ಎಲ್ಲಾ ನೋಟು ನಿಷೇಧದ ಮಹಿಮೆ: ಸದ್ಯ ಕಾಶ್ಮೀರ ಕಣಿವೆ ಸಂಪೂರ್ಣ ಶಾಂತ

Written By:
Subscribe to Oneindia Kannada

ಐನೂರು, ಸಾವಿರ ರೂಪಾಯಿ ನೋಟು ನಿಷೇಧಕ್ಕೂ ಕಾಶ್ಮೀರ ಕಣಿವೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರುವುದಕ್ಕೂ ಏನು ಸಂಬಂಧ? ಪಾಕ್ ನಿಂದ ಸರಬರಾಜು ಆಗುತ್ತಿದ್ದ ಕಳ್ಳ ನೋಟಿಗೆ ಮೋದಿ ಸರಕಾರ ಇತಿಶ್ರೀ ಹಾಡಿದ್ದು ಕಾರಣವಿರಬಹುದೇ?

ಹೌದು. ಕಾಶ್ಮೀರ ಭಾಗದ ಹಲವು ನಿರುದ್ಯೋಗಿ ಮತ್ತು ಅವಿದ್ಯಾವಂತ ಯುವಕರಿಗೆ ಪಾಕಿಸ್ತಾನದಿಂದ ಬರುವ ಕಳ್ಳನೋಟೇ ಜೀವನಾಧಾರ. ತಮ್ಮನ್ನು ತಾವು 'ಫ್ರೀಡಂ ಫೈಟರ್' ಎಂದು ಗುರುತಿಸಿಕೊಂಡು ಈ ಭಾಗದಲ್ಲಿ ಅಶಾಂತಿ ಮೂಡಿಸುವುದು ಇವರ ಕಾಯಕ. (ಹಣ ಸಿಗದೆ ಬೇಸತ್ತು ಮೇಲುಡುಪನ್ನೇ ಕಳಚಿದ ಮಹಿಳೆ)

ಈ ಕೆಲಸಕ್ಕೆ ದಿನವೊಂದಕ್ಕೆ/ತಿಂಗಳಿಗೊಮ್ಮೆ ಇಷ್ಟೊಂದು ಮೊತ್ತವನ್ನು ಪರದೆಯ ಹಿಂದೆ ಇರುವ ಖಳನಾಯಕರು ಯುವಕರಿಗೆ ನಿಗದಿ ಪಡಿಸಿರುತ್ತಾರೆ. ತಮ್ಮ ಲೆಕ್ಕಾಚಾರಕ್ಕೂ ಮೀರಿ ಅಶಾಂತಿ ಸೃಷ್ಟಿಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಉಗ್ರ ಸಂಘಟನೆಯ ಮುಖಂಡರು ಯುವಕರಿಗೆ ನೀಡುತ್ತಾರೆ.

ಕಾಶ್ಮೀರ ಭಾಗದ ಯುವಕರು ಮತ್ತು ಉಗ್ರ ಸಂಘಟನೆಯ ಮುಖಂಡರ ನಡುವೆ ಮಧ್ಯವರ್ತಿಯ ಮುಖಾಂತರ ಯುವಕರಿಗೆ ಕೆಲಸ ವಹಿಸಲಾಗುತ್ತದೆ. ಪೇಷಾವರ ಪ್ರಿಂಟಿಂಗ್ ಪ್ರೆಸ್ ನಲ್ಲಿ ಅಚ್ಚಾಗುವ ಕಳ್ಳ ರೂಪಾಯಿ ನೋಟುಗಳನ್ನು ಇವರಿಗೆ ತಲುಪಿಸಲಾಗುತ್ತದೆ.

ಕಲ್ಲು ತೂರಾಟಕ್ಕೆ ಇಷ್ಟು, ಯೋಧರ ಮೇಲೆ ಕಲ್ಲು ತೂರಿದರೆ ಇನ್ನಷ್ಟು, ಸೇನೆಯ/ಪೊಲೀಸರ ಬಂದೂಕು ಕಳವು ಮಾಡಿದರೆ ಮತ್ತಷ್ಟು.. ಹೀಗೆ ಒಂದೊಂದು ಕೆಲಸಕ್ಕೂ ಮಧ್ಯವರ್ತಿ ಹಣ ನಿಗದಿ ಪಡಿಸಿರುತ್ತಾನೆ. ಕೆಲವು ಕುತೂಹಲಕಾರಿ ಅಂಶಗಳನ್ನು ಮುಂದೆ ಓದಿ..

ರೇಟ್ ಕಾರ್ಡ್

ರೇಟ್ ಕಾರ್ಡ್

ಮಧ್ಯವರ್ತಿಗಳು ನಿಗದಿ ಪಡಿಸಿದ ರೇಟ್ ಕಾರ್ಡ್ ಇಂತಿದೆ:
ಕಲ್ಲು ತೂರಾಟಕ್ಕೆ: 100 - 200 ರೂಪಾಯಿ (ದಿನವೊಂದಕ್ಕೆ)
ಸೇನೆಯ ಮೇಲೆ ಕಲ್ಲು ತೂರಾಟಕ್ಕೆ : 300- 500 ರೂಪಾಯಿ (ದಿನವೊಂದಕ್ಕೆ)
ಸೇನೆಯ ಬಂದೂಕು ಕಳ್ಳತನಕ್ಕೆ : 500 ರೂಪಾಯಿ
ಗ್ರೆನೇಡ್ ಎಸೆದರೆ : ಒಂದು ಸಾವಿರ ರೂಪಾಯಿ.

ನೋಟು ನಿಷೇಧದ ಮಹಿಮೆ

ನೋಟು ನಿಷೇಧದ ಮಹಿಮೆ

ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧದ ನಂತರ ಪಾಕಿಸ್ತಾನದಿಂದ ಸರಬರಾಜು ಆಗುತ್ತಿದ್ದ ಕಳ್ಳನೋಟುಗಳು ಸಂಪೂರ್ಣ ಬಂದ್ ಆಗಿವೆ. ಹಾಗಾಗಿ ಈ ಯುವಕರಿಗೆ ಬೇರೆ ಕೆಲಸವಿಲ್ಲ, ಇದರಿಂದ ಕಾಶ್ಮೀರ ಕಣಿವೆ ಕಳೆದ ಒಂದು ವಾರದಿಂದ ಶಾಂತಿಯುತವಾಗಿದೆ.

ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು

ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು

ಕಳ್ಳನೋಟು ಜೇಬಿನಲ್ಲಿದ್ದಾಗ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು ಎಂದು ಅಶಾಂತಿ ಮೂಡಿಸುತ್ತಿದ್ದ ಈ ಯುವಕರು, ದುಡ್ಡು ಇಲ್ಲದಿದ್ದಾಗ ಆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರಿಗೂ ನೋಟು ಬ್ಯಾನಿನ ಬಿಸಿ ಸರಿಯಾಗಿ ತಟ್ಟಿದೆ. ಮೋದಿಗೆ ಅದೆಷ್ಟು ಶಾಪ ಹಾಕುತ್ತಿದ್ದಾರೋ?

ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದ ಪಿಎಂ

ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದ ಪಿಎಂ

ನೋಟು ನಿಷೇಧದ ಮೂಲಕ ಪ್ರಧಾನಿ ಮೋದಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಯನ್ನು ಹೊಡೆದಿದ್ದಾರೆ. ಪ್ರತ್ಯೇಕತಾವಾದಿ ಮುಖಂಡರಿಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ, ಯುವಕರಿಗೆ ದುಡ್ಡು ಸರಬರಾಜು ಮಾಡುತ್ತಿದ್ದ ಉಗ್ರ ನಾಯಕರು ಕೈಕಟ್ಟಿ ಕೂತರೆ, ಇತ್ತ ದುಡ್ಡು ಸಿಗದ ಯುವಕರು ಒಂದೇ ಒಂದು ಕಲ್ಲನ್ನು ಸೇನೆಯ ಮೇಲೆ ತೂರಲು ಸಿದ್ದರಿಲ್ಲ.

ಮನೋಹರ್ ಪರಿಕ್ಕರ್

ಮನೋಹರ್ ಪರಿಕ್ಕರ್

ಕಾಶ್ಮೀರದಲ್ಲಿ ಕಲ್ಲುತೂರಾಟ ನಡೆಸಿದವರಿಗೆ 500, 1,000 ರೂಪಾಯಿ ನೀಡಲಾಗುತ್ತಿತ್ತು. ಮೋದಿಯವರು ತೆಗೆದುಕೊಂಡ ಕಠಿಣ ನಿರ್ಧಾರದ ನಂತರ ಉಗ್ರ ಸಂಘಟನೆಗಳ ಮೇಲೆ ಸರಿಯಾದ ಆರ್ಥಿಕ ಏಟು ಬಿದ್ದಿದೆ. ನೋಟ್ ಬ್ಯಾನಿನ ನಂತರ ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಕರಣಗಳಾಗಲಿ, ಅಶಾಂತಿಯ ಘಟನೆಗಳಾಗಲಿ ವರದಿಯಾಗಿಲ್ಲ. ಮೋದಿಯವರಿಗೆ ಧನ್ಯವಾದಗಳು - ರಕ್ಷಣಾ ಸಚಿವ ಮನೋಹರ್ ಪರಿಕ್ಕರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After demonetisation: Voilence in Jammu and Kashmir suddenly stopped. Historic move of demonetisation by PM Modi, misguided Kashmiri youth have lost their daily wages for stone throwing, stealing the weapons of Indian army etc.
Please Wait while comments are loading...