ಗಂಗಾ ನದಿಗೆ ಬಸ್, ರೈಲು ಡಿಕ್ಕಿ: ಒಟ್ಟು 18 ಸಾವು

accident-bus-falls-into-ganga-train-rams-into-jeep-18-people-dead
ಮಹಾರಾಜಗಂಜ್ (ಉ. ಪ್ರದೇಶ), ಮೇ 9- ಕಳೆದೆರಡು ದಿನಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ರೈಲೊಂದು ಜೀಪಿಗೆ ಡಿಕ್ಕಿ ಹೊಡೆದು 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ವರು ಮಕ್ಕಳು ಇದ್ದಾರೆ. ಮತ್ತೊಂದೆಡೆ ಬುಧವಾರ ಬೆಳಗ್ಗೆ ಗಂಗಾನದಿಗೆ ಬಸ್ ಉರುಳಿಬಿದ್ದು 5 ಮಂದಿ ಸಾವನ್ನಪ್ಪಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ರೈಲು- ಜೀಪು ಡಿಕ್ಕಿ: ಮಹಾರಾಜಗಂಜ್ ಜಿಲ್ಲೆಯ ಕೊಠಿಪುರ ಪ್ರದೇಶದಲ್ಲಿ ಜೀಪಿಗೆ ರೈಲೊಂದು ಡಿಕ್ಕಿ ಹೊಡೆದು 13 ಜನ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇತರೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.

ಮದುವೆ ಮುಗಿಸಿಕೊಂಡು 16 ಮಂದಿ ರಾತ್ರಿ 1 ಗಂಟೆಯಲ್ಲಿ ಜೀಪ್‌ ನಲ್ಲಿ ಬರುತ್ತಿದ್ದ ಸಂದರ್ಭ ಕೋಠಿಪುರದ ಬಳಿಯ ಮಾನವ ರಹಿತ ಲೆವೆಲ್ ಕ್ರಾಸಿಂಗ್‌ ಬಳಿ ವೇಗವಾಗಿ ಬಂದ ರೈಲು ಜೀಪಿನ ಮೇಲೆ ನುಗ್ಗಿದೆ. ಈ ಭೀಕರ ಅಪಘಾತದಲ್ಲಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ದೇಹಗಳು ಗುರುತಿಸಲೂ ಆಗದಂತೆ ಛಿದ್ರವಾಗಿದ್ದವು. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಜಗಂಜ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗಂಗಾ ನದಿಗೆ ಬಸ್:
ತೆಹ್ರಿ ಜಿಲ್ಲೆಯ ಸಕ್ನಿಧರ್ ಬಳಿ ಬುಧವಾರ ಗಂಗಾನದಿಗೆ ಬಸ್ ಬಿದ್ದು ಕೆಲವರು ಮೃತಪಟ್ಟು, ಹಲವರು ಗಾಯ ಗೊಂಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಲ್ಲಿ ವೇಳೆ ದೇವಪ್ರಯಾಗ್ ಮತ್ತು ವ್ಯಾಸಿ ಮಧ್ಯೆ ಬಸ್ ಬಂದಾಗ ಸುಮಾರು 300 ಮೀಟರ್ ಎತ್ತರದಿಂದ ಬಸ್ ನದಿಗೆ ಬಿದ್ದಿದೆ. ಬಸ್ಸು ದೆಹಲಿಯಿಂದ ಗುಪ್ತಕಾಶೀಯತ್ತ ಹೊರಟಿತ್ತು. ಬಸ್ಸಿನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು. ಇದುವರೆಗೆ 5 ಶವಗಳನ್ನು ಹೊರೆತೆಗೆಯಲಾಗಿದ್ದು ರಭಸದಿಂದ ನೀರು ಹರಿಯುತ್ತಿರುವುದರಿಂದ ಬಸ್ ಕೊಚ್ಚಿ ಹೋಗಿದೆ. ಶೋಧಕಾರ್ಯ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+