ಮೊಮೊಸ್ ಪ್ರಿಯರೇ ಗಮನಿಸಿ: 1000 ರೂ. ಬಾಜಿ ಕಟ್ಟಿ ಮೊಮೊಸ್ ತಿಂದ ಯುವಕ ಸಾವು!
ಪಾಟ್ನಾ ಜುಲೈ 17: ಅಧಿಕ ಮೊಮೊಸ್ ಅನ್ನು ಯಾರು ತಿನ್ನಬಹುದು ಎಂದು ಸ್ನೇಹಿತನೊಂದಿಗೆ ಬಾಜಿ ಕಟ್ಟಿದ ಯುವಕ ಮೊಮೊಸ್ ತಿಂದು ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ. ಅಧಿಕ ಮೊಮೊಸ್ ತಿನ್ನುವುದಾಗಿ 1,000 ರೂಪಾಯಿ ಬಾಜಿ ಕಟ್ಟಿ 23 ವರ್ಷದ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾನೆ.
23 ವರ್ಷದ ವಿಪಿನ್ ಕುಮಾರ್ ಪಾಸ್ವಾನ್ ಗುರುವಾರ ಸಿವಾನ್ ಜಿಲ್ಲೆಯ ಗ್ಯಾನಿ ಮೋರ್‌ನಲ್ಲಿರುವ ಸ್ಟಾಲ್‌ನಲ್ಲಿ 150 ಮೊಮೊಗಳನ್ನು ಸೇವಿಸಿದ್ದಾನೆ. ನಂತರ ಪ್ರಜ್ಞಾಹೀನರಾಗಿ ನೆಲಕ್ಕೆ ಕುಸಿದಿದ್ದಾನೆ. ಬಾಜಿ ಕಟ್ಟಿದ ಸ್ನೇಹಿತರು ಆತ ನಾಟಕವಾಡುತ್ತಿದ್ದಾನೆ ಎಂದು ಭಾವಿಸಿ ಆಸ್ಪತ್ರೆಗೆ ಕರೆದೊಯ್ಯವುದನ್ನು ತಡ ಮಾಡಿದ್ದಾರೆ.

ನಂತರ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಗೋಪಾಲ್‌ಗಂಜ್ ಜಿಲ್ಲೆಯ ಥಾವೆ ಬ್ಲಾಕ್‌ನ ಸಿಹೋರ್ವಾ ಗ್ರಾಮದ ನಿವಾಸಿ ವಿಪಿನ್ ಕುಮಾರ್. ಇವರು ಬರ್ಹರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ಯಾನಿ ಮೋರ್‌ನಲ್ಲಿ ಮೊಬೈಲ್ ಫೋನ್ ಮಾರಾಟ ಮತ್ತು ದುರಸ್ತಿ ಅಂಗಡಿಯನ್ನು ನಡೆಸುತ್ತಿದ್ದರು.
ಗುರುವಾರ ವಿಪಿನ್ ಅವರನ್ನು ಒಂದೆರಡು ಸ್ನೇಹಿತರು ಭೇಟಿ ಮಾಡಿದರು. ಸಾಮಾನ್ಯವಾಗಿ ಸ್ನೇಹಿತರು ಭೇಟಿ ಮಾಡಿದಾಗ ತಿಂಡಿ ಟೀ ಕುಡಿಯಲು ಇವರು ತೆರಳಿದ್ದಾರೆ. ಅಲ್ಲಿವರಿಗೂ ವಿಪಿನ್ ಸಹಜವಾಗಿಯೇ ಇದ್ದನು. ಹರಟೆ ಹೊಡೆಯುತ್ತಾ, ಯಾರು ಗರಿಷ್ಠ ಸಂಖ್ಯೆಯ ಮೊಮೊಗಳನ್ನು ತಿನ್ನಬಹುದು ಎಂದು ಅವರು ಬಾಜಿ ಕಟ್ಟಿದರು. ಹತ್ತಿರದ ಸ್ಟಾಲ್‌ಗೆ ಹೋದರು. ವಿಪಿನ್ 150 ಮೊಮೊಗಳನ್ನು ತಿಂದರು. ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾದರು. ಬಳಿಕ ಆಸ್ಪತ್ರೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ನಂತರ ಶವವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆಗಾಗಿ ಗೋಪಾಲ್ಗಂಜ್ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

"ವಿಪಿನ್ ತನ್ನ ಸ್ನೇಹಿತರೊಂದಿಗೆ ಸವಾಲನ್ನು ಸ್ವೀಕರಿಸಿದ ನಂತರ ಹೆಚ್ಚಿನ ಸಂಖ್ಯೆಯ ಮೊಮೊಗಳನ್ನು ತಿಂದಿದ್ದಾನೆ. ಅಸ್ವಸ್ಥಗೊಂಡಿದ್ದ ಅವರನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು" ಎಂದು ತಾವೆ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಶಿ ರಂಜನ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ವಿಪಿನ್ ಅವರ ಸ್ನೇಹಿತರು ಆತನಿಗೆ ವಿಷ ಹಾಕಿ ನಂತರ ಆಸ್ಪತ್ರೆಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ವಿಪಿನ್ ಕುಟುಂಬ ಆರೋಪಿಸಿದೆ.
"ಮೊಮೊಸ್ ತಿನ್ನುವ ನೆಪದಲ್ಲಿ ವಿಪಿನ್‌ನ ಇಬ್ಬರು ಸ್ನೇಹಿತರು ಗುರುವಾರ ಅವರನ್ನು ಅಂಗಡಿಯಿಂದ ಕರೆದೊಯ್ದರು. ಅವರು ಅವನಿಗೆ ವಿಷ ಹಾಕಿ ಕೊಂದಿದ್ದಾರೆ. ಅವರು ಸಾವಿನ ಬಗ್ಗೆ ನಮಗೆ ಮಾಹಿತಿ ನೀಡಲಿಲ್ಲ. ಕೆಲವರು ಫುಟ್ ಪಾತ್ ಮೇಲೆ ಶವ ಬಿದ್ದಿರುವುದನ್ನು ನೋಡಿ ನಮಗೆ ಮಾಹಿತಿ ನೀಡಿದ್ದಾರೆ'' ಎಂದು ವಿಪಿನ್ ತಂದೆ ಬಿಶುನ್ ಕುಮಾರ್ ಪಾಸ್ವಾನ್ ಸುದ್ದಿಗಾರರಿಗೆ ತಿಳಿಸಿದರು.
"ಸಾವಿಗೆ ಕಾರಣವನ್ನು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications