Actor Prabhas: ವಯನಾಡು ದುರಂತಕ್ಕೆ ಸ್ಪಂದಿಸಿದ ಪ್ರಭಾಸ್ ₹2 ಕೋಟಿ ನೆರವು
ಬೆಂಗಳೂರು, ಆಗಸ್ಟ್ 07: ಕೇರಳದ ವಯನಾಡು ಭೂಕುಸಿತ ದುರಂತದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಬದುಕುಳಿದವರು ತಮ್ಮ ಕುಟುಂಬಸ್ಥರನ್ನು, ಮನೆಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಘಟನೆಯಲ್ಲಿ ಕೆಲವು ಗ್ರಾಮಗಳೇ ದುರಂತ ಕಣ್ಮರೆಯಾಗಿವೆ. ವಯನಾಡಿಗೆ ಅಗತ್ಯ ನೆರವು ಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ನಟರು ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡುತ್ತಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ತೆಲುಗಿನ ನಟ ಪ್ರಭಾಸ್ ಸಹ ವಯನಾಡು ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಪ್ರಭಾಸ್ ಅವರು ವಯನಾಡು ದುರಂತಕ್ಕೆ ರೂ.2 ಕೋಟಿ ರೂಪಾಯಿ ನೀಡಿದ್ದಾರೆ. ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡ ನಟ ಪ್ರಭಾಸ್ ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಂಗಳವಾರ #Prabhas ಟ್ರೆಂಡಿಂಗ್ ನಲ್ಲಿದ್ದಾರೆ.

ಪ್ರಭಾಸ್ ಅವರ ಸಹಾಯಗುಣ ಅಭಿಮಾನಿಗಳಿಗೆ ಇಷ್ಟವಾಗಿದೆ. ವಯನಾಡು ದುರಂತಕ್ಕೆ ಪ್ರಭಾಸ್ ಸ್ಪಂದಿಸುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭೂಕುಸಿತ ಸಂತ್ರಸ್ತರ ನೆರವಿಗೆ ನಿಂತವರ ಪೈಕಿ ಅತ್ಯಧಿಕ ಹಣ ಸಹಾಯ ಮಾಡಿದ್ದಾರೆ.
ವಯನಾಡು ದುರಂತಕ್ಕೆ ನೆರವಾದ ನಟರು ಪಟ್ಟಿ
ಇದಕ್ಕು ಮೊದಲು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ರೂ.3 ಕೋಟಿ ಆರ್ಥಿಕ ಸಹಾಯ ಮಾಡಿದ್ದಾರೆ. ಅದೇ ರೀತಿ ತಲುಗಿನ ನಟ ರಾಮ್‌ಚರಣ್ ಅವರು ರೂ.01 ಕೋಟಿ ಹಣ, ತೆಲುಗು ಚಿತ್ರರಂಗದ ಪರವಾಗಿ ಅಲ್ಲು ಅರ್ಜುನ್ ಅವರು 50 ಲಕ್ಷ ರೂಪಾಯಿ ಯನ್ನು ವಯಾನಾಡಿಗಾಗಿ ನೀಡಿದ್ದಾರೆ. ಇವರೆಲ್ಲ ಕೇರಳ ಮುಖ್ಯಮಂತ್ರಿ ಪರಿಹಾರ ನೀಧಿಗೆ ಹಣ ತಲುಪಿಸಿದ್ದಾರೆ. ಟಾಲಿವುಡ್‌ನಿಂದ ವಯನಾಡಿಗೆ ಅತ್ಯಧಿಕ ಹಣ ಸಂಗ್ರವಾಗಿದೆ ಎನ್ನಬಹುದು.
ಇನ್ನೂ ಕನ್ನಡದಲ್ಲಿ ಸಿನಿ ಕೆರಿಯರ್ ಶುರುಮಾಡಿ ತೆಲುಗು, ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣಾ ಅವರು ಇತ್ತೀಚೆಗೆ ವಯನಾಡಿನ ಸಂತ್ರಸ್ತರ ಕಣ್ಣೀರಿಗೆ ಮಿಡಿದಿದ್ದಾರೆ. ಅವರು 10 ಲಕ್ಷ ರೂಪಾಯಿ ನೀಡಿದ್ದಾರೆ.

ವಯನಾಡಿನಲ್ಲಿ ಭೂಕುಸಿತಕ್ಕೂ ಮೊದಲು ನಟಿ ರಶ್ಮಿಕಾ ಮಂದಣ್ಣಾ ಅವರು ಕಾರ್ಯಕ್ರಮವೊಂದರ ಸಲುವಾಗಿ ಕೇರಳಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗಿರುವ ಅಭಿಮಾನಿಗಳು ಸಮೂಹ ಕಂಡು ಅವರು ಅಚ್ಚರಿಪಟ್ಟಿದ್ದರು. ಜೊತೆಗೆ ನಿಮ್ಮ ಪ್ರೀತಿ ಅಭಿಮಾನಕ್ಕೆ ಚಿರಋಣಿ ಎಂದು ತಿಳಿಸಿದ್ದರು. ಅದರ ಬೆನ್ನಲ್ಲೆ ನಡೆದ ವಯನಾಡು ದುರಂತಕ್ಕೆ ಅವರು ನೆರವಾಗಿದ್ದಾರೆ.
ಇನ್ನೂ ತಮಿಳು ನಟರಾದ ಸೂರ್ಯ ಮತ್ತು ಅವರ ಸಹೋದರ ಕಾರ್ತಿ ಅವರು 50 ಲಕ್ಷ ರೂಪಾಯಿ, ನಟ ವಿಕ್ರಮ್ 20 ಲಕ್ಷ ರೂಪಾಯಿಗಳನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿಸಿದ್ದಾರೆ.
ದುರಂತದಿಂದ ಚೇರರಿಕೆಯತ್ತ ಕೇರಳ...
ಪ್ರತಿ ವರ್ಷ ಮಳೆಗಾಲದಲ್ಲಿ ಕೇರಳ ಗುಡ್ಡಗಾಡು ಪ್ರದೇಶದಲ್ಲಿ ಇಂತಹ ಭೂಕುಸಿತ ಸಂಭವಿಸುತ್ತವೆ. ಆದರೆ ಈ ವರ್ಷ ನಡೆದ ಘಟನೆ ಅತ್ಯಂತ ಘನಗೋರ ಎನ್ನಲಾಗಿದೆ. ದೊಡ್ಡ ಪ್ರಮಾಣದ ಭೂಕುಸಿತ ಇದಾಗಿದೆ. ಸದ್ಯ ಕೇಂದ್ರ ಸರ್ಕಾರವು ಒಂದಷ್ಟು ಪರಿಹಾರ ಕ್ರಮ ಕೈಗೊಂಡಿದೆ. ಕೇರಳ ಸರ್ಕಾರ ನಿರಂತರವಾಗಿ ಸಂತ್ರಸ್ತರ ನೆರವಿಗೆ ನಿಂತರಿದೆ. ಸದ್ಯ ಕೇರಳ ಈ ವಿಚಾರದಲ್ಲಿ ಚೇತರಿಕೆ ಕಾಣುತ್ತಿದೆ.












Click it and Unblock the Notifications