ಜಮ್ಮು-ಕಾಶ್ಮೀರ: ಮೋಸ್ಟ್ ವಾಂಟೆಡ್ ಉಗ್ರನನ್ನು ಬಲಿಹಾಕಿದ ಭಾರತೀಯ ಸೇನೆ
ದೇಶದಾದ್ಯಂತ ಜನರು ವೀಕೆಂಡ್ ಮೂಡಿನಲ್ಲಿ, ಬಕ್ರೀದ್ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರೆ, ಗಡಿಯಲ್ಲಿರುವ ನಮ್ಮ ಸೈನಿಕರು ಮಾತ್ರ ನಿದ್ದೆ ಬಿಟ್ಟು ಬೆಳ್ಳಂಬೆಳಗ್ಗೆ ಒಬ್ಬ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ಬಲಿಹಾಕಿದ್ದರು!
ಹೌದು, ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದ ಕುಲ್ಗಾಂ ನಲ್ಲಿ ಇಶ್ಫಕ್ ಪದ್ದರ್ ಎಂಬ ಭಯೋತ್ಪಾದನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಲೆಫ್ಟಿನೆಂಟ್ ಉಮರ್ ಫಯಾಜ್ ರನ್ನು ಅಪಹರಿಸಿ, ಕೊಂದ ಆರೋಪದಲ್ಲಿ ಇಶ್ಫಕ್ ಹೆಸರೂ ಕೇಳಿಬಂದಿತ್ತು.

ಒಟ್ಟಿನಲ್ಲಿ ಭಾರತಕ್ಕೆ ಕಂಟಕವಾಗಿದ್ದ ಭಯೋತ್ಪಾದಕನ ಹತ್ಯೆಯೊಂದಿಗೆ ಬಕ್ರೀದ್ ಹಬ್ಬಕ್ಕೆ ಕಳೆಬಂದಿರುವುದು ಸುಳ್ಳಲ್ಲ. ಕುಲ್ಕಾಂ ನಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದ್ದು, ಮತ್ತಷ್ಟು ಭಯೋತ್ಪಾದಕರು ಅಡಗಿ ಕುಳಿತಿರಬಹುದೆಂದು ಶಂಕಿಸಲಾಗಿದೆ.












Click it and Unblock the Notifications