ಅನಾರೋಗ್ಯದ ಬಳಿಕ ಗೋವಾ ಸಿಎಂ ಪರಿಕ್ಕರ್ ಈಗ ಹೇಗಿದ್ದಾರೆ ನೋಡಿ
ಪಣಜಿ, ನವೆಂಬರ್ 03: ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದು ನಂತರ ದೆಹಲಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇದೀಗ ನಿಧಾನವಾಗಿ ಗುಣಮುಖರಾಗುತ್ತಿದ್ದಾರೆ.
ಅನಾರೋಗ್ಯದಿಂದ ತೀವ್ರ ಕೃಷರಾಗಿರುವ ಮನೋಹರ ಪರಿಕ್ಕರ್ ಅವರು ತಮ್ಮ ಮೊದಲಿನ ದೈಹಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ. ಅವರ ಇತ್ತೀಚಿಗಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೊದಲಿನ ಪರಿಕ್ಕರ್‌ಗೂ ಈಗಿನ ಪರಿಕ್ಕರ್‌ಗೂ ಅಜಗಜಾಂತರ ವ್ಯತ್ಯಾಸವಿದೆ.
ಸತತ ರೋಗದ ಭಾದೆ ಮತ್ತು ನೋವೇಳಿಸುವ ಸತತ ಚಿಕಿತ್ಸೆಗೆ ಗುರಿಯಾಗಿದ್ದ ಪರಿಕ್ಕರ್ ದೇಹ ಬಹು ಕೃಷವಾಗಿದೆ. ಮೈಬಣ್ಣ ಬಿಳುಚಿಕೊಂಡಿದೆ. ಕೈಗಳು ಕಡ್ಡಿಯಂತಾಗಿವೆ. ಕಣ್ಣು ಹೊಳಪು ಕಳೆದುಕೊಂಡಿದೆ.
ದೇಹ ಮೊದಲಿನ ಹಾಗೆ ಇಲ್ಲದೇ ಇದ್ದರು ಅವರ ಮನಸ್ಸು ಧೃಡತೆ ಕಳೆದುಕೊಂಡಂತಿಲ್ಲ. ಅವರು ಗೋವಾ ಸಿಎಂ ಆಗಿ ಮುಂದುವರೆಯಲು ತೋರಿರುವ ಆಸಕ್ತಿಯೇ ಇದಕ್ಕೆ ಸಾಕ್ಷಿ. ಸ್ವಲ್ಪ ಗುಣಮುಖರಾಗುತ್ತಿದ್ದಂತೆ ಆಸ್ಪತ್ರೆಯಲ್ಲಿಯೇ ಅವರು ಮಂತ್ರಿ ಮಂಡಲದ ಸಭೆಯನ್ನೂ ನಡೆಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ
ತಮ್ಮ ಅನಾರೋಗ್ಯವನ್ನು, ದೇಹ ಬದಲಾವಣೆಯನ್ನು ಅವರು ಗುಟ್ಟಾಗಿ ಇರಿಸಿಕೊಳ್ಳಬೇಕು ಎಂದುಕೊಂಡಿಲ್ಲ ಹಾಗಾಗಿಯೇ ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರ ಈ ಪಾರದರ್ಶಕತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

ಹಲವು ತಿಂಗಳು ಖಾಯಿಲೆಯಿಂದ ಬಳಲಿದ್ದರು
ಪ್ಯಾಂಕ್ರಿಯೇಟಿಕ್ ಅಲಿಮೆಂಟ್ ಎಂಬ ಖಾಯಿಲೆಯಿಂದ ಮನೋಹರ ಪರಿಕ್ಕರ್ ಅವರು ಬಳಲುತ್ತಿದ್ದರು. ಕೆಲವು ದಿನ ವಿದೇಶದಲ್ಲಿ ಚಿಕಿತ್ಸೆ ಪಡೆದ ಬಳಿಕ ವಾಪಸ್ಸಾಗಿ ಮತ್ತೆ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದರು. ಈಗ ಸ್ವಗೃಹಕ್ಕೆ ಮರಳಿರುವ ಪರಿಕ್ಕರ್ ಅಲ್ಲಿಯೂ ಸರ್ಕಾರಿ ಸಂಬಂಧಿಸಿದ ಸಭೆಗಳಲ್ಲಿ ಬ್ಯುಸಿ ಆಗಿದ್ದಾರೆ.

ಸುಂದರಿ ಸೊನಾಲಿ ಬೇಂದ್ರೆ ಮಾದರಿ
ಬಾಲಿವುಡ್‌ನಲ್ಲಿಯಂತೂ ಅದರಲ್ಲೂ ನಾಯಕಿಯರು ಸಣ್ಣ ಮೊಡವೆ ಆದರೆ ಮನೆಯಿಂದ ಹೊರಬರುವುದಿಲ್ಲ ಆದರೆ ಸೊನಾಲಿ ಬೇಂದ್ರೆ ಹಾಗೆ ಮಾಡಲಿಲ್ಲ. ಇತ್ತೀಚೆಗೆ ಅವರು ಕ್ಯಾನ್ಸರ್‌ಗೆ ತುತ್ತಾದರೂ, ಚಿಕಿತ್ಸೆಯಿಂದ ಅವರ ತಲೆ ಕೂದಲು ಉದುರಿಹೋದವು. ಆದರೆ ಕೂದಲು ಉದುರಿರುವ ಚಿತ್ರವನ್ನೇ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಚಿತ್ರದಲ್ಲಿ ಮನಃಪೂರ್ಣವಾಗಿ ನಗುತ್ತಿದ್ದ ಅವರು ಎಂದಿಗಿಂತಲೂ ಸುಂದರವಾಗಿ ಕಾಣುತ್ತಿದ್ದರು.

ಯುವರಾಜ್ ಸಿಂಗ್ ಕೂಡಾ ಮಾದರಿ
ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ತಮ್ಮ ಅನಾರೋಗ್ಯದ ವಿಷಯವನ್ನಾಗಲಿ ಆ ನಂತರ ಅವರ ದೇಹದಲ್ಲಾದ ಬದಲಾವಣೆ (ತೂಕ, ಕೂದಲು ಉದರುವುದು) ಮುಚ್ಚಿಡಲಿಲ್ಲ, ಆಸ್ಪತ್ರೆಯ ಬೆಡ್ ಮೇಲೆ ಮಲಗಿ ವಿಕ್ಟರಿ ಸಿಂಬಲ್ ತೋರುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಯುವರಾಜ್ ಹಾಕಿದ್ದರು.

ಅನಾರೋಗ್ಯವನ್ನು ಗುಟ್ಟಾಗಿಟ್ಟಿದ್ದಾರೆ ಕೆಲವರು
ಖಾಯಿಲೆಗೆ ತುತ್ತಾಗುತ್ತಿದ್ದಂತೆ ಹೊರ ಜಗತ್ತಿನೊಂದಿಗೆ ನಂಟು ಕಳೆದುಕೊಳ್ಳುವ ಹಲವರನ್ನು ನಾವು ನೋಡಿದ್ದೇವೆ. ಅನಂತ್ ಕುಮಾರ್ ಅವರಿಗೆ ಅನಾರೋಗ್ಯವಾಗಿದೆ ಆದರೆ ಆ ಬಗ್ಗೆ ಚಿತ್ರವಿರಲಿ ಮಾಹಿತಿ ಸಹ ಅವರು ಹಂಚಿಕೊಳ್ಳಲು ನಿರ್ಬಂಧ ಹೇರಿದಂತಿದೆ. ಇಂತಹಾ ಹಲವು ಮಂದಿ ಮಧ್ಯೆ ಪರಿಕ್ಕರ್ ಭಿನ್ನರು.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications