ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್: ದುಬೈ ಸಂಸ್ಥೆಯ ನಿರ್ದೇಶಕಿ ಬಂಧನ
ನವದೆಹಲಿ, ಜುಲೈ 18 : ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮ್ಯಾಟ್ರಿಕ್ಸ್ ಹೊಲ್ಡಿಂಗ್ಸ್ ದುಬೈ ಸಂಸ್ಥೆಯ ನಿರ್ದೇಶಕಿಯನ್ನು ಬಂಧಿಸಿದೆ.
ರಾಜೀವ್ ಬಹದ್ದೂರ್ ಸಕ್ಸೆನಾ ಅವರ ಪತ್ನಿ ಶಿವಾನಿ ಸಕ್ಸೆನಾ ಅವರನ್ನು ಬಂಧಿಸಲಾಗಿದೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಇಂಟರ್ ನ್ಯಾಷನಲ್ ಲಿಮಿಟೆಡ್ ಯುಕೆ, 58 ಮಿಲಿಯನ್ ಯುರೋವನ್ನು ಕಿಕ್ ಬ್ಯಾಕ್ ಆಗಿ ಗಾರ್ಡಿಯನ್ ಸರ್ವಿಸ್ ಮತ್ತು ತುನಿಶಿಯಾ ಮತ್ತು ಐಡಿಎಸ್ ಗೆ ನೀಡಿದೆ ಎಂಬ ಹಲವು ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಕಲೆ ಹಾಕಿದೆ.

ಕಿಕ್ ಬ್ಯಾಕ್ ಪಡೆದ ಸಂಸ್ಥೆಗಳು ನಂತರ ಈ ಹಣವನ್ನು ಯುಎಚ್ವೈ ಸೆಕ್ಸೆನಾ ಕಂಪನಿಗೆ ವರ್ಗಾವಣೆ ಮಾಡಿರುವ ದಾಖಲೆಗಳನ್ನು ತನಿಖಾ ತಂಡ ಕಲೆ ಹಾಕಿರುವ ಹಿನ್ನೆಲೆಯಲ್ಲಿ ಯುಎಚ್ವೈ ಸೆಕ್ಸೆನಾ ಕಂಪನಿಯ ನಿರ್ದೇಶಕಿಯಾಗಿರುವ ಶಿವಾನಿ ಸಕ್ಸೆನಾ ಅವರು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ 3,600 ಕೋಟಿ ರು.ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ ನಡೆದಿದ್ದು ಈ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದೆ.












Click it and Unblock the Notifications