಗೆ ಜಾಥಾ ಹೊರಟ ಸದಸ್ಯರು, ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಮೋದಿಗೆ ಮನವಿ ಸಲ್ಲಿಸಿದ್ದಾರೆ. (ಮಂಡಳಿ ರಚನೆ ಸಾಧ್ಯವಿಲ್ಲ)

AIADMK MPs march to PMO, demand a Cauvery board

ನಮ್ಮ ಮನವಿಗೆ ಪ್ರಧಾನಿಗಳು ಪೂರಕವಾಗಿ ಸ್ಪಂಧಿಸಿದ್ದಾರೆ, ಮಂಡಳಿ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ ಎಂದು ಪ್ರಧಾನಿ ಭೇಟಿ ಮಾಡಿ ಬಂದ ನಂತರ ತಂಬಿದೊರೈ ಮಾಧ್ಯಮದವರಿಗೆ ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆದೇಶದಂತೆ, ಪ್ರಧಾನಿಗೆ ಮನವಿ ಸಲ್ಲಿಸಲಾಗಿದೆ ಎಂದು ಪಕ್ಷ ತನ್ನ ಟ್ವಿಟ್ಟರ್ ಅಕೌಂಟ್ ಮೂಲಕ ಹೇಳಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ, ಸೆಪ್ಟೆಂಬರ್ 30ರಂದು ನೀಡಿದ ಆದೇಶವನ್ನು ಬದಲಾಯಿಸುವಂತೆ ಕೋರಿ ಸುಪ್ರೀಂಕೋರ್ಟೀಗೆ ಕೇಂದ್ರ ಸರ್ಕಾರ ಸೋಮವಾರ (ಅ 3) ಅರ್ಜಿ ಸಲ್ಲಿಸಿತ್ತು. (ತಮಿಳುನಾಡಿಗೆ ಹರಿದ ನೀರು)

ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಆದೇಶ ಮಾಡುವಂತಿಲ್ಲ. ಶಾಸಕಾಂಗದ ನೀತಿ ನಿಯಮಗಳಗೆ ಸಂಬಂಧ ಪಟ್ಟಿದ್ದೆಂದು ಕೇಂದ್ರ ತನ್ನ ಅರ್ಜಿಯಲ್ಲಿ ತಿಳಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A delegation of the AIADMK's parliament members on Tuesday (Oct 4) marched to the Prime Minister's Office (PMO) and submitted a memorandum to constitute a Cauvery Management Board (CMB).
Please Wait while comments are loading...