ಮುಂಬೈ ಏರ್‌ಪೋರ್ಟ್‌ನ ಬೀದಿ ನಾಯಿಗಳಿಗೂ ಆಧಾರ್‌, ಕ್ಯೂಆರ್‌ ಕೋಡ್‌!

ಬೆಂಗಳೂರು, ಜುಲೈ 17: ಮುಂಬೈ ವಿಮಾನ ನಿಲ್ದಾಣದ ಬಳಿ 20 ಬೀದಿ ನಾಯಿಗಳ ಗುಂಪಿಗೆ ಆಧಾರ್ ಕಾರ್ಡ್‌ಗಳೊಂದಿಗೆ ಕ್ಯೂಆರ್‌ ಕೋಡ್‌ ಅನ್ನು ನೀಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕ್ಯುಆರ್ ಕೋಡ್‌ಗಳನ್ನು ಹೊಂದಿರುವ ನಾಯಿಗಳ ಗುರುತಿನ ಚೀಟಿಗಳನ್ನು ಅವುಗಳ ಕುತ್ತಿಗೆಗೆ ಹಾಕಲಾಗಿದೆ. ಈ QR ಕೋಡ್‌ಗಳನ್ನು ಸ್ಕ್ಯಾನ್ ಮಾಡಿದಾಗ, ಆಯಾ ನಾಯಿಯ ಅಗತ್ಯವಿರುವ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಲಾಗಿದೆ. ನಾಯಿಯ ಹೆಸರು, ಸಂತಾನ ಶಕ್ತಿಹರಣ, ವ್ಯಾಕ್ಸಿನೇಷನ್ ವಿವರಗಳು, ಫೀಡರ್‌ನ ಸಂಪರ್ಕ ಸಂಖ್ಯೆ ಮತ್ತು ವೈದ್ಯಕೀಯ ಮಾಹಿತಿಯನ್ನು ಅದು ಒಳಗೊಂಡಿರುತ್ತದೆ.

Aadhaar, QR code issued to stray dogs at Mumbai Airport

ವಿಮಾನ ನಿಲ್ದಾಣದ ವಿಶೇಷ ತಂಡವು ಗುರುತಿನ ಚೀಟಿಯೊಂದಿಗೆ ನಾಯಿಗಳನ್ನು ಟ್ಯಾಗ್ ಮಾಡುವ ಕಾರ್ಯವನ್ನು ಮಾಡಿದೆ. ಈ ನಾಯಿಗಳಿಗೆ ಆಹಾರ ಒದಗಿಸುವ ವ್ಯಕ್ತಿಗಳನ್ನು ತಂಡ ಮನವೊಲಿಸಿದೆ. ನಾಯಿಗಳು ತಮ್ಮ ಕಡೆ ಬರುತ್ತಿರುವುದನ್ನು ಕಂಡ ಜನರು ನೋಡಿ ಆರಂಭದಲ್ಲಿ ಭಯಭೀತರಾಗಿದ್ದರು. ಆಗ ವಿಶೇಷ ತಂಡ 20 ನಾಯಿಗಳಿಗೆ ಟ್ಯಾಗ್ ಹಾಕಲು ಒಂದೆರಡು ಗಂಟೆಗಳನ್ನು ತೆಗೆದುಕೊಂಡಿತು.

ನಾವು ಬೆಳಿಗ್ಗೆ 8.30 ರ ಸುಮಾರಿಗೆ ನಾಯಿಗಳಿಗೆ ಟ್ಯಾಗ್‌ ಹಾಕಲು ಪ್ರಾರಂಭಿಸಿದೆವು. ಅಲ್ಲದೆ ಕ್ಯೂಆರ್ ಕೋಡ್ ಟ್ಯಾಗ್‌ಗಳನ್ನು ಸರಿಪಡಿಸಲು ಮತ್ತು ಲಸಿಕೆ ಹಾಕಲು ನಾಯಿಗಳನ್ನು ಬೆನ್ನಟ್ಟುತ್ತಿದ್ದೆವು. ನಾಯಿಗಳಿಗೆ ಟ್ಯಾಗ್‌ ಹಾಕಲು 'pawfriend.in' ಎಂಬ ಕಾರ್ಯಕ್ರಮದ ಮೂಲಕ ನಾಯಿಗಳನ್ನು ವಿಭಿನ್ನವಾಗಿ ಗುರುತಿಸುವಂತೆ ಮಾಡಲು ಯೋಜನೆ ಹಾಕಿಕೊಂಡೆವು ಎಂದುತಂಡದ ಸಿಯಾನ್ ನಿವಾಸಿ ಅಕ್ಷಯ್ ರಿಡ್ಲಾನ್ ಹೇಳಿದ್ದಾರೆ.

ಒಂದು ಸಾಕುಪ್ರಾಣಿ ಕಳೆದುಹೋದರೆ ಅಥವಾ ಅದನ್ನು ಸ್ಥಳಾಂತರಿಸಿದರೆ QR ಕೋಡ್ ಟ್ಯಾಗ್ ಅದನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಲು ಸಹಾಯ ಮಾಡುತ್ತದೆ. ಇದು ನಗರದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ನಾಯಿಗಳ ಕೇಂದ್ರೀಕೃತ ಅಂಕಿಅಂಶವನ್ನು ನಿರ್ವಹಿಸಲು ಬೃಹತ್‌ ಮುಂಬೈ ಮಹಾನಗರ ಪಾಲಿಕೆಗೆ ಸಹಾಯ ಮಾಡಬಹುದು ಎಂದು ಅವರು ತಿಳಿಸಿದರು.

ಬೃಹತ್‌ ಮುಂಬೈ ಮಹಾನಗರ ಪಾಲಿಕೆಯ ಪಶುವೈದ್ಯಕೀಯ ಆರೋಗ್ಯ ಸೇವೆಗಳ ಮುಖ್ಯಸ್ಥ ಡಾ.ಕಲೀಂ ಪಠಾಣ್ ಮಾತನಾಡಿ, "ನಾಯಿಗಳಿಗೆ ಲಸಿಕೆ ನೀಡಲಾಗಿದ್ದು, ಮೂಲಭೂತ ಆರೋಗ್ಯ ತಪಾಸಣೆ ಮಾಡಲಾಗಿದೆ. ವಿಮಾನ ನಿಲ್ದಾಣದ ಹೊರಗೆ ನಾಯಿಗಳಿಗೆ ಕ್ಯೂಆರ್ ಕೋಡ್ ಟ್ಯಾಗ್ ಮಾಡುವಿಕೆಯು ಪ್ರಾಯೋಗಿಕ ಯೋಜನೆಯಾಗಿದೆ. ಇದನ್ನು ಹೇಗೆ ಮುಂದುವರಿಸಬಹುದು ಎಂಬುದನ್ನು ನಾವು ಭಾವಿಸುತ್ತೇವೆ ಎಂದು ಹೇಳಿದರು.

ಈ ಬಗ್ಗೆ ಮುಂಬೈ ವಿಮಾನ ನಿಲ್ದಾಣದ ವಕ್ತಾರರು ಪ್ರಯಾಣಿಕರು ಮತ್ತು ನಾಯಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+