Adani Group: ಅದಾನಿ ಪೋರ್ಟ್‌ನಿಂದ ವಿಶ್ವದ ಮೊದಲ ಸ್ಟೀಲ್ ರಸ್ತೆ ಲೋಕಾರ್ಪಣೆ

Adani Ports Steel Road: ಎಲ್ಲ ರಂಗಗಳಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿರುವ ಅದಾನಿ ಸಮೂಹದ ಕಂಪನಿಯಾಗಿರುವ 'ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್' (APSEZ) ಬಂದರಿನಲ್ಲಿ ಪ್ರಪಂಚದ ಮೊದಲು ಉಕ್ಕಿನ ಸ್ಲ್ಯಾಗ್ ರಸ್ತೆಯನ್ನು ಇಂದು ಶನಿವಾರ ಉದ್ಘಾಟನೆ ಮಾಡಿದೆ. ಈ ಯೋಜನೆಯು ಜಾಗತಿಕ ಆರ್ಥಿಕತೆ ಹಾಗೂ ಅಭಿವೃದ್ಧಿಯಲ್ಲಿ ಹೊಸ ಮಾನದಂಡ ಸೃಷ್ಟಿಸಿದೆ ಎಂದು ವರದಿ ಆಗಿದೆ.

ಹೌದು, APSEZ ಕಂಪನಿಯು ಹಜೀರಾ ಬಂದರಿನೊಳಗೆ 1.1 ಕಿಲೋಮೀಟರ್‌ ಉದ್ದದ ಉಕ್ಕಿನ ಸ್ಲ್ಯಾಗ್ ರಸ್ತೆ ನಿರ್ಮಿಸಿದೆ. ಸುಸ್ಥಿರ ರಸ್ತೆ ಇದಾಗಿದ್ದು, ಬಹುಪಯೋಗಿ ಬರ್ತ್ (MPB-1) ನಿಂದ ಕಲ್ಲಿದ್ದಲು ಯಾರ್ಡ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಉಕ್ಕಿನ ಉತ್ಪಾದನೆಯ ಉಪ-ಉತ್ಪನ್ನವಾದ ಸಂಸ್ಕರಿಸಿತ ಉಕ್ಕಿನ ಸ್ಲ್ಯಾಗ್ ಹಾಗೂ ಕೈಗಾರಿಕಾ ತ್ಯಾಜ್ಯವನ್ನು ಬಳಸಿ ಮಾಡಿದ ರಸ್ತೆಯಾಗಿದೆ. ಈ ರಸ್ತೆ ಬಾಳಿಕೆ ಬರುವ ಜೊತೆಗೆ ಹೇಗೆ ತ್ಯಾಜ್ಯವನ್ನು ಮರಬಳಕೆ ಮಾಡಿ ಮೂಲಸೌಕರ್ಯಕ್ಕೆ ಬಳಕೆ ಮಾಡಬಹುದೆಂದು ಸಾಬೀತು ಮಾಡಿದೆ.

Adani Ports Builds World s First Steel slag Road Inside a Port at Hazira See more

ಈ ಉಕ್ಕಿನ ಸ್ಲ್ಯಾಗ್ ರಸ್ತೆ ಯೋಜನೆಯನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ - ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CSIR-CRRI) ಮತ್ತು ಕೇಂದ್ರ ವಿಜ್ಞಾನ & ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಬೃಹತ್ ಮತ್ತು ಸಾಮಾನ್ಯ ಸರಕು ಟರ್ಮಿನಲ್ (BGCT) ವಿಸ್ತರಣೆಯ ಹಂತ-II ರ ಭಾಗವಾಗಿ ಈ ರಸ್ತೆ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ರಸ್ತೆಯಲ್ಲಿ ಅಂಟಿಕೊಂಡಂತಿರುವ ಪಾದಚಾರಿ ವಿನ್ಯಾಸ ಮಾರ್ಗವು ಲೋಡ್-ಬೇರಿಂಗ್ ಸಾಮರ್ಥ್ಯ ಹೊಂದಿದೆ. ರಸ್ತೆಗೆ ದೀರ್ಘಾಯುಷ್ಯ ಇದ್ದು, ಈ ಯೋಜನೆ ನಿರ್ಮಾಣ ವೆಚ್ಚ ಹಾಗೂ ನೈಸರ್ಗಿಕ ದುಷ್ಪರಿಣಾಮ ಕಡಿಮೆ ಮಾಡುತ್ತದೆ. ಒಟ್ಟಾರೆ ಈ ರಸ್ತೆಯೋಜನೆಯು ಪರಿಸರ ಕಾಳಜಿ ಜೊತೆಗೆ ಬಂದರು ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಬದ್ಧತೆ ಒದಗಿಸುತ್ತದೆ.

ಹಜೀರಾ ಬಂದರಿನಲ್ಲಿ ಅದಾನಿ ಕಂಪನಿಯು ಸ್ಥಾಪಿಸಿದ ಈ ರಸ್ತೆಯನ್ನು ನೀತಿ ಆಯೋಗದ ಸದಸ್ಯ (ವಿಜ್ಞಾನ ಮತ್ತು ತಂತ್ರಜ್ಞಾನ) ಡಾ. ವಿಜಯ್ ಕುಮಾರ್ ಸಾರಸ್ವತ್ ಹಾಗೂ CSIR ನ ಮಹಾ ನಿರ್ದೇಶಕ ಮತ್ತು DSIR ಕಾರ್ಯದರ್ಶಿ ಡಾ. ಎನ್. ಕಲೈಸೆಲ್ವಿ, CSIR-CRRI ನಿರ್ದೇಶಕ ಮತ್ತು ಭಾರತೀಯ ರಸ್ತೆಗಳ ಕಾಂಗ್ರೆಸ್ ಅಧ್ಯಕ್ಷ ಡಾ. ಮನೋರಂಜನ್ ಪರಿದಾ ಅವರು ಉದ್ಘಾಟಿಸಿ ಮಾತನಾಡಿದರು.

ಸ್ಟೀಲ್ ಸ್ಲ್ಯಾಗ್ ರಸ್ತೆ ತಂತ್ರಜ್ಞಾನದ ಹಿರಿಯ ವಿಜ್ಞಾನಿ ಮತ್ತು ಸಂಶೋಧಕ ಸತೀಶ್ ಪಾಂಡೆ, ಅದಾನಿ ಹಜೀರಾ ಬಂದರು ಕಂಪನಿಯ ಸಿಒಒ ಆನಂದ್ ಮರಾಠೆ ಮತ್ತಿತರರು ರಸ್ತೆ ಲೋಕಾರ್ಪಣೆಗೆ ಸಾಕ್ಷಿಯಾದರು.

ಜಾಗತಿಕ ಬಂದರಿನಲ್ಲಿ ನಿರ್ಮಿಸಿ ಮೊದಲ ರಸ್ತೆಯಾಗಿರುವ ಸದರಿ ಉಕ್ಕಿನ ಸ್ಲ್ಯಾಗ್ ರಸ್ತೆಯು ದೇಶದ ಮೂರನೇ ರಸ್ತೆಯಾಗಿದೆ. ಭಾರತ ಮತ್ತು APSEZ ಸುಸ್ಥಿರ ಕಡಲ ಭಾಗದ ಮೂಲಸೌಕರ್ಯವಾಗಿದೆ. ರಾಷ್ಟ್ರೀಯ ಬೆಳವಣಿಗೆ, ಹೊಸತನ, ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಕೈಗಾರಿಕಾ ಪರಿಸರ ವಿಜ್ಞಾನಕ್ಕೆ ಪೂರಕವಾದ ರಸ್ತೆ ಯೋಜನೆ ಇದಾಗಿದೆ ಎಂದು ಅತಿಥಿಗಳು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+