ಎಬಿಪಿ ನ್ಯೂಸ್ ಸಮೀಕ್ಷೆ : ಬಿಹಾರದಲ್ಲಿ ಎನ್‌ಡಿಎ ಜಯಭೇರಿ

ನವದೆಹಲಿ, ಮೇ 24 : ಈ ಕ್ಷಣ ಬಿಹಾರದಲ್ಲಿ ಚುನಾವಣೆ ನಡೆದರೆ ನಿತಿಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಅದ್ಭುತ ಸಾಧನೆ ತೋರಲಿದೆ ಎಂದು ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಹೇಳಿದೆ.

ಎನ್‌ಡಿಎ ಸರಕಾರವನ್ನು ಬೆಂಬಲಿಸುತ್ತಿರುವ ಜೆಡಿಯು ನಾಯಕ ನಿತಿಶ್ ಕುಮಾರ್ ನೇತೃತ್ವದಲ್ಲಿ ಜೆಡಿಯು-ಬಿಜೆಪಿ ಕಳೆದ ಚುನಾವಣೆಗಿಂತ ಉತ್ತಮ ಸಾಧನೆ ತೋರಲಿದ್ದು, ಶೇ.60ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿವೆ. 2014ರ ಚುನಾವಣೆಯಲ್ಲಿ ಶೇ.51ರಷ್ಟು ಮತಗಳನ್ನು ಎನ್‌ಡಿಎ ಪಡೆದಿತ್ತು.

ಈ ಬಾರಿ, ಕಾಂಗ್ರೆಸ್ ಮುಂದಾಳತ್ವದ ಯುಪಿಎ ತನ್ನ ಮತಗಳಿಕೆಯನ್ನು ಅಲ್ಪಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲಿದ್ದು, ಶೇ.34ರಷ್ಟು ಮತಗಳನ್ನು ಪಡೆಯಲಿದೆ. ಕಳೆದ ಚುನಾವಣೆಯಲ್ಲಿ ಕೇವಲ ಶೇ.28ರಷ್ಟು ಮಾತ್ರ ಮತಗಳನ್ನು ಯುಪಿಎ ಪಡೆದಿತ್ತು.

ABP News-CSDS poll Survey : BJP-JDU to perform well in Bihar

ಲೋಕಸಭೆ ಚುನಾವಣೆ ಲಾಲೂ ಪ್ರಸಾದ್ ಯಾದವ್ ಅವರಿಗೆ ಭಾರೀ ಹೊಡೆತ ನೀಡಲಿದೆ. ಮೇವು ಹಗರಣದಲ್ಲಿ ಕೋಟ್ಯಂತರ ನುಂಗಿದ್ದಕ್ಕಾಗಿ ಜೈಲು ಸೇರಿರುವ ಅವರ ಪಕ್ಷ ಬಿಜೆಡಿ ಕೇವಲ ಶೇ.5ರಷ್ಟು ಮಾತ್ರ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ.

ನರೇಂದ್ರ ಮೋದಿ ಸರಕಾರ 4 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ವಿಭಿನ್ನ ರಾಜ್ಯಗಳಲ್ಲಿ ಯಾವ ಪಕ್ಷದ ಪರ ಗಾಳಿ ಬೀಸಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಈ ಸಮೀಕ್ಷೆಯನ್ನು ಮಾಡಲಾಗಿದೆ.

ಇತರ ರಾಜ್ಯಗಳಲ್ಲಿ ಕೂಡ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಭಾರೀ ಪೈಪೋಟಿ ನೀಡಲಿದೆ. ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಹೆಚ್ಚು ಸ್ಥಾನ ಗಳಿಸಲು ಬಿಜೆಪಿ ಏದುಸಿರು ಬಿಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+