ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರದ್ಧಾ ಹಂತಕನಿಗೆ ನಾರ್ಕೋ ಪರೀಕ್ಷೆ: ನ್ಯಾಯಾಲಯ ಒಪ್ಪಿಗೆ

|
Google Oneindia Kannada News

ನವದೆಹಲಿ, ನವೆಂಬರ್ 17: ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಗಾಗಿ ಆರೋಪಿ ಅಫ್ತಾಬ್ ಪೂನಾವಾಲಾ ಪೋಲಿಸ್‌ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಮುಂದಿನ 5 ದಿನಗಳವರೆಗೆ ವಿಸ್ತರಿಸಿದೆ. ನಂತರ ಪೊಲೀಸರು ಇದೀಗ ಆರೋಪಿ ಹಂತಕ ಅಫ್ತಾಬ್‌ನನ್ನು ಉತ್ತರಾಖಂಡ ಮತ್ತು ಹಿಮಾಚಲಕ್ಕೆ ಕರೆದೊಯ್ಯಲಿದ್ದಾರೆ.

ತನ್ನ ಲಿವ್-ಇನ್‌ನಲ್ಲಿ ಜೊತೆಯಾಗಿದ್ದ ಶ್ರದ್ಧಾ ಹತ್ಯೆ ಮಾಡಿದ ಅಫ್ತಾಬ್ ಪೂನಾವಾಲಾನ ಕಸ್ಟಡಿಯನ್ನು ದೆಹಲಿ ನ್ಯಾಯಾಲಯವು ಗುರುವಾರ ಮತ್ತೆ 5 ದಿನಗಳವರೆಗೆ ವಿಸ್ತರಿಸಿದೆ. ನಂತರ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಪೊಲೀಸರ ಮುಂದಿರುವ ದೊಡ್ಡ ಸವಾಲುವಿದೆ. ಹಾಗಾಗಿ ಶ್ರದ್ಧಾ ಹಂತಕನಿಗೆ ಶಿಕ್ಷೆಯಾಗಬಹುದು. ಇದುವರೆಗೂ ಪೊಲೀಸರು ಶ್ರದ್ಧಾ ಅವರ ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದ್ದು, ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶ್ರದ್ಧಾ ಅವರ ಮೊಬೈಲ್ ಪತ್ತೆಯಾದ ಬಳಿಕ ಹಲವು ರಹಸ್ಯಗಳು ಬಯಲಾಗಬಹುದು.

ದೆಹಲಿ ಹತ್ಯೆ ಪ್ರಕರಣ: ನಾರ್ಕೋ ಪರೀಕ್ಷೆಯಿಂದ ನನಗೆ ನ್ಯಾಯ ಸಿಗಲಿದೆ ಎಂದ ಶ್ರದ್ಧಾ ತಂದೆ ದೆಹಲಿ ಹತ್ಯೆ ಪ್ರಕರಣ: ನಾರ್ಕೋ ಪರೀಕ್ಷೆಯಿಂದ ನನಗೆ ನ್ಯಾಯ ಸಿಗಲಿದೆ ಎಂದ ಶ್ರದ್ಧಾ ತಂದೆ

ಮತ್ತೊಂದೆಡೆ, ಶ್ರದ್ಧಾ ಹತ್ಯೆಯ ಆರೋಪಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆದರೆ, ಸಾಕ್ಷ್ಯಾಧಾರಗಳ ಬಗ್ಗೆ ವಿಚಾರಣೆ ನಡೆಸಿದಾಗ ನುಣುಚಿಕೊಳ್ಳುವ ಉತ್ತರ ನೀಡುತ್ತಿದ್ದಾರೆ. ಪ್ರಕರಣವನ್ನು ಗೊಂದಲಗೊಳಿಸಲು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Aaftab Poonawala to take narco test; will be taken to Uttarakhand, Himachal by police

ಹಂತಕ ಅಫ್ತಾಬ್‌ನನ್ನು ಉತ್ತರಾಖಂಡ- ಹಿಮಾಚಲಕ್ಕೆ ಕರೆದೊಯ್ಯಲಿದ್ದಾರೆ

ಶ್ರದ್ಧಾ ಅವರ ಆರೋಪಿ ಹಂತಕ ಅಫ್ತಾಬ್‌ನನ್ನು ತನಿಖೆಗಾಗಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಕರೆದೊಯ್ಯಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಶ್ರದ್ಧಾ ಹಂತಕನನ್ನು ಪೊಲೀಸರು ಉತ್ತರಾಖಂಡ ಮತ್ತು ಹಿಮಾಚಲಕ್ಕೆ ಏಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುವುದು ಇನ್ನೂ ತಿಳಿದುಬಂದಿಲ್ಲ. ಉತ್ತರಾಖಂಡ ಮತ್ತು ಹಿಮಾಚಲದಲ್ಲಿ ಕೊಲೆಗೆ ಸಂಬಂಧಿಸಿದಂತೆ ಯಾವುದಾದರೂ ಗುಪ್ತ ರಹಸ್ಯಗಳಿವೆಯೇ? ಅಥವಾ ಕೊಲೆಯ ಮೊದಲು ಈ ಇಬ್ಬರೂ ಉತ್ತರಾಖಂಡ ಮತ್ತು ಹಿಮಾಚಲಕ್ಕೆ ಹೋಗಿದ್ದಾರೆ. ಅಲ್ಲಿ ಏನಾದರೂ ಸಂಭವಿಸಿದೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸರು ಮಾತ್ರ ಉತ್ತರಿಸಬಲ್ಲರು. ಮುಂದಿನ ದಿನಗಳಲ್ಲಿ ಹಂತಕನನ್ನು ಪೊಲೀಸರು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ಹಲವು ರಹಸ್ಯಗಳು ಬಯಲಿಗೆ ಬರಲಿವೆ.

Aaftab Poonawala to take narco test; will be taken to Uttarakhand, Himachal by police

ನಾರ್ಕೋ ಪರೀಕ್ಷೆಯಿಂದ ಶ್ರದ್ಧಾ ಕೊಲೆ ರಹಸ್ಯ ಬಯಲಾಗುತ್ತಾ?

ಆರೋಪಿ ಹಂತಕ ಅಫ್ತಾಬ್‌ನ ಕಸ್ಟಡಿ ಅವಧಿಯನ್ನು ವಿಸ್ತರಿಸುವುದರೊಂದಿಗೆ ನಾರ್ಕೋ ವಿಶ್ಲೇಷಣೆ ಪರೀಕ್ಷೆಗೆ ಅನುಮತಿ ಕೋರಿ ಪೊಲೀಸರ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿದೆ. ನಂತರ ಪೊಲೀಸರು ನಾರ್ಕೋ ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ. ಆದರೆ, ಅಫ್ತಾಬ್‌ನ ನಾರ್ಕೋ ಪರೀಕ್ಷೆ ಯಾವಾಗ ನಡೆಯಲಿದೆ ಎಂದು ಪೊಲೀಸರು ಇನ್ನೂ ತಿಳಿಸಿಲ್ಲ. ಆರೋಪಿ ಹಂತಕ ಅಫ್ತಾಬ್ ನಾರ್ಕೋ ಪರೀಕ್ಷೆಯಲ್ಲಿ ಹಲವು ರಹಸ್ಯಗಳನ್ನು ಬಹಿರಂಗಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

English summary
Delhi murder case Live Updates: A Delhi court extended the police custody of accused Aadtab Poonawala by five days in connection with the Shraddha Walkar murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X