Aadhaar Pan link: ನಾಳೆ ಜೂನ್ 30 ಕಡೆ ದಿನ, ಕೂಡಲೇ ಲಿಂಕ್ ಮಾಡಿಸಿ
ಬೆಂಗಳೂರು, ಜೂನ್ 29: ಸಾಕಷ್ಟು ಕಾಲಾವಧಿಯ ವಿಸ್ತರಣೆ ಬಳಿಕ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್‌ಗೆ (Aadhaar Pan link) ನಾಳೆ ಶುಕ್ರವಾರ ಕಡೆಯ ದಿನವಾಗಿದೆ. ಒಂದು ವೇಳೆ ಈಗಲೂ ನೀವು ಇವೆರಡು ಲಿಂಕ್ ಮಾಡಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಅಮಾನ್ಯಗೊಳ್ಳಲಿದೆ.
ಪ್ರಮುಖ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡಿನ ಸಂಖ್ಯೆಯನ್ನು ಬ್ಯಾಂಕ್ಯ ಸೇರಿದಂತೆ ಹಣಕಾಸಿನ ವ್ಯವಹಾರಗಳಿಗೆ ಅಗತ್ಯವಾಗಿರುವ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಿಬೇಕೆಂದು ಕೇಂದ್ರ ಸರ್ಕಾರ ವರ್ಷಗಳ ಹಿಂದೆಯೇ ಸೂಚಿಸಿದೆ. ಅದರಂತೆ ಜನರಿಗೆ ಅನೇಕ ಬಾರಿ ತಿಳಿಸುತ್ತಲೆ ಬಂದಿದ್ದ ಕೇಂದ್ರ ಸರ್ಕಾರ ಲಿಂಕ್ ಮಾಡಲು ಕಾಲಾವಧಿಯನ್ನು ವಿಸ್ತರಿಸುತ್ತಲೇ ಬಂದಿತ್ತು.

ಇದೀಗ ಜೂನ್ 30ರವರೆಗೆ ವಿಸ್ತರಿಸಿದ್ದ ಅವಧಿ ಪೂರ್ಣಗಳ್ಳಲು ಕೆಲವೇ ಗಂಟೆಗಳು ಮಾತ್ರ ಇದೆ. ಒಂದೇ ವೇಳೆ ಲಿಂಕ್ ಮಾಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ನಿಗಿದಿ ಮಾಡುವ ದಂಡ ಕಟ್ಟಿ ಲಿಂಕ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಇದಷ್ಟೇ ಅಲ್ಲದೇ ನಿಮ್ಮ ಆರ್ಥಿಕ ವ್ಯವಹಾರಗಳು ಸಹ ಮೊಟಕುಗೊಂಡು ಸಮಸ್ಯೆ ಸೃಷ್ಟಿಯಾಗಬಹುದು. ಆದ್ದರಿಂದ ಯಾರು ಯಾರು ಆಧಾರ್- ಪ್ಯಾನ್ ಲಿಂಕ್ ಮಾಡಿಸಿಲ್ಲವೇ ನಾಳೆ ಸಂಜೆಯೊಳಗಾಗಿ ಮಾಡಿಸಲು ಅವಕಾಶ ಇದೆ.
ಬ್ಯಾಂಕ್ ಖಾತೆ ತೆರೆಯಲು, ಬ್ಯಾಂಕ್‌ನಲ್ಲಿ ಠೇವಣಿ ಹೂಡಿಕೆಗೆ, ಡಿಮ್ಯಾಟ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದೆ. ಒಂದು ವೇಳೆ ಆಧಾರ್-ಪ್ಯಾನ್ ಲಿಂಕ್ ಆಗಿರದಿದ್ದರೆ ಈ ಕೆಲಸಗಳಿಗೆ ತೊಂದರೆ ಆಗಲಿದೆ.
ಇನ್ನು ಮುಖ್ಯವಾಗಿ ನಿಗದಿತ ದಿನದ ಬಳಿಕ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿಸಲು ಮುಂದಾದರೆ ಸುಮಾರು 10 ಸಾವಿರ ರೂಪಾಯಿ ಖರ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಆಧಾರ್ ಪ್ಯಾನ್ ಜೋಡಣೆಗೆ ನೀಡಲಾಗಿದ್ದ ಅಂತಿಮ ದಿನವನ್ನು ಮಾರ್ಚ್ 31ರಿಂದ ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿತ್ತು.

ಲಿಂಕ್ ಮಾಡುವುದು ಹೇಗೆ
ಆದಾಯ ತೆರಿಗೆ ಇಲಾಖೆಯು ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ನಂಬರ್ ಜತೆ ಲಿಂಕ್ ಮಾಡಲು 2 ವಿಧಾನಗಳನ್ನು ನೀಡಿದೆ. ಈ ಕೂಡಲೇ ನೀವು ಎರಡನ್ನು ಲಿಂಕ್ ಮಾಡಬಯಸಿದರೆ, ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ (https://www.incometax.gov.in/iec/foportal/) ಭೇಟಿ ಕೊಡಿ.
ಪರದೇ ಮೇಲೆ ಎಡಭಾಗದಲ್ಲಿ ಕಾಣುವ 'ಕ್ವಿಕ್ ಲಿಂಕ್ಸ್' ಮೇಲೆ ಕ್ಲಿಕ್ ಮಾಡಿದೆ. ನಂತರ ಅಲ್ಲಿ ತೆರೆದುಕೊಳ್ಳವ ಪರದೆ ಮೇಲೆ ಮಾಹಿತಿ ಕೇಳುವ ಲಿಂಕ್ ಕಾಣುತ್ತದೆ. ಅದನ್ನು ಆಯ್ಕೆ ಮಾಡಿಕೊಂಡು ಕೇಳುವ ಎಲ್ಲ ಮಾಹಿತಿ ನೀಡಿ ಲಿಂಕ್ ಮಾಡಿಕೊಳ್ಳಬಹುದು.
ಅಥವಾ UIDPAN ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ಆಧಾರ್ ನಂಬರ್ ಬಳಿಕ ಸ್ಪೇಸ್ ಕೊಟ್ಟು ಪಾನ್ ಕಾರ್ಡ್ ನಂಬರ್ ಟೈಪ್ ಮಾಡಿ 567678 ಇಲ್ಲವೇ 56161 ಸಂಖ್ಯೆ SMS ಕಳುಹಿಸಿದರೆ. ಆಧಾರ್ ಪ್ಯಾನ್ ಲಿಂಕ್ ಆಗುತ್ತದೆ.












Click it and Unblock the Notifications