ಸಾಮಾಜಿಕ ಭದ್ರತೆಗೆ 3 ಹೊಸ ವಿಮಾ ಯೋಜನೆ
ಮುಂಬೈ, ಮೇ 10: ಕೇಂದ್ರ ಸರ್ಕಾರ ಸಾಮಾನ್ಯ ನಾಗರೀಕರಿಗೆ ಅನುಕೂಲವಾಗುವಂಥ ಮೂರು ಹೊಸ ವಿಮಾ ಯೋಜನೆಗಳನ್ನು ಜಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ 'ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನಾ (ಅಪಘಾತ ವಿಮೆ)', 'ಪ್ರಧಾನ ಮಂತ್ರಿ ಜೀವಜ್ಯೋತಿ ಯೋಜನಾ (ಜೀವ ವಿಮೆ)'ಹಾಗು 'ಅಟಲ್ ಪಿಂಚಣಿ ಯೋಜನೆಗಳನ್ನು ಶನಿವಾರ' ಅನಾವರಣ ಮಾಡಿದ್ದಾರೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]
ಈ ಯೋಜನೆಯ ಮೂಲಕ ದೇಶದ ಜನರಿಗೆ ಸಾಮಾಜಿಕ ಭದ್ರತೆ ದೊರೆಯಲಿದೆ. ದೇಶದ 115 ಕಡೆ ಒಮ್ಮೆಲೆ ಈ ಯೋಜನೆಗೆ ಚಾಲನೆ ದೊರೆಯಿತು. ಮಾಸಿಕ 1 ರೂ.ಗೆ 2 ಲಕ್ಷ ರೂ. ಅಪಘಾತ ವಿಮೆ ಒದಗಿಸುವ "ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ', ವಾರ್ಷಿಕ 330 ರೂ.ಗೆ 2 ಲಕ್ಷ ರೂ. ಜೀವವಿಮೆ ಒದಗಿಸುವ "ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ', ಅಸಂಘಟಿತ ವಲಯದ ಆರ್ಥಿಕ ದುರ್ಬಲ ವರ್ಗದವರಿಗೆ ಸರ್ಕಾರದಿಂದ ನಿಶ್ಚಿತ ಪಿಂಚಣಿ ಒದಗಿಸುವ"ಅಟಲ್ ಪಿಂಚಣಿ ಯೋಜನೆ'ಗಳಿಗೆ ಮೋದಿ ಚಾಲನೆ ನೀಡಿದರು.

ನಾಗರೀಕರ ಅನುಕೂಲಕ್ಕೆಂದು ಮೊದಲು ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆದರೆ ದೇಶದ ಶೇ.80ರಿಂದ ಶೇ.90 ಜನರಿಗೆ ಪಿಂಚಣಿ ಹಾಗೂ ವಿಮೆ ಬಗ್ಗೆ ಮಾಹಿತಿಯೇ ಇಲ್ಲ. ಅದನ್ನು ಹೊಗಲಾಡಿಸಲು ಈ ಯೋಜನೆಗಳನ್ನು ಜಾರಿ ಮಾಡುತ್ತಿರುವುದಾಗಿ ತಿಳಿಸಿದರು.[ಜನಧನ ಯೋಜನೆಯಡಿ ಯಾಕೆ ಖಾತೆ ತೆರೆಯಬೇಕು?]
ಜನಧನ ಯೋಜನೆ ಮೂಲಕ ದೇಶದ ಕೋಟ್ಯಂತರ ಜನ ಬ್ಯಾಂಕ್ ಖಾತೆ ಹೊಂದಿದ್ದಾರೆ. ಈಗ ವಿಮೆ ಮತ್ತು ಪಿಂಚಣಿ ಸೌಲಭ್ಯವನ್ನು ಸುಲಭವಾಗಿ ನೀಡಲು ಇಂಥ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಕೇಂದ್ರ ಸಚಿವ ಸಂಪುಟದ ಸಚಿವರು ಹಾಜರಿದ್ದರು.


Click it and Unblock the Notifications
