Get Updates
Get notified of breaking news, exclusive insights, and must-see stories!

ಮದುವೆ ಪಾವಿತ್ರ್ಯ ಉಳಿಯಲು ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿ

Recommended Video

      ಮದುವೆ ಪಾವಿತ್ರ್ಯ ಉಳಿಯಲು ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸಿ | Oneindia kannada

      ನವದೆಹಲಿ, ಜುಲೈ 11: ಅಕ್ರಮ ಸಂಬಂಧದ ಪ್ರಕರಣಗಳನ್ನು ತಪ್ಪು ಎಂದೇ ಪರಿಗಣಿಸಬೇಕು. ಹೀಗೆ ಮಾಡುವುದರಿಂದ ಮದುವೆಯ ಪಾವಿತ್ರ್ಯ ಉಳಿಯುತ್ತದೆ ಎಂದು ಕೇಂದ್ರ ಸರಕಾರವು ಬುಧವಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

      ಪತ್ನಿಯನ್ನು ಹೊರತುಪಡಿಸಿ ಇತರ ಮಹಿಳೆ ಜತೆಗೆ ಲೈಂಗಿಕ ಸಂಬಂಧ ಹೊಂದಿದ್ದರೆ ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ಪುರುಷನದು ಮಾತ್ರ ಅಪರಾಧವಾಗುತ್ತದೆ. ಸೆಕ್ಷನ್ 497 ಜಾರಿಗೆ ತಂದಿದ್ದು ಮದುವೆಯ ಪವಿತ್ರ ಸಂಬಂಧವನ್ನು ರಕ್ಷಿಸುವ ಸಲುವಾಗಿ. ಅದರಲ್ಲೇನಾದರೂ ಬದಲಾವಣೆ ತಂದುಬಿಟ್ಟರೆ ಮದುವೆ ಬಾಂಧವ್ಯಕ್ಕೆ ಕುತ್ತು ತಂದಂತೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

      ವಿವಾಹಿತ ಪುರುಷನ ಮತ್ತೊಬ್ಬ ವ್ಯಕ್ತಿಯ ಪತ್ನಿ ಜತೆಗೆ ಒಪ್ಪಿಗೆಯ ಲೈಂಗಿಕ ಸಂಬಂಧವನ್ನು ಇರಿಸಿಕೊಂಡರೆ ಅದಕ್ಕೆ ಐಪಿಸಿ ಅಡಿಯಲ್ಲಿ ಪುರುಷನಿಗೆ ಮಾತ್ರ ಇರುವ ಶಿಕ್ಷೆಯ ಬಗ್ಗೆ, 157 ವರ್ಷದ ಹಳೆಯ ಲಿಂಗ ಅಸಮಾನತೆ ವಿಚಾರದ ಸಾಂವಿಧಾನಿಕ ಮಾನ್ಯತೆ ಪರಿಶೀಲಿಸಲು ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು.

      Adultery must stay for sanctity of marriage, Centre tells SC

      ಪ್ರಕರಣಗಳಲ್ಲಿ ಗಂಡು- ಹೆಣ್ಣು ಇಬ್ಬರನ್ನೂ ಸಮಾನವಾಗಿ ಜವಾಬ್ದಾರಿ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರಕಾರ ಅಫಿಡವಿಟ್ ಸಲ್ಲಿಸಿತ್ತು.

      ಸೆಕ್ಷನ್ 497ರ ಪ್ರಕಾರ, ಯಾವುದೇ ಪುರುಷ ಮತ್ತೊಬ್ಬ ಪುರುಷನ ಪತ್ನಿಯ ಜತೆ ಒಪ್ಪಿಗೆಯ ಲೈಂಗಿಕ ಸಂಬಂಧ ಹೊಂದಿದ್ದರೆ ಅದು ಅತ್ಯಾಚಾರ ಆಗುವುದಿಲ್ಲ. ಅದನ್ನು ವ್ಯಭಿಚಾರ ಎಂದು ಪರಿಗಣಿಸಲಾಗುತ್ತದೆ. ಈ ಅಪರಾದಕ್ಕೆ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅಥವಾ ದಂಡ ಅಥವಾ ಜೈಲು ಶಿಕ್ಷೆ ಮತ್ತು ದಂಡ ಎರಡೂ ವಿಧಿಸಬಹುದು. ಅಂಥ ಸಂದರ್ಭಗಳಲ್ಲಿ ಮಹಿಳೆಯನ್ನು ತಪ್ಪಿಗೆ ಪ್ರೋತ್ಸಾಹಿಸಿದ್ದಕ್ಕೆ ಶಿಕ್ಷಿಸಲು ಸಾಧ್ಯವಿಲ್ಲ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+