ಮನೀಶ್‌ ಸಿಸೋಡಿಯಾ ವಿಚಾರಣೆ: ಜೈಲಿನ ಬೀಗಗಳು ಮುರಿಯಲಿವೆ ಎಂದ ಕೇಜ್ರಿವಾಲ್‌

ನವದೆಹಲಿ: ಅಬಕಾರಿ ನೀತಿಯಲ್ಲಿ ದೆಹಲಿ ಸರ್ಕಾರ ಅಕ್ರಮ ನಡೆಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ಅವರನ್ನು ಸಿಬಿಐ ಇಂದು ವಿಚಾರಣೆ ನಡೆಸುತ್ತಿದೆ.

ನನ್ನನ್ನು ಬಂಧಿಸಲು ಕೇಂದ್ರದ ಆದೇಶದಂತೆ ಸಿಬಿಐ ಹುನ್ನಾರ ನಡೆಸಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾನೆ. ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳೆಲ್ಲಾ ಸುಳ್ಳೆಂದು ಅವರು ತಿಳಿಸಿದ್ದಾರೆ.

ಸಿಬಿಐ ಕಚೇರಿಗೆ ತೆರಳುವ ಮುನ್ನ ದೆಹಲಿಯಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳ ರಾಜಘಾಟ್‌ಗೆ ಸಿಸೋಡಿಯಾ ಭೇಟಿ ನೀಡಿದ್ದಾರೆ.

AAP Leader Manish Sisodia Questioning By CBI Delhi CM Arvind Kerjiwal Tweet

ಸಿಬಿಐ ವಿಚಾರಣೆ ಕುರಿತು ಟ್ವೀಟ್‌ ಮಾಡಿರುವ ಅವರು, 'ನಾನು ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳುವವನಿದ್ದೆ. ಈ ಸಮಯದಲ್ಲಿ ನನ್ನನ್ನು ಬಂಧಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕುತಂತ್ರ ನಡೆಸಿದೆ. ಗುಜರಾತ್‌ನಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಲಿದೆ. ನಾನು ಚುನಾವಣೆ ಪ್ರಚಾರಕ್ಕೆ ತೆರಳದಂತೆ ತಡೆಯಲು ಹೀಗೆ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

'ನಾನು ಜೈಲಿಗೆ ಹೋದರೂ ಗುಜರಾತ್‌ ಚುನಾವಣೆ ಪ್ರಚಾರ ನಿಲ್ಲುವುದಿಲ್ಲ. ಇವತ್ತು ಪ್ರತಿಯೊಬ್ಬ ಗುಜರಾತಿ ಎದ್ದು ನಿಂತಿದ್ದಾನೆ. ಉತ್ತಮ ಶಾಲೆಗಳು, ಉದ್ಯೋಗ, ವಿದ್ಯುತ್‌ಗಾಗಿ ಅಲ್ಲಿನ ಯುವಕರು ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿಯ ಗುಜರಾತ್‌ ವಿಧಾನಸಭೆ ಚುನಾವಣೆ ಆಂದೋಲನವಾಗಲಿದೆ' ಎಂದು ಸಿಸೋಡಿಯಾ ಹೇಳಿದ್ದಾರೆ.

ಇದೇ ವೇಳೆ, ಸಿಸೋಡಿಯಾ ಪರ ಟ್ವಿಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, 'ಜೈಲಿನ ಬೀಗಗಳು ಮುರಿಯಲಿವೆ, ಮನೀಶ್‌ ಸಿಸೋಡಿಯಾ ಹೊರಬರಲಿದ್ದಾರೆ' ಎಂದು ತಿಳಿಸಿದ್ದಾರೆ.

AAP Leader Manish Sisodia Questioning By CBI Delhi CM Arvind Kerjiwal Tweet

ಸಿಬಿಐ ಕಚೇರಿ ಎದುರು ಪ್ರತಿಭಟನೆ: ಎಎಪಿ ನಾಯಕರ ಬಂಧನ
ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿಚಾರಣೆ ನಡೆಸುತ್ತಿರುವ ಸಿಬಿಐ ಕಚೇರಿ ಮುಂದೆ ಆಮ್‌ ಆದ್ಮಿ ಪಕ್ಷದ ನಾಯಕರು ಸೋಮವಾರ ಪ್ರತಿಭಟನೆ ನಡೆಸಲು ಮುಂದಾದರು. ರಾಜ್ಯಸಭಾ ಸದಸ್ಯ ಹಾಗೂ ಎಎಪಿಯ ಪ್ರಮುಖ ನಾಯಕ ಸಂಜಯ್‌ ಸಿಂಗ್‌ ಸೇರಿದಂತೆ ಹಲವು ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು. ಸಿಬಿಐ ನಡೆಸುತ್ತಿರುವ ವಿಚಾರಣೆಯು ನಕಲಿಯಾಗಿದೆ. ಅಬಕಾರಿ ಹಗರಣ ನಡೆದೇ ಇಲ್ಲ. ಗುಜರಾತ್‌ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೆಲ್ಲವನ್ನು ಮಾಡುತ್ತಿದೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ.

ಸಿಸೋಡಿಯಾಗೆ ಕ್ಲೀನ್‌ಚಿಟ್‌ ನೀಡಿದ್ದ ಸಿಬಿಐ:
ಕಳೆದ ತಿಂಗಳು ಮನೀಶ್‌ ಸಿಸೋಡಿಯಾ ನಿವಾಸಗಳಲ್ಲಿ ಶೋಧ ನಡೆಸಿದ್ದ ಸಿಬಿಐಗೆ ಯಾವುದೇ ದಾಖಲೆ ದೊರೆತಿರಲಿಲ್ಲ. ಸಿಸೋಡಿಯಾ ಹಾಗೂ ಅವರ ಪತ್ನಿ ಹೊಂದಿರುವ ಲಾಕರ್‌ಗಳಲ್ಲೂ ಸಿಬಿಐ ಶೋಧ ನಡೆಸಿತ್ತು. ಸಿಬಿಐ ಅಧಿಕಾರಿಗಳ ತಂಡ ಗಾಜಿಯಾಬಾದ್‌ನ ವಸುಂಧರಾದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಪರಿಶೀಲನೆ ನಡೆಸಿ ಸಿಸೋಡಿಯಾಗೆ ಕ್ಲೀನ್‌ಚಿಟ್‌ ನೀಡಿತ್ತು.

ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಪೈಪೋಟಿ:
ಈ ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಎಎಪಿ ಪೈಪೋಟಿ ನೀಡಲಿದೆ. ಆ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಎಪಿ ನಾಯಕರನ್ನು ಗುರಿಯಾಗಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ಗುಜರಾತ್‌ನಲ್ಲಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ಎಎಪಿ ಹೇಳಿದೆ. ಗುಜರಾತ್‌ಗೆ ಹಲವು ಬಾರಿ ಭೇಟಿ ನೀಡಿರುವ ಅರವಿಂದ ಕೇಜ್ರಿವಾಲ್‌, ನಿರುದ್ಯೋಗ, ವಿದ್ಯುತ್‌, ಕುಡಿಯುವ ನೀರು ಪೂರೈಕೆ, ಬೆಲೆ ಏರಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಗುಜರಾತ್‌ನಲ್ಲಿ ನೆಲೆಕಂಡುಕೊಳ್ಳಲು ಎಎಪಿ ಯತ್ನ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+