ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಭಾಷಾ ನಟ ಮಣಿ ಸಾವು, ಪೊಲೀಸ್ ತನಿಖೆಗೆ

By Mahesh
|
Google Oneindia Kannada News

ಕೊಚ್ಚಿ, ಮಾರ್ಚ್ 07: ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಅವರ ಸಾವು ಸಿನಿರಸಿಕರಿಗೆ ಆಘಾತ ತಂದಿದೆ. ನಿರ್ದೇಶಕ ರಾಜೇಶ್ ಪಿಳ್ಳೈ ಅವರ ಅಕಾಲಿಕ ಮರಣದ ನಂತರ ಮಣಿ ಸಾವು ಚಿತ್ರರಂಗವನ್ನು ಕಾಡುತ್ತಿದೆ., ಈ ನಡುವೆ ಮಣಿ ಅವರದ್ದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರ ಮೃತದೇಹದಲ್ಲಿ ಮಿಥೈಲ್ ಅಲ್ಕೋಹಾಲ್ ಅಂಶ ಅಧಿಕವಾಗಿರುವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಲಭ್ಯವಾಗಿಲ್ಲ. ತ್ರಿಸ್ಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ನೀಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

Twist in Malayalam actor Kalabhavan Mani's death case: Police register actor's death as unnatural

ಇತ್ತೀಚೆಗೆ ಕರುಳಿನ ಬೇನೆಯಿಂದ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಸ್ಪತ್ರೆಗೆ ಮಣಿ ದಾಖಲಾಗಿದ್ದರು. ಆಸ್ಪತ್ರೆ ಸೇರಿದ ಎರಡು ದಿನಗಳ ಬಳಿಕ ಮಣಿ ಸಾವನ್ನಪ್ಪಿದ್ದಾರೆ. ಮಣಿ ಅವರಿಗಿದ್ದ ಆರೋಗ್ಯ ಸಮಸ್ಯೆ ವಿವರಗಳನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.

45ವರ್ಷ ವಯಸ್ಸಿನ ಮಣಿ ಅವರ ಸಾವಿಗೆ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರು ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ನ್ಯಾನುಂ ಚಿತ್ರದಲ್ಲಿ ಅಂಧ ಗಾಯಕನಾಗಿ ಕಾಣಿಸಿಕೊಂಡು ಕೇರಳ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದೇ ಪಾತ್ರವನ್ನು ಕನ್ನಡ ಆವೃತ್ತಿ(ನನ್ನ ಪ್ರೀತಿಯ ರಾಮು) ಯಲ್ಲಿ ದರ್ಶನ್ ತೂಗುದೀಪ ಅವರು ನಟಿಸಿದ್ದರು.

ಪಶು ವೈದ್ಯೆ ಡಾ. ನಿಮ್ಮಿಯನ್ನು ಮದುವೆಯಾಗಿದ್ದ ಮಣಿ ಅವರಿಗೆ ಶ್ರೀಲಕ್ಷ್ಮಿ ಎಂಬ ಹೆಸರಿನ ಮಗಳಿದ್ದಾರೆ. ಆಟೋರಿಕ್ಷಾ ಚಾಲಕನಾಗಿ ವೃತ್ತಿ ಬದುಕು ಕಂಡುಕೊಂಡಿದ್ದರು. ಕಲಾಭವನ ನಾಟಕ ತಂಡದ ಮೂಲಕ ಹಲವಾರು ಶೋಗಳನ್ನು ನೀಡಿ ಜನಪ್ರಿಯತೆ ಗಳಿಸಿ ನಂತರ ಚಿತ್ರರಂಗದಲ್ಲಿ ಮಿಂಚಿದ್ದರು. 2016ರ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಎ ಡಿಎಫ್ ಪರ ಸ್ಪರ್ಧಿಸುವಂತೆ ಅವರಿಗೆ ಆಫರ್ ಬಂದಿತ್ತು.

English summary
A case of unnatural death has been registered in connection with the death of Malayalam film actor Kalabhavan Mani by the Kerala Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X