ಮರ್ಯಾದೆಗಾಗಿ ಪುತ್ರಿಗೆ ಗುಂಡಿಟ್ಟು ಹತ್ಯೆ ಮಾಡಿದ ಅಪ್ಪ

ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ರುಚಿಯನ್ನು ಆಕೆಯ ಪ್ರಿಯಕರನೊಂದಿಗೆ (ಶೇರ್ ಸಿಂಗ್ ಎಂಬಾತ) ರೂಮಿನಲ್ಲಿ ನೋಡಿದ ಅಪ್ಪ, ಅದೇ ಘಳಿಗೆಯಲ್ಲಿ ಗುಂಡಿಟ್ಟು ಸಾಯಿಸಿದ್ದಾನೆ. ರುಚಿ ಬೇರೆ ಜಾತಿಯ ಹುಡುಗನೊಂದಿಗೆ ಪ್ರೇಮ ವ್ಯವಹಾರದಲ್ಲಿ ತೊಡಗಿದ್ದೇ ಅಪ್ಪನ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
ಚೌಗನ್ ಗ್ರಾಮದ ಅಶೋಕ್ ಸಿಕಾರವರ್ ಈ ಕುಕೃತ್ಯವೆಸಗಿದ ಆರೋಪಿ. ಈತನಿಗೆ ಮೂವರು ಪುತ್ರಿಯರು. ರುಚಿ ಕೊನೆಯವಳು ಎಂದು ಹಿರಿಯ ಪೊಲೀಸ್ ಅಧಿಕಾರಿ ಶಲಾಬ್ ಮಾಥುರ್ ತಿಳಿಸಿದ್ದಾರೆ.
ಅಶೋಕ್ ಕುಕೃತ್ಯವೆಸಗುತ್ತಿದ್ದಂತೆ ಚೀರಿಕೊಂಡ ಶೇರ್ ಸಿಂಗ್ ರೂಮಿನ ಒಳಗಿನಿಂದ ಚಿಲಕ ಹಾಕಿಕೊಂಡು ತನ್ನ ಸಂಬಂಧಿಕರು ಮತ್ತು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ. ಅಶೋಕ್ ಮತ್ತು ಆತನ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ.











Click it and Unblock the Notifications