Get Updates
Get notified of breaking news, exclusive insights, and must-see stories!

Adani: ಅದಾನಿ & ಗೂಗಲ್ ಪಾಲುದಾರಿಕೆ: ವಿಶಾಖಪಟ್ಟಣದಲ್ಲಿ "AI ಡೇಟಾ ಸೆಂಟರ್ ಕ್ಯಾಂಪಸ್' ನಿರ್ಮಾಣ

ಬೆಂಗಳೂರು, ಅಕ್ಟೋಬರ್ 14: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾರತದ ಅತಿದೊಡ್ಡ "AI ಡೇಟಾ ಸೆಂಟರ್ ಕ್ಯಾಂಪಸ್' ಮತ್ತು ಹೊಸ ಹಸಿರು ಇಂಧನ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಅದಾನಿ ಎಂಟರ್‌ಪ್ರೈಸಸ್ ಮುಂದಾಗಿದೆ. ಇದಕ್ಕಾಗಿ ಅದಾನಿ ಕಂಪನಿಯ ಜಂಟಿ ಉದ್ಯಮ ಕಂಪನಿ ಅದಾನಿಕಾನೆಕ್ಸ್ ಮತ್ತು ಗೂಗಲ್ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ಗೂಗಲ್‌ನ AI ಹಬ್ ಮುಂದಿನ ಐದು ವರ್ಷಗಳಲ್ಲಿ ಅಂದರೆ 2026 ರಿಂದ 2030ರವರೆಗೆ ಆಂಧ್ರದ ವಿಶಾಖಪಟ್ಟಣದಲ್ಲಿ ಸುಮಾರು ಯುಎಸ್‌ಡಿ 15 ಶತಕೋಟಿ ಹೂಡಿಕೆ ಮಾಡಿದೆ. ಇದು ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಕಾರ್ಯನಿರ್ವಹಣೆ ಹೊಂದಿದೆ. ಇಲ್ಲಿನ ಕಂಪನಿಯು ಸಬ್‌ಸೀ ಕೇಬಲ್ ನೆಟ್‌ವರ್ಕ್ ಮತ್ತು ಶುದ್ಧ ಇಂಧನ ಉತ್ಪಾದನೆ ಬೆಂಬಲಿಸುತ್ತದೆ. ದೇಸದಲ್ಲಿ ಅತೀವ ಬೇಡಿಕೆ ಇರುವ ಕೃತಕ ಬುದ್ಧಿಮತ್ತೆ (AI) ಕೆಲಗಳ ಹೊರೆಗಳನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಅದಾನಿಕಾನೆಕ್ಸ್ ಮತ್ತು ಏರ್‌ಟೆಲ್ ಸೇರಿದಂತೆ ಪರಿಸರ ವ್ಯವಸ್ಥೆಯ ಪಾಲುದಾರಿಕೆಗೂ ಇದು ಪೂರಕವಾಗಲಿದೆ.

Adani and Google to Build India s Largest AI Data Center in Visakhapatnam

ವಿಶಾಖಪಟ್ಟಣದಲ್ಲಿನ ಗೂಗಲ್ ಎಐ ಹಬ್‌ನ ಅಡಿಪಾಯದ ಸ್ತಂಭಗಳು ನಿರ್ಮಿಸಬೇಕೆಂಬ ಉದ್ದೇಶ ಹೊಂದಿರುವ ಎಐ ಡೇಟಾ ಸೆಂಟರ್ ಮೂಲಸೌಕರ್ಯಗಳನ್ನು ಒಳಗೊಂಡಿವೆ. ಇದು ದೇಶದ ಎಐ ಸಾಮರ್ಥ್ಯಗಳಲ್ಲಿ ಮಹತ್ವದ ಬದಲಾವಣೆ ತರಲಿದೆ. ದಕ್ಷತೆ ಮತ್ತು ಸಾಮರ್ಥ್ಯ ಹೆಚ್ಚಿಸಲಿದೆ. ಆಂಧ್ರಪ್ರದೇಶದಲ್ಲಿ ಹೊಸ ಪ್ರಸರಣ ಮಾರ್ಗಗಳು, ಶುದ್ಧ ಇಂಧನ ಉತ್ಪಾದನೆ ಮತ್ತು ನವೀನ ಇಂಧನ ಸಂಗ್ರಹ ವ್ಯವಸ್ಥೆಗಳಲ್ಲಿ ಸಹ-ಹೂಡಿಕೆಯತ್ತ ಗಮನಹರಿಸಿದೆ. ಭಾರತದ ವಿದ್ಯುತ್ ಗ್ರಿಡ್‌ನ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ವರ್ಧಿಸುತ್ತದೆ.

"ಭಾರತದ ಡಿಜಿಟಲ್ ಭವಿಷ್ಯಕ್ಕಾಗಿ ಅದಾನಿ ಗ್ರೂಪ್ ಈ ಐತಿಹಾಸಿಕ ಯೋಜನೆಯಡಿ ಗೂಗಲ್‌ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದಕ್ಕೆ ಹೆಮ್ಮೆ ಇದೆ. ಇದು ಮೂಲಸೌಕರ್ಯದಲ್ಲಿನ ಹೂಡಿಕೆಗಿಂತ ಅಧಿಕವಾದದ್ದಾಗಿದೆ. ಇದು ಉದಯೋನ್ಮುಖ ರಾಷ್ಟ್ರದಲ್ಲಿನ ಹೂಡಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಪಾಲುದಾರಿಕೆಯಿಂದ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ಸಿಕ್ಕಂತಾಗುತ್ತದೆ. ದೂರದೃಷ್ಟಿ ಹೊಂದಿದ್ದು, 21ನೇ ಶತಮಾನದಲ್ಲಿ ಪ್ರತಿ ಭಾರತೀಯನನ್ನು ಸಬಲೀಕರಣಗೊಳಿಸುವ ಬದ್ಧತೆಗೆ ಸಾಕ್ಷಿ ಆಗುತ್ತದೆ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಶ್ರೀ ಗೌತಮ್ ಅದಾನಿ ಹೇಳಿದರು.

Google ಕ್ಲೌಡ್‌ನ ಸಿಇಒ ಥಾಮಸ್ ಕುರಿಯನ್ ಅವರು ಮಾತನಾಡಿ, ಇಂದಿನ ತಂತ್ರಜ್ಞಾನಗಳ ಪೈಕಿ ಕೃತಕ ಬುದ್ಧಿಮತ್ತೆ (ಎಐ) ಹೆಚ್ಚು ಪ್ರಭಾವ ಹೊಂದಿದೆ. ಈ ಯುಗದಲ್ಲಿ ದೇಶದ ಮಹತ್ವದ ಶಕ್ತಿ, ಸಾಮರ್ಥ್ಯ ತಿಳಿಯಲು ನಮ್ಮ ಕಂಪನಿ ಗೂಗಲ್ AI ಹಬ್‌ನಲ್ಲಿ ಹೂಡಿಕೆ ಮಾಡುತ್ತಿದೆ. ಅಭಿವೃದ್ಧಿಗೆ ನಿರ್ಣಾಯಕ ಅಡಿಪಾಯ ಇದಾಗಿದೆ. ಸಂಶೋಧಕರು ಮತ್ತು ಸೃಷ್ಟಿಕರ್ತರು AI ನೊಂದಿಗೆ ಸಹಕರಿಸಲು ಈ ಹೂಡಿಕೆ, ಪಾಲುದಾರಿಗೆ ಅನುವು ಮಾಡುತ್ತದೆ ಎಂದು ಹೇಳಿದರು. ಗೂಗಲ್ ಅದಾನಿ ಕಂಪನಿ ಜೊತೆಗೆ ಕೆಲಸ ಮಾಡುವುದರಿಂದ ಆಧುನಿಕ ಸಂಪನ್ಮೂಲಗಳನ್ನು ಸಮುದಾಯಗಳಿಗೆ ಹತ್ತಿರವಾಗುತ್ತವೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಸಾಧ್ಯತವಾಗುತ್ತದೆ. ಜಾಗತಿಕ ವೇದಿಕೆಯಲ್ಲಿ ನಾವೀನ್ಯತೆ, ಅಭಿವೃದ್ಧಿ ಕಾರ್ಯಕ್ಷಮತೆ, ಭದ್ರತೆ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿದರು.

AI ಡೇಟಾ ಸೆಂಟರ್ ಕ್ಯಾಂಪಸ್ ಮತ್ತು ಹಸಿರು ಇಂಧನ ಯೋಜನೆಯು ವಿಶಾಖಪಟ್ಟಣದಲ್ಲಿ ಆರ್ಥಿಕ ಬೆಳವಣಿಗೆಗೆ ವೇಗ ನೀಡುತ್ತದೆ. ಡಿಜಿಟಲ್ ಬೆಳವಣಿಗೆಗೆ ಉತ್ತೇಜನ ಕೊಟ್ಟಂತಾಗುತ್ತದೆ. ತಂತ್ರಜ್ಞಾನ, ನಿರ್ಮಾಣ ಮತ್ತು ಶುದ್ಧ ಇಂಧನದಲ್ಲಿ ಹತ್ತಾರು ಸಾವಿರ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+