ಭಾರತ್ ಜೋಡೋ ಯಾತ್ರೆ ಯಶಸ್ವಿ: ಈ ವರ್ಷದ ಕೊನೆಗೆ ಮತ್ತೊಂದು ಯಾತ್ರೆ ನಡೆಸಲಿದೆ ಕಾಂಗ್ರೆಸ್
ಯಾತ್ರೆಯು ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಆರಂಭಗೊಂಡು 2024ರ ಲೋಕಸಭೆ ಚುನಾವಣೆಗೆ ಮುನ್ನ ಗುಜರಾತ್‌ನ ಪೋರಬಂದರ್‌ನಲ್ಲಿ ಅಂತ್ಯಗೊಳ್ಳಲಿದೆ.
ನವದೆಹಲಿ, ಫೆಬ್ರವರಿ. 27: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ನಂತರ, ಪಕ್ಷವು ಹೊಸ ಮೆರವಣಿಗೆಯ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ತೆರಳಲಿದೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಪಕ್ಷವು ಮೂರು ದಿನಗಳ ಮಹಾಧಿವೇಶನ ಸಮಾರೋಪದಲ್ಲಿ ಈ ನಿರ್ಧಾರ ಘೋಷನೆಯಾಗಿದೆ. ಪಾಸಿಘಾಟ್‌ನಿಂದ ಪೋರಬಂದರ್ ಯಾತ್ರೆಯು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ ಪಾಸಿಘಾಟ್‌ನಿಂದ ಪೋರಬಂದರ್ ಯಾತ್ರೆಯು ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಆರಂಭಗೊಂಡು 2024ರ ಲೋಕಸಭೆ ಚುನಾವಣೆಗೆ ಮುನ್ನ ಗುಜರಾತ್‌ನ ಪೋರಬಂದರ್‌ನಲ್ಲಿ ಅಂತ್ಯಗೊಳ್ಳಲಿದೆ. ಆದರೆ, ಈ ಯಾತ್ರೆಯು ಭಾರತ್ ಜೋಡೋ ಯಾತ್ರೆಯ ಸ್ವರೂಪಕ್ಕಿಂತ ಸ್ವಲ್ಪ ಭಿನ್ನವಾಗಿರಬಹುದು ಎಂದು ಪಕ್ಷದ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ.

ಮುಂದಿನ ವಾರಗಳಲ್ಲಿ ಯಾತ್ರೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಜೈರಾಮ್ ರಮೇಶ್ ಪ್ರಕಾರ ಜೂನ್ ಮೊದಲು ಅಥವಾ ನವೆಂಬರ್ ಮೊದಲು ಯಾತ್ರೆ ಕೈಗೊಳ್ಳಬಹುದು. ಕರ್ನಾಟಕದಲ್ಲಿ ಏಪ್ರಿಲ್‌ನಲ್ಲಿ ಚುನಾವಣೆ, ಜೂನ್‌ನಿಂದ ಮಳೆ ಮತ್ತು ನವೆಂಬರ್‌ನಲ್ಲಿ ಮತ್ತೆ ರಾಜ್ಯ ಚುನಾವಣೆಗಳಿವೆ ಈ ಕಾರಣಗಳಿಂದ ದಿನಾಂಕ ಅದಲು ಬದಲಾಗಬಹದು ಎನ್ನಲಾಗಿದೆ.
"ಯಾತ್ರೆಗಾಗಿ ಬಹಳ ಉತ್ಸಾಹ ಮತ್ತು ಶಕ್ತಿ ಇದೆ. ವೈಯಕ್ತಿಕವಾಗಿಯೂ ಇದು ಬೇಕು ಎಂದು ನಾನು ಭಾವಿಸುತ್ತೇನೆ. ಆದರೆ ಪೂರ್ವ - ಪಶ್ಚಿಮ ಯಾತ್ರೆಯ ಸ್ವರೂಪವು ದಕ್ಷಿಣದಿಂದ ಉತ್ತರಕ್ಕೆ ನಡೆದ ಭಾರತ್ ಜೋಡೋ ಯಾತ್ರೆಯ ಸ್ವರೂಪಕ್ಕಿಂತ ಭಿನ್ನವಾಗಿರಬಹುದು. ಭಾರತ್ ಜೋಡೋ ಯಾತ್ರೆಗಾಗಿ ಸಜ್ಜುಗೊಳಿಸಿದ ಅದೇ ವಿಸ್ತಾರವಾದ ಮೂಲಸೌಕರ್ಯವನ್ನು ಹೊಂದಿಲ್ಲದಿರಬಹುದು, ಕಡಿಮೆ ಪಾದಯಾತ್ರೆಗಳು ಭಾಗವಹಿಸುತ್ತಾರೆ. ಈ ಮಾರ್ಗದಲ್ಲಿ ಕಾಡಾನೆಗಳು ಮತ್ತು ನದಿಗಳು ಹೇರಳವಾಗಿರುವ ಕಾರಣ ಇದು ಬಹು-ಮಾದರಿ ಯಾತ್ರೆಯಾಗಲಿದೆ " ಎಂದು ಪಕ್ಷದ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಮೂಲಕ ಕೈಗೊಂಡ "ತಪಸ್ಯ" ವನ್ನು ಮುಂದುವರಿಸಲು ಪಕ್ಷವು ಹೊಸ ಯೋಜನೆಯನ್ನು ರೂಪಿಸಬೇಕು ಎಂದು ಕಾಂಗ್ರೆಸ್ ಸರ್ವಸದಸ್ಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು ಹೇಳಿದ್ದಾರೆ. ಅದರಲ್ಲಿ ಇಡೀ ದೇಶದೊಂದಿಗೆ ತಾನೂ ಭಾಗವಹಿಸುವುದಾಗಿಯೂ ಹೇಳಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಈ ವರ್ಷದ ಜನವರಿವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸುಮಾರು 4,000 ಕಿಮೀ ಉದ್ದದ ಕನ್ಯಾಕುಮಾರಿ - ಕಾಶ್ಮೀರ ಭಾರತ್ ಜೋಡೋ ಯಾತ್ರೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಶಕ್ತಿ ತುಂಬಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.












Click it and Unblock the Notifications