Breaking; ಭಾರತದ ಸಕ್ರಿಯ ಕೋವಿಡ್ ಪ್ರಕರಣ 19,092
ನವದೆಹಲಿ, ಮೇ 01; ಭಾರತದಲ್ಲಿ ಹೊಸ ಕೋವಿಡ್ ಪ್ರಕರಣ ಮತ್ತು ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 19,092 ಆಗಿದೆ.
ಭಾನುವಾರದ ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ ಪ್ರಕಾರ 24 ಗಂಟೆಯಲ್ಲಿ ದೇಶದಲ್ಲಿ 3,324 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 40 ಜನರು ಮೃತಪಟ್ಟಿದ್ದಾರೆ.
ಭಾರತದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,30,79,188 ಆಗಿದೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ 5,23,843 ಆಗಿದೆ.

ಭಾರತದ ಪ್ರತಿದಿನ ಪಾಸಿಟಿವಿಟಿ ದರ 0.68 ಆಗಿದೆ. 24 ಗಂಟೆಯಲ್ಲಿ ದೇಶದಲ್ಲಿ 4,71,087 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಭಾನುವಾರ ಮಾತನಾಡಿ, "ಹೊಸ ಕೋವಿಡ್ ಪ್ರಕರಣಗಳು ಇದೇ ರೀತಿ ಮುಂದುವರೆದರೆ ನಾವು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುತ್ತೇವೆ" ಎಂದು ಹೇಳಿದರು.
"ಲಸಿಕೆ ನೀಡುವುದನ್ನು ವೇಗಗೊಳಿಸಲು ನಾವು ತೀರ್ಮಾನಿಸಿದ್ದೇವೆ. ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಹೆಚ್ಚಿನ ಗಮನವನ್ನು ನೀಡಲಾಗಿದೆ" ಎಂದು ತಿಳಿಸಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತೆ ಕೋವಿಡ್‌ನಿಂದ ಮುಕ್ತವಾಗಿದೆ. ಏಪ್ರಿಲ್ 23ರಂದು ಒಂದು ಹೊಸ ಪ್ರಕರಣ ದಾಖಲಾಗಿತ್ತು. ಬಳಿಕ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಶನಿವಾರ 49 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.












Click it and Unblock the Notifications