ಕಾಶ್ಮೀರದಲ್ಲಿ ಗುಂಡೇಟು ತಿಂದ ಸೇನಾಧಿಕಾರಿಯ ಶವ ಪತ್ತೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಶಂಕಿತ ಉಗ್ರರ ಗುಂಡೇಟು ತಿಂದು ಸಾವಿಗೀಡಾಗಿದ್ದಾರೆ. ಸೇನಾಧಿಕಾರಿಯ ಸಾವನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಖಂಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಮೇ 10: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಂಡೇಟು ತಿಂದು ಸಾವಿಗೀಡಾದ ಸೇನಾಧಿಕಾರಿಯ ಮೃತದೇಹ ಪತ್ತೆಯಾಗಿದೆ. ಸಾವಿಗೀಡಾದ ಅಧಿಕಾರಿಯನ್ನು ಉಮರ್ ಫಯಾಜ್ ಎಂದು ಗುರುತಿಸಲಾಗಿದೆ.
ಶೋಪಿಯಾನ್ ಜಿಲ್ಲೆಯ ಹೆರ್ಮನ್ ಚೌಕ್ ಭಾಗದಲ್ಲಿ ಮೃತ ದೇಹ ಪತ್ತೆಯಾಗಿದೆ. ಕುಲ್ಗಾಮ್ ಮೂಲದವರಾದ ಹೆರ್ಮನ್ ಇತ್ತೀಚೆಗಷ್ಟೇ ಸೇನೆಗೆ ಸೇರಿದ್ದರು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ಕುಲ್ಗಾಮ್ ನಿಂದ ಹೊರಟಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ದಾಳಿಯಾಗಿರಬಹುದು ಎಂದುಕೊಳ್ಳಲಾಗಿದೆ.

ಇಲ್ಲಿನ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರನ್ನು ಪತ್ತೆ ಹಚ್ಚಲು ಮಿಲಿಟರಿ ಅಧಿಕಾರಿಗಳು ದೊಡ್ಡ ಮಟ್ಟದ ಕಾರ್ಯಚರಣೆ ಆರಂಭಿಸಿದ್ದರು. ಈ ಭಾಗದಲ್ಲಿ 30-40 ಉಗ್ರರು ಈ ಭಾಗದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆ ಸುಮಾರು 3,000 ಮಿಲಿಟರಿ ಅಧಿಕಾರಿಗಳು ಈ ಕಾರ್ಯಾಚರಣೆಗೆ ಇಳಿದಿದ್ದರು.
ಇದಾದ ಬೆನ್ನಿಗೆ ಈ ಘಟನೆ ನಡೆದಿದೆ. ಫಯಾಜ್ ರನ್ನು ಯಾರು ಕೊಂಡಿರಬಹುದು? ಯಾಕೆ ಕೊಂದಿರಬಹುದು ಎಂಬ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
Abduction & murder of Lt. Ummer Fayaz by terrorists in Shopian is a dastardly act of cowardice. This young officer from J&K was a role model
— Arun Jaitley (@arunjaitley) May 10, 2017
"ಲೆಫ್ಟಿನೆಂಟ್ ಉಮರ್ ಫಯಾಜ್ ಮೇಲೆ ನಡೆದ ಉಗ್ರರ ದಾಳಿ ಹೇಡಿಗಳ ಕೃತ್ಯ. ಜಮ್ಮು ಮತ್ತು ಕಾಶ್ಮೀರದ ಯುವ ಅಧಿಕಾರಿ ಎಲ್ಲರಿಗೂ ಮಾದರಿಯಾಗಿದ್ದರು," ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇದೇ ಭಾಗದಲ್ಲಿ ಕಳೆದ ವಾರ ಸೇನೆಯ ಗಸ್ತು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಇಬ್ಬರು ಸೈನಿಕರು ಮತ್ತು ಓರ್ವ ನಾಗರೀಕರು ಸಾವನ್ನಪ್ಪಿದ್ದನ್ನೂ ಇಲ್ಲಿ ಸ್ಮರಿಸಬಹುದು.












Click it and Unblock the Notifications