Aadhaar card: ನಿಮ್ಮ ಆಧಾರ್ ಕಾರ್ಡ್ ಎಷ್ಟು ಬಾರಿ ನವೀಕರಿಸಬಹುದು ತಿಳಿದಿದೆಯೇ?

ಭದ್ರತೆಯ ಕಾರಣದಿಂದ ಆಧಾರ್ ಕಾರ್ಡ್‌ಗೆ ಅಪ್‌ಡೇಟ್ ಮಾಡುವುದಕ್ಕೆ ಕೆಲವು ಮಿತಿಗಳಿವೆ.

ನವದೆಹಲಿ, ಫೆಬ್ರವರಿ. 22: ಆಧಾರ್ ಕಾರ್ಡ್ ಎಂಬುದು ದೇಶದ ಎಲ್ಲಾ ನಾಗರಿಕರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾದ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ. ಈಗಂತೂ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಪಡೆಯುವುದರಿಂದ ಹಿಡಿದು ಕೊರೊನಾ ಲಸಿಕೆ ಪಡೆಯುವವರೆಗೂ ಆಧಾರ್ ಕಾರ್ಡ್ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ.

ಈ ಆಧಾರ್ ಕಾರ್ಡ್‌ಗೆ ಪ್ಯಾನ್ ನಂಬರ್ ಸೇರಿಸುವುದು, ಮೊಬೈಲ್ ನಂಬರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತೆ. ನಂಬರ್ ಬದಲಿಸುವವರು, ಹೊಸದಾಗಿ ಪ್ಯಾನ್ ಮಾಡಿಸುವವರು, ಜನ್ಮ ದಿನಾಂಕದಲ್ಲಿ ತಪ್ಪಿರುವುದು, ವಿಳಾಸ ಸೇರಿದಂತೆ ಹಲವು ಬದಲಾವಣೆ ಮಾಡಬೇಕಾಗುತ್ತದೆ. ಹಾಗಾದರೆ, ಈ ರೀತಿ ಎಷ್ಟು ಬಾರಿ ನಮ್ಮ ಆಧಾರ್ ಕಾರ್ಡ್ ಬದಲಿಸಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ.

ಭದ್ರತೆಯ ಕಾರಣದಿಂದ ಆಧಾರ್ ಕಾರ್ಡ್‌ಗೆ ಅಪ್‌ಡೇಟ್ ಮಾಡುವುದಕ್ಕೆ ಕೆಲವು ಮಿತಿಗಳಿವೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, ಬಳಕೆದಾರರು ಇದನ್ನು ಎರಡು ಬಾರಿ ಮಾತ್ರ ನವೀಕರಿಸಬಹುದು.

Aadhaar card: How many times Aadhaar details can be updated, check here

*ಈ ಆಧಾರ್ ವಿವರಗಳನ್ನು ಎಷ್ಟು ಬಾರಿ ನವೀಕರಿಸಬಹುದು*

1. ಹೆಸರು: ಆಧಾರ್ ಕಾರ್ಡ್‌ನಲ್ಲಿರುವ ಬಳಕೆದಾರರ ಹೆಸರನ್ನು ಎರಡು ಬಾರಿ ಬದಲಾಯಿಸಬಹುದು.

2. ಹುಟ್ಟಿದ ದಿನಾಂಕ: ಆಧಾರ್‌ನಲ್ಲಿರುವ ಜನ್ಮ ದಿನಾಂಕವನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ. ಆದರೆ, ಡೇಟಾ ಎಂಟ್ರಿ ಪ್ರಕ್ರಿಯೆಯಲ್ಲಿ ದೋಷವಿದ್ದ ಸಂದರ್ಭದಲ್ಲಿ ಮಾತ್ರ ಬದಲಾವಣೆ ಸಾಧ್ಯ.

3. ವಿಳಾಸ: ಬಳಕೆದಾರರು ತಮ್ಮ ವಿಳಾಸವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು.

4. ಲಿಂಗ: ಬಳಕೆದಾರರು ತಮ್ಮ ಆಧಾರ್ ಡೇಟಾದಲ್ಲಿ ಒಮ್ಮೆ ಮಾತ್ರ ಲಿಂಗ ಬದಲಾಯಿಸಬಹುದು.

ಯುಐಡಿಎಐ ಪ್ರಾದೇಶಿಕ ಕಚೇರಿಗೆ ಭೇಟಿ ನೀಡುವ ಮೂಲಕ ಆಧಾರ್‌ನ ಹೆಸರು, ಲಿಂಗ ಅಥವಾ ಹುಟ್ಟಿದ ದಿನಾಂಕದ ಬದಲಾವಣೆಗಳು ಸಾಧ್ಯವಾಗುತ್ತವೆ.

*ವಿಶೇಷ ಸಂದರ್ಭಗಳಲ್ಲಿ ಆಧಾರ್‌ನಲ್ಲಿ ಬದಲಾವಣೆಗಳನ್ನು ಮಾಡುವುದು ಹೇಗೆ*

1. ಬಳಕೆದಾರರು ತಮ್ಮ ಹೆಸರು, ಜನ್ಮ ದಿನಾಂಕ ಅಥವಾ ಲಿಂಗವನ್ನು ನವೀಕರಿಸಲು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಬೇಕು.

2. ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಲು ನಿಗದಿಪಡಿಸಿದ ಸಮಯವನ್ನು ಮೀರಿದ್ದರೆ ಇಮೇಲ್ ಅಥವಾ UIDAI ಪ್ರಾದೇಶಿಕ ಕಚೇರಿಯ ಮೂಲಕ ನೋಂದಣಿ ಕೇಂದ್ರಕ್ಕೆ ವಿನಂತಿ ಕಳುಹಿಸಬೇಕು.

3. ಬದಲಾವಣೆಗಾಗಿ ಮನವಿ ಮಾಡುವ ಬಳಕೆದಾರರು ಕಾರಣ ಮತ್ತು ಆಧಾರ್ ವಿವರಗಳು ಮತ್ತು ಅದಕ್ಕೆ ಬೇಕಾದ ದಾಖಲೆಗಳ ಪ್ರತಿಯನ್ನು ಒದಗಿಸಬೇಕು.

4. [email protected] ಗೆ ಇಮೇಲ್ ಕಳುಹಿಸಬೇಕು.

5. ಒಬ್ಬ ವ್ಯಕ್ತಿಯು ಸರಿಯಾದ ರೀತಿ ಅರ್ಜಿ ಸಲ್ಲಿಸಿದ್ದರೇ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.

6. ಆಧಾರ್‌ನಲ್ಲಿ ಬದಲಾವಣೆಗಾಗಿ ಮನವಿ ಮಾಡಿದ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಪ್ರಾದೇಶಿಕ ಕಚೇರಿಯು ತನಿಖೆ ನಡೆಸುತ್ತದೆ.

7. ಪ್ರಾದೇಶಿಕ ಕಚೇರಿ ಪರಿಶೀಲನೆಯನ್ನು ಪೂರ್ಣಗೊಳಿಸಿದ ನಂತರ, ಪ್ರಕ್ರಿಯೆ ಮುಂದುವರೆಯುತ್ತದೆ

*ಆಧಾರ್ ವಿವರಗಳನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳು*

1. ಪಾಸ್‌ಪೋರ್ಟ್

2. ಬ್ಯಾಂಕ್ ಸ್ಟೇಟ್‌ಮೆಂಟ್

3. ಪೋಸ್ಟ್ ಆಫೀಸ್‌ ಸ್ಟೇಟ್‌ಮೆಂಟ್ ಅಥವಾಪಾಸ್‌ಬುಕ್

4. ಪಡಿತರ ಚೀಟಿ

5. ಚಾಲನಾ ಪರವಾನಿಗೆ

6. ಮತದಾರರ ಗುರುತಿನ ಚೀಟಿ

7. ಸರ್ಕಾರಿ ಗುರುತಿರುವ ಫೋಟೋ ಐಡಿ ಕಾರ್ಡ್

8. ಪಿಎಸ್‌ಯು ನೀಡಿದ ಫೋಟೋ ಗುರುತಿನ ಚೀಟಿ

9. 3 ತಿಂಗಳ ವಿದ್ಯುತ್ ಬಿಲ್ ಅಥವಾ ಮೂರು ತಿಂಗಳ ನೀರಿನ ಬಿಲ್

10. ಮೂರು ತಿಂಗಳ ಲ್ಯಾಂಡ್‌ಲೈನ್ ಬಿಲ್

11. 12 ತಿಂಗಳಿಗಿಂತ ಹಳೆಯದಾಗಿರದ ಆಸ್ತಿ ತೆರಿಗೆ ರಶೀದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+