ಆಧಾರ್-ಪ್ಯಾನ್ ಕಾರ್ಡ್ ಲಿಂಕಿಂಗ್ ಗಡುವು ವಿಸ್ತರಣೆ ಇಲ್ಲ: ಕೇಂದ್ರದ ಸ್ಪಷ್ಟನೆ

Posted By:
Subscribe to Oneindia Kannada
   Aadhar Number to Pan Number linking | Last date June 30th

   ಪಲ್ಲೆಕೆಲೆ, ಆಗಸ್ಟ್ 28: ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ಪರಸ್ಪರ ಲಿಂಕ್ ಮಾಡಲು ವಿಧಿಸಲಾಗಿದ್ದ ಆಗಸ್ಟ್ 31ರ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಮೂಲಗಳು ತಿಳಿಸಿವೆ.

   ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

   ಆಧಾರ್ ಕಾರ್ಡ್ ಹಾಗೂ ಪ್ಯಾನ್ ಸಂಖ್ಯೆಗಳನ್ನು ಲಿಂಕ್ ಮಾಡಲು ಈ ಹಿಂದೆ ಜುಲೈ 31ರವರೆಗೆ ಗಡುವು ವಿಧಿಸಲಾಗಿತ್ತು. ಆನಂತರ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಗದಿಪಡಿಸಲಾಗಿದ್ದ ಜುಲೈ 31ರ ಗಡುವನ್ನು ತಾಂತ್ರಿಕ ಕಾರಣಗಳಿಂದಾಗಿ ಆಗಸ್ಟ್ 5ರವರೆಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ, ಆಧಾರ್-ಪ್ಯಾನ್ ಲಿಂಕ್ ಗಡುವನ್ನೂ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು.

   ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

   ಆದರೆ, ಈಗ ಈ ಗಡುವನ್ನು ಮತ್ತೆ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದಕ್ಕೆ ಎರಡು ಕಾರಣಗಳಿವೆಯಂತೆ. ಒಂದು - ಜಿಎಸ್ ಟಿ ಹಾಗೂ ಮತ್ತೊಂದು - ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಮಹತ್ವದ ತೀರ್ಪು.

   ಹಾಗಾಗಿ, ಈಗ ಲಿಂಕ್ ಅವಶ್ಯಕತೆಯಿಲ್ಲ?

   ಹಾಗಾಗಿ, ಈಗ ಲಿಂಕ್ ಅವಶ್ಯಕತೆಯಿಲ್ಲ?

   ಜಿಎಸ್ ಟಿಯಿಂದಾಗಿ, ದೇಶದಲ್ಲಿನ ತೆರಿಗೆದಾರರ ಸಂಖ್ಯೆ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದ್ದು, ಇದರಿಂದ ಖಜಾನೆಗೆ ಹೆಚ್ಚು ಹಣ ಹರಿದುಬರುತ್ತಿದೆ. ಕಾಳಧನ ಹಾಗೂ ತೆರಿಗೆ ವಂಚಕರನ್ನು ಪತ್ತೆ ಹಚ್ಚಲೆಂದೇ ಆಧಾರ್ - ಪ್ಯಾನ್ ಲಿಂಗ್ ಮಾಡಲು ಸರ್ಕಾರ ಯೋಜಿಸಿತ್ತು.

   ಸರ್ಕಾರದ ನಿರೀಕ್ಷೆ ಜಿಎಸ್ ಟಿ ಮೂಲಕ ನೆರವೇರಿತು!

   ಸರ್ಕಾರದ ನಿರೀಕ್ಷೆ ಜಿಎಸ್ ಟಿ ಮೂಲಕ ನೆರವೇರಿತು!

   ಸರ್ಕಾರ ನಿರೀಕ್ಷೆಗೆ ಜಿಎಸ್ ಟಿ ಮೂಲಕ ಉತ್ತರ ಸಿಕ್ಕಿದೆ. ಹಾಗಾಗಿ, ಆಧಾರ್ - ಪ್ಯಾನ್ ಲಿಂಕ್ ಬಗ್ಗೆ ಸರ್ಕಾರ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.

   ಸುಪ್ರೀಂ ತೀರ್ಪಿನಿಂದ ತೆಪ್ಪಗಾದ ಕೇಂದ್ರ?

   ಸುಪ್ರೀಂ ತೀರ್ಪಿನಿಂದ ತೆಪ್ಪಗಾದ ಕೇಂದ್ರ?

   ಇನ್ನು, ಇತ್ತಿಚೆಗೆ, ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಕಾಪಾಡಿಕೊಳ್ಳುವುದು ಆಯಾ ವ್ಯಕ್ತಿಯ ಖಾಸಗಿ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದು ಹೊಸ ಜಿಜ್ಞಾಸೆಯನ್ನು ಮೂಡಿಸಿರುವುದೂ ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಲಿಂಕ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದಿರಲು ಕಾರಣ ಎಂದು ಹೇಳಲಾಗಿದೆ.

   ಹೊಸ ಚರ್ಚೆಗೆ ನಾಂದಿ ಹಾಡಿದ ತೀರ್ಪು

   ಹೊಸ ಚರ್ಚೆಗೆ ನಾಂದಿ ಹಾಡಿದ ತೀರ್ಪು

   ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಆಧಾರ್ ಕಾರ್ಡ್ ನಲ್ಲಿರುವ ಬಯೋಮೆಟ್ರಿಕ್ ಮಾಹಿತಿಯನ್ನು ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡುವ ಹಣಕಾಸು ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆಗೆ ಮಾಹಿತ ರವಾನೆಯಾಗುವ ವಿಚಾರವೀಗ ಕಾನೂನಿನ ಚೌಕಟ್ಟಿನಲ್ಲಿ ಮತ್ತೊಮ್ಮೆ ಚರ್ಚೆಗೀಡಾಗಿದೆ. ಹಾಗಾಗಿ, ಸದ್ಯಕ್ಕೆ ಆಧಾರ್-ಪ್ಯಾನ್ ಲಿಂಕ್ ಮೇಲೆ ಒತ್ತಡ ಹೇರದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The government may not extend the last date for linking Aadhaar with PAN, which right now is August 31. Earlier, the deadline for filing income tax return was moved from July 31 to August 5, as the tax filing website had crashed due to huge rush on last day.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ