ನಟಿ ಮೇಲಿನ ದೌರ್ಜನ್ಯ: ದಿಲೀಪ್ ವಿರುದ್ಧ ಚಾರ್ಜ್ ಶೀಟ್

Posted By:
Subscribe to Oneindia Kannada

ತಿರುವನಂತಪುರಂ, ನವೆಂಬರ್ 22: ಕೇರಳ ಮೂಲದ ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಜನಪ್ರಿಯ ನಟ ದಿಲೀಪ್ ಅವರ ವಿರುದ್ಧ ಬುಧವಾರದಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ 8ನೇ ಆರೋಪಿಯಾಗಿ ಹೆಸರಿಸಲಾಗಿದೆ.

ಕಲಾಭವನ್ ಮಣಿ ಸಾವಿನ ಹಿಂದೆ ದಿಲೀಪ್ ಕೈವಾಡ?

ಸುಮಾರು 1452 ಪುಟಗಳ ದೋಷರೋಪಣ ಪಟ್ಟಿಯಲ್ಲಿ 345 ಸಾಕ್ಷಿಗಳು, 164 ಹೇಳಿಕೆಗಳನ್ನು ದಾಖಲಿಸಲಾಗಿದೆ. ಒಟ್ಟು 12 ಮಂದಿ ಆರೋಪಿಗಳಿದ್ದು, ದಿಲೀಪ್ ಅವರು 8ನೇ ಆರೋಪಿಯಾಗಿದ್ದು, ದಿಲೀಪ್ ಅವರ ಮಾಜಿ ಪತ್ನಿ, ನಟಿ ಮಂಜು ವಾರಿಯರ್ ಅವರು ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ.

Actress Abduction Case: Malayalam Actor Dileep Named 8th Accused

ಫೆಬ್ರವರಿ 17ರಂದು ಎರ್ನಾಕುಲಂ ನಿಂದ ತ್ರಿಶೂರ್ ಮಾರ್ಗದಲ್ಲಿ ನಟಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10ರಂದು ಕೇರಳ ಪೊಲೀಸರು, ಮಲೆಯಾಳಂ ನಟ ದಿಲೀಪ್ ನನ್ನು ಬಂಧಿಸಿ, ಆಳುವ ಉಪ ಕಾರಾಗೃಹದಲ್ಲಿರಿಸಲಾಗಿದೆ. ದಿಲೀಪ್ ಅವರ ಜಾಮೀನು ಅರ್ಜಿಯು ನಾಲ್ಕನೇ ಬಾರಿಗೆ ತಿರಸ್ಕೃತಗೊಂಡಿದೆ.

ಕಾವ್ಯಾ ಮಾಧವನ್ ಸುತ್ತ ದೌರ್ಜನ್ಯದ ಉರುಳು!

ನಟಿ ಅಪಹರಣ, ಲೈಂಗಿಕ ಕಿರುಕುಳದ ಸಂಚು ರೂಪಿಸಿದ್ದು, ಪಲ್ಸರ್ ಸುನಿ ಎಂಬಾತನನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಿದ ಆರೋಪ ನಟ ದಿಲೀಪ್ ಮೇಲಿದೆ.

ಒಮ್ಮೆ ಮಾತ್ರ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜೈಲಿನಿಂದ ದಿಲೀಪ್ ಹೊರಕ್ಕೆ ಬಂದಿದ್ದರು. ಸದ್ಯ ಷರತ್ತುಬದ್ಧ ಜಾಮೀನು ಪಡೆದಿರುವ ದಿಲೀಪ್ ಅವರು ದುಬೈಗೆ ತೆರಳಲು ಅನುಮತಿ ನೀಡಲಾಗಿದೆ. ದುಬೈನಲ್ಲಿ ತಮ್ಮ ಹೋಟೆಲ್ 'ದೆ ಪುಟ್ಟು' ಹೊಸ ಬ್ರ್ಯಾಂಚ್ ಆರಂಭಿಸಲು 6 ದಿನಗಳ ಮಟ್ಟಿಗೆ ದಿಲೀಪ್ ಗೆ ಅಂಗಮಲೆ ಜೆಎಫ್ ಸಿಎಂ ಕೋರ್ಟ್ ಅನುಮತಿ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress Abduction Case: Malayalam Actor Dileep Named 8th AccusedThe charge sheet, running into over 1452 pages, includes the names of 345 witnesses of which total 164 statements have been recorded by the magistrate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ