Green Energy: ಅದಾನಿ AGEL ಕಂಪನಿ 15,000 MW ಗಿಂತಲೂ ಅಧಿಕ ಇಂಧನ ಉತ್ಪಾದನೆ
Adani Green Energy: ಭಾರತದ ಬೃಹತ್ ನವೀಕರಿಸಬಹುದಾದ ಇಂಧನ ಕಂಪನಿಗಳಲ್ಲಿ ಒಂದಾಗಿರುವ ಅದಾನಿ ಗ್ರೂಪ್‌ನ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ತನ್ನ ಉದ್ದೇಶಿತ ಸಾಮರ್ಥ್ಯ ಮೀರಿ ಅತ್ಯಧಿಕ ವಿದ್ಯುತ್ ಉತ್ಪಾದಿಸುವ ಮೂಲಕ ಸಾಧನೆ ಮಾಡಿದೆ. ಈ ಮೂಲಕ ಬೃಹತ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಕಂಪನಿಯಾಗಿ ಹೊರ ಹೊಮ್ಮಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) 15,000 ಮೆಗಾವ್ಯಾಟ್ ಉತ್ಪಾದನೆ ಗುರಿ ಹೊಂದಿತ್ತು. ಈ ಗುರಿಗೂ ಮೀರಿ 15,539.9 ಮೆ.ವ್ಯಾ. ನವೀಕರಿಸಬಹುದಾದ ಇಂಧನ ಉತ್ಪಾದಿಸಿದೆ. ಈ ಕಂಪನಿಯು ಪೋರ್ಟ್‌ಫೋಲಿಯೊ ಪ್ರಕಾರ ಸೌರ ವಿದ್ಯುತ್ 11,005.5 ಮೆ.ವ್ಯಾ. ಪವನ ವಿದ್ಯುತ್ 1,977.8 ಮೆ.ವ್ಯಾ., ಪವನ-ಸೌರ ಹೈಬ್ರಿಡ್ ಮೂಲಕ 2,556.6 ಮೆ.ವ್ಯಾ. ಉತ್ಪಾದಿಸಿದೆ. ಗ್ರೀನ್‌ಫೀಲ್ಡ್ ಯೋಜನೆಗಳ ಮೂಲಕ ಇಂಥದ್ದೊಂದು ಸಾಧನೆ ಮಾಡಿದ ಮೊದಲ ಕಂಪನಿಯಾಗಿದೆ.

ಈ ಸಾಧನೆ ಕುರಿತು AGEL ನ ಸಿಇಒ ಆಶಿಶ್ ಖನ್ನಾ ಅವರು ಮಾತನಾಡಿ, 15,000 ಮೆ.ವ್ಯಾ.ಗೂ ಹೆಚ್ಚು ಉತ್ಪಾದನೆ ಮಾಡಿದ್ದು ಹೆಮ್ಮೆ ತಂದಿದೆ. ಈ ಸಾಧನೆಯು ನಮ್ಮ ಕಂಪನಿ ಸದಸ್ಯರ ಗಮನ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಹೂಡಿಕೆದಾರರು, ಗ್ರಾಹಕರು, ತಂಡ ಮತ್ತು ಪಾಲುದಾರರ ಸಹಕಾರ ಇದೆ. ನವೀಕರಿಸಬಹುಯದಾದ ಇಂಧನ ವಲಯದಲ್ಲಿ ಅದಾನಿ ಗ್ರೂಪ್ ಕಂಪನಿಯು ಪ್ರಗತಿ ಕಂಡಿದೆ. ಭವಿಷ್ಯದಲ್ಲಿ ಇದು ಹೊಸ ಮಾನದಂಡಗಳ ರಚನೆಗೆ ಕಾರಣವಾಗಲಿದೆ ಎಂದರು.
AGEL: 50,000 ಮೆ.ವ್ಯಾಟ್ ಗುರಿ
2030 ರ ವೇಳೆಗೆ 15,000 ಮೆ.ವ್ಯಾಟ್‌ನಿಂದ 50,000 ಮೆ.ವ್ಯಾಟ್‌ವರೆಗೆ ವಿದ್ಯುತ್ ಉತ್ಪಾದನೆ ಗುರಿ ಹೆಚ್ಚಿಸಿಕೊಳ್ಳಲಿದ್ದೇವೆ. AGEL ಉತ್ಪಾದಿತ 15,539.9 ಮೆ.ವ್ಯಾ. ಸುಮಾರು 7.9 ಮಿಲಿಯನ್ ಮನೆಗಳಿಗೆ ವಿದ್ಯುತ್ ನೀಡಬಲ್ಲದು. ನಮ್ಮ ಕಂಪನಿ ದೇಶಕ್ಕೆ ಶುದ್ಧ ಮತ್ತು ಕೈಗೆಟುಕುವ ಶಕ್ತಿಯೊಂದಿಗೆ 10 ವರ್ಷಗಳು ವಿದ್ಯುತ್ ಪೂರೈಕೆ ಭರವಸೆ ನೀಡುತ್ತದೆ ಎಂದರು.
ಗುಜರಾತ್‌ನಲ್ಲಿ ಬೃಹತ್ ಸ್ಥಾವರ
ಗುಜರಾತ್‌ನ ಕಚ್ ವ್ಯಾಪ್ತಿಯ ಬಂಜರು ತ್ಯಾಜ್ಯ ಭೂಮಿಯಲ್ಲಿ AGEL ಕಂಪನಿಯ 30,000 MW ನ ವಿಶ್ವದ ಅತಿದೊಡ್ಡ ಸ್ಥಾವರ ನಿರ್ಮಾಣ ಮಾಡಿದ್ದೇವೆ. ಇದು ಬರೋಬ್ಬರಿ 538 ಚದರ ಕಿಲೋಮೀಟರ್‌ಗಳಲ್ಲಿ ನಿರ್ಮಿಸಲಾಗಿದೆ. ಪ್ಯಾರಿಸ್ ನಲ್ಲಿರುವ ಸ್ಥಾವರಕ್ಕಿಂತಲೂ ಐದು ಪಟ್ಟು ದೊಡ್ಡದಾಗಿದೆ. ಬಾಹ್ಯಾಕಾಶದಿಂದಲೂ ಕಾಣುವಷ್ಟು ವಿಶಾಲವಾಗಿದೆ. ಈ ಸ್ಥಾವರದಿಂದ ಈಗಾಗಲೇ 5,355.9 MW ನವೀಕರಿಸಬಹುದಾದ ಇಂಧನದ ಉತ್ಪಾದಿಸಿದೆ. 2030 ರ ವೇಳೆಗೆ ಭಾರತದ 500 GW ಗುರಿಗೆ ಕಂಪನಿ ಪೂರಕವಾಗಿ ಕೆಲಸ ಮಾಡಲಿದೆ.












Click it and Unblock the Notifications