ಕಾಶ್ಮೀರದ ಸಂಬಾಲ್ ನಲ್ಲಿ ಜೀವಂತ ಸೆರೆ ಸಿಕ್ಕ ಭಯೋತ್ಪಾದಕ
ಬಂಡಿಪೊರ(ಜಮ್ಮು-ಕಾಶ್ಮೀರ), ಜುಲೈ 14: ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಂದು (ಜುಲೈ 14) ಇಲ್ಲಿನ ಸಂಬಾಲ್ ಪ್ರದೇಶದಲ್ಲಿ ಭಯೋತ್ಪಾದಕನೊಬ್ಬನನ್ನು ಜೀವಂತ ಸೆರೆಹಿಡಿಯಲಾಗಿದೆ.
ಸೆರೆ ಸಿಕ್ಕ ಭಯೋತ್ಪಾದಕನನ್ನು ಶಬಜ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್ ಈ ತೋಯ್ಬಾ ಸಂಘಟನೆಗೆ ಸೇರಿದವನೆಂದು ಶಂಕಿಸಲಾಗಿದೆ. ಈತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜುಲೈ 11 ರಂದು ಸಿಆರ್ ಪಿಎಫ್ ಮತ್ತು ಕಾಶ್ಮೀರಿ ಪೊಲೀಸರು ನಡೆಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮೂವರು ಭಯೋತ್ಪಾದಕರು ಹತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications