ವಿಶಿಷ್ಠ ಚೇತನ ಯುವತಿ ಮೇಲೆ ಸ್ವಯಂಘೋಷಿತ 'ಬಾಬಾ' ಅತ್ಯಾಚಾರ
ಮಥುರಾ(ಉತ್ತರ ಪ್ರದೇಶ), ಸೆಪ್ಟೆಂಬರ್ 23: ವಿಶಿಷ್ಠಚೇತನ ಯುವತಿಯೊಬ್ಬರ ಮೇಲೆ ಸ್ವಯಂಘೋಷಿತ ಬಾಬಾ ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ ಯುವತಿಯೊಬ್ಬರು ಕಳೆದ ಕೆಲ ತಿಂಗಳಿನಿಂದ ಮಥುರಾದ ಆಶ್ರಮವೊಂದರಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲಿ ಆಶ್ರಮದ ಬಾಬಾ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಆಡಿದ್ದಲ್ಲದೆ, ಆಕೆ ಗರ್ಭಿಣಿಯಾಗಿದ್ದಾರೆಂಬುದು ತಿಳಿಯುತ್ತಿದ್ದಂತೆಯೇ ಆಕೆಯನ್ನು ಆಶ್ರಮದಿಂದ ಆಚೆಹಾಕಿದ್ದ.

ಇದರಿಂದ ನೊಂದ ಯುವತಿ ಆತನ ವಿರುದ್ಧ ದೂರು ನೀಡಿದ್ದರು. ಆದರೆ ಈ ಆರೋಪವನ್ನು ಬಾಬಾ ತಳ್ಳಿ ಹಾಕಿದ್ದು, ಯುವತಿ ಆಶ್ರಮದ ವಿರುದ್ಧ ಅಪಪ್ರಚಾರ ಮಾಡುವುದಕ್ಕಾಗಿ ಇಂಥ ಕಟ್ಟುಕತೆಗಳನ್ನು ಸೃಷ್ಟಿಸಿದ್ದಾರೆ ಎಂದಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications