Sunny Leone Admit Card: ಪೊಲೀಸ್ ಪರೀಕ್ಷೆ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್ ಫೋಟೊ: ಭಾರೀ ವೈರಲ್
ನವದೆಹಲಿ, ಫೆಬ್ರವರಿ 17: ನೀಲಿ ಚಿತ್ರಗಳಿಂದ ಬಾಲಿವುಡ್‌ಗೆ ಕಾಲಿಟ್ಟ ನಟಿ ಸನ್ನಿ ಲಿಯೋನ್ (Sunny Leone photo) ಯಾರಿಗೆತಾನೆ ಗೊತ್ತಿಲ್ಲ ಹೇಳಿ. ಇವರು ಸಾಮಾಜಿಕ ಸೇವೆಯಿಂದಲೂ ಗುರುತಿಸಿಕೊಂಡ ನಟಿ. ಈಕೆಯ ಫೋಟೊ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವೇಳೆ ಪ್ರವೇಶ ಪತ್ರ (Admit Card) ಮೇಲೆ ಕಾಣಿಸಿಕೊಂಡಿದ್ದು, ಇದೀಗ ದೇಶವ್ಯಾಪಿ ಚರ್ಚೆಗೀಡಾಗಿದೆ. ಹಾಲ್ ಟಿಕೆಟ್ ಫೋಟೊ ಎಲ್ಲೆಡೆ ವೈರಲ್ ಆಗಿದೆ.
ಹೌದು, ಉತ್ತರ ಪ್ರದೇಶದಲ್ಲಿ ಪೊಲೀಸರು 60,244 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗಾಗಿ ಎರಡು ದಿನಗಳ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ಒಟ್ಟು 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮೊದಲ ದಿನ ಅಂದರೆ ಇಂದು ಶನಿವಾರ ಫೆಬ್ರವರಿ 17 ರಂದು ಹಲವು ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು.

ಸನ್ನಿಲಿಯೋನ್ ಅಡ್ಮಿಟ್ ಕಾರ್ಡ ಭಾರೀ ವೈರಲ್
ಇಂದಿನ ಪರೀಕ್ಷೆ ವೇಳೆ ಯುಪಿಯ ಕನೌಜ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರವೊಂದರಲ್ಲಿ ಬಾಲಿವುಡ್ ನಟಿ ಸನ್ನಿಲಿಯೋನ್ ಫೋಟೋ ಕಾಣಿಸಿಕೊಂಡಿದೆ. ಇದೀಗ ಸನ್ನಿಲಿಯೋನ್ ಫೋಟೊ ಇರುವ ಹಾಲ್ ಟಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.
ಯುಪಿ ಪೊಲೀಸ್ ಪರೀಕ್ಷೆಯ ಈ ಪ್ರವೇಶ ಪತ್ರವನ್ನು ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ನೀಡಲಾಗಿದೆ. ನಟಿಯ ಎರಡು ಫೋಟೋಗಳನ್ನು ಪ್ರವೇಶ ಪತ್ರದಲ್ಲಿ ಇರುವುದನ್ನು ನೋಡಬಹುದು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಲುಪಿದ ಕೂಡಲೇ ಗೊಂದಲ ಅಧಿಕಾರಿಗಳೇ ತಬ್ಬಿಬ್ಬಾದ ಘಟನೆ ನಡೆದಿದೆ.
ಸನ್ನಿಲಿಯೋನ್ ಪ್ರವೇಶ ಪತ್ರದಲ್ಲಿ ಏನಿದೆ?
ಪ್ರವೇಶ ಪತ್ರದಲ್ಲಿ 'ಸನ್ನಿ ಲಿಯೋನ್ ಹೆಸರಿನಲ್ಲಿ ಪ್ರವೇಶ ಪತ್ರ ನೀಡಲಾಗಿದೆ. ಅದರಲ್ಲಿ ನಟಿಯ ಎರಡು ಫೋಟೊಗಳು ಇದ್ದು, ಉತ್ತರ ಪ್ರದೇಶದ ತಿರ್ವಾದಲ್ಲಿರುವ ಶ್ರೀಮತಿ ಸೋನಾಶ್ರೀ ಸ್ಮಾರಕ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರ ಅಂತಲೂ ನಮೂದಾಗಿದೆ.

ಇದು ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಕಾಲೇಜಿ ಸಿಬ್ಬಂದಿ ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ. ಯಾರೋ ಇದನ್ನು ವೈರಲ್ ಮಾಡಲೆಂದೆ ಈ ರೀತಿ ಮಾಡಿದ್ದಾರೆ ಎಂದು ಅವರು ಶಂಕಿಸಿದ್ದಾರೆ.
ನಕಲಿ ಪ್ರವೇಶ ಕಾರ್ಡ್ ಎಂದ ಅಧಿಕಾರಿಗಳು
ಸನ್ನಿಲಿಯೋನ್ ಅಡ್ಮಿಟ್ ಕಾರ್ಡ್ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ಅಧಿಕಾರಿಗಳು ಇದನ್ನು ಪ್ರಶ್ನೆ ಮಾಡಿದ್ದಾರೆ. ಇದು ನಕಲಿ ಪ್ರವೇಶ ಕಾರ್ಡ್ ಬಹಿರಂಗಪಡಿಸಿದ್ದಾರೆ.
यूपी पुलिस भर्ती परीक्षा में सनी लियोन के नाम और फोटो का एडमिट कार्ड जारी
— Rohit Nandan Mishra (@RohitNandanMis3) February 17, 2024
प्रवेश पत्र अभिनेत्री सनी लियोनी (Sunny Leone) के नाम पर जारी हुआ
यूपी में पुलिस कॉन्स्टेबल के पदों पर भर्ती के लिए हो रही दो दिवसीय परीक्षा#viral
#UPPolice #SunnyLeone pic.twitter.com/CqK0GvS2rG
ಈ ಬಗ್ಗೆ ಪೊಲೀಸ್ ನೇಮಕಾತಿ ಮಂಡಳಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಪ್ರವೇಶ ಪತ್ರ ಪರಿಶೀಲಿಸಿದ್ದಾರೆ. ಯಾರು ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದ ಅಧಿಕಾರಿಗಳು ಎಂದಿನಂತೆ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ತಿಳಿಸಿದ್ದಾರೆ ಎಂದು ವರದಿ ಆಗಿದೆ.












Click it and Unblock the Notifications