ಅದಾನಿ ಸಂಸ್ಥೆ ಷೇರುಗಳಿಗೆ ಮತ್ತೆ ಸಂಕಷ್ಟ, ಬೆಳಗ್ಗೆಯೇ ಮತ್ತಷ್ಟು ಕುಸಿದ ಷೇರುಗಳು!
ಭಾರತದ ಶ್ರೀಮಂತ ಉದ್ಯಮಿ ಅದಾನಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಈ ಸಮಯದಲ್ಲಿ ದೂರದ ಅಮೆರಿಕ ಗೌತಮ್ ಅದಾನಿ ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಅರೆಸ್ಟ್ ಮಾಡಲು ಪ್ರಯತ್ನ ನಡೆಸುತ್ತಿದ್ದರೆ. ಮತ್ತೊಂದು ಕಡೆ ಸಂಚಲನ ಸೃಷ್ಟಿಸುವ ಘಟನೆಗಳು ಈಗ ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿವೆ. ಅದರಲ್ಲೂ ಇಂದು ಬೆಳಗ್ಗೆಯೇ ಅದಾನಿ ಸಂಸ್ಥೆಯ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಹಾಗಿದ್ರೆ ಹೇಗಿತ್ತು ಇವತ್ತಿನ ಆರಂಭ? ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಅದಾನಿ ಸಂಸ್ಥೆ ಷೇರು ಅಂದ್ರೆ ಒಂದು ಕಾಲದಲ್ಲಿ ಖರೀದಿ ಮಾಡುವುದು ಕೂಡ ಕಷ್ಟ, ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ಯಾವಾಗ ಹಿಂಡನ್ ಬರ್ಗ್ ವರದಿ ಹೊರಗೆ ಬಿತ್ತೋ, ಅಲ್ಲಿಂದ ಮುಂದೆ ಪರಿಸ್ಥಿತಿ ಬದಲಾಗಿ ಹೋಗಿತ್ತು. ಅದಾನಿ ಸಂಸ್ಥೆ ಷೇರುಗಳು ತೀವ್ರವಾಗಿ ಕುಸಿತ ಕಂಡು ಕೊನೆಗೆ ತಲ್ಲಣ ಸೃಷ್ಟಿಯಾಗಿತ್ತು. ಇಂತಹ ಸಮಯದಲ್ಲೇ ಮತ್ತೆ ಅದಾನಿ ಸಂಸ್ಥೆ ಷೇರುಗಳಿಗೆ ಇದೀಗ ಗಂಡಾಂತರ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅದಾನಿ ಸಂಸ್ಥೆ ಷೇರುಗಳಿಗೆ ಆಘಾತ!
ಭಾರತದ ಷೇರು ಮಾರುಕಟ್ಟೆ ಆರಂಭದಲ್ಲೇ ಅದಾನಿ ಸಂಸ್ಥೆ ಷೇರುಗಳು ಕುಸಿತ ಕಂಡವು. ಅದರಲ್ಲೂ ಅದಾನಿ ಸಮೂಹದ 10 ಕಂಪನಿಗಳ ಷೇರುಗಳಲ್ಲಿ 8 ಷೇರುಗಳ ಮೌಲ್ಯವು ಇಳಿಕೆ ಕಂಡು ಭಾರಿ ಆತಂಕ ಮೂಡಿತ್ತು.
ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸಲ್ಯೂಷನ್ಸ್, ಸೇರಿದಂತೆ ಅದಾನಿ ಎಂಟರ್‌ಪ್ರೈಸಸ್ ಮತ್ತು ಇನ್ನಿತರ ಷೇರು ವಹಿವಾಟು ಕುಸಿತದಿಂದಲೇ ಶುರುವಾಗಿತ್ತು. ಹೀಗಾಗಿ ಹೂಡಿಕೆದಾರರಿಗೆ ಕೂಡ ಒಂದಷ್ಟು ಟೆನ್ಷನ್ ಶುರುವಾಗಿತ್ತು. ಈ ಕಾರಣಕ್ಕೆ ಮಾರಾಟ ಒತ್ತಡ ಕೂಡ ಹೆಚ್ಚಾಯಿತು ಎನ್ನಲಾಗಿದೆ.
ಸಂಚಲನ ಸೃಷ್ಟಿಯಾಗಿದ್ದು ಹೇಗೆ?
ಅದಾನಿ ಸಂಸ್ಥೆ ಷೇರುಗಳು ತೀವ್ರವಾಗಿ ಕುಸಿತ ಕಂಡ ನಂತರ ಒಂದಷ್ಟು ಚೇತರಿಕೆ ಕಂಡಿವೆ. ಆದರೆ ಹೀಗೆ ಆಗಿದ್ದು ಯಾಕೆ? ಎಂಬ ಪ್ರಶ್ನೆಗೆ ಉತ್ತರ, ಅಮೆರಿಕದ ನ್ಯಾಯಾಲಯದ ತೀರ್ಪು. ಅಷ್ಟಕ್ಕೂ ಸೌರ ಶಕ್ತಿ ಗುತ್ತಿಗೆ ಒಪ್ಪಂದ ಸಂಬಂಧ, ಭಾರತದ ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ಅದಾನಿ ಅವರ ಸಂಸ್ಥೆ ವಿರುದ್ಧ ಈ ಆರೋಪ ಕೇಳಿ ಬಂದ ಬಳಿಕ ಸಂಚಲನ ಸೃಷ್ಟಿ ಆಗಿದೆ. ಈ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ & ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ಕೋರ್ಟ್ ಅರೆಸ್ಟ್ ವಾರೆಂಟ್ ಕೂಡ ಹೊರಡಿಸಿದೆ. ಇದೇ ವಿಚಾರ ಇದೀಗ ಭಾರತದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡಿಬಿಟ್ಟಿದೆ!












Click it and Unblock the Notifications