ಎ ಪ್ರಾಜೆಕ್ಟ್ ಎ ಡೆ : ಲೋಕಸಭೆಗೆ ಮೋದಿ ಸರಕಾರದ ಭರ್ಜರಿ ಸಿದ್ಧತೆ

ನವದೆಹಲಿ, ಜೂನ್ 07 : ಇದೀಗ ತಾನೆ ಮೂರು ವರ್ಷದ ಆಡಳಿತ ಮುಗಿಸಿರುವ ನರೇಂದ್ರ ಮೋದಿ ಸರಕಾರ, ಲೋಕಸಭೆ ಚುನಾವಣೆಗೆ ಇನ್ನೆರಡು ವರ್ಷ ಬಾಕಿ ಇರುವಂತೆಯೇ 'ಎ ಪ್ರಾಜೆಕ್ಟ್ ಎ ಡೆ (ದಿನಕ್ಕೊಂದು ಯೋಜನೆ)' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಹೆದ್ದಾರಿ ಮತ್ತು ಬಂದರು ಖಾತೆ ಸಚಿವಾಲಯ ಈಗಾಗಲೆ 500 ಯೋಜನೆಗಳಿಗೆ ಪ್ರತಿನಿತ್ಯ ಶಂಕುಸ್ಥಾಪನೆ ಮಾಡುವ ಬೃಹತ್ ಕಾರ್ಯಕ್ರಮವನ್ನು ರೂಪಿಸಿದೆ. ಈ ಯೋಜನೆ ಉದ್ಘಾಟನೆಯಾಗುತ್ತಿದ್ದಂತೆ ದಿನಕ್ಕೊಂದು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.[ಭಾರತದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗದ ಬಗ್ಗೆ ನಿಮಗೇನು ಗೊತ್ತು?]

A Project A Day : Modi govt's run up to Lok Sabha election

ಈ ಯೋಜನೆಗಾಗಿ ದೇಶದಾದ್ಯಂತ 15 ಸಾವಿರ ಕಿ.ಮೀ. ಉದ್ದರ ಹೆದ್ದಾರಿಯನ್ನು ಗುರುತಿಸಲಾಗಿದ್ದು, ಅವುಗಳ ಮೇಲೆ 1.8 ಕೋಟಿ ರುಪಾಯಿಯನ್ನು ಹೂಡಿಕೆ ಮಾಡಲಾಗುತ್ತಿದೆ. ಈ ಯೋಜನೆಗಳಿಗಾಗಿ ಉದ್ಯೋಗ ಸೃಷ್ಟಿಸುವ ರೂಪುರೇಷೆಯನ್ನೂ ಸಿದ್ಧಪಡಿಸಲಾಗಿದೆ.[19 ರಾಜ್ಯ ಹೆದ್ದಾರಿಗಳಲ್ಲಿ ನೂತನ ಟೋಲ್: ರಾಜ್ಯ ಸರ್ಕಾರ ಅಂಕಿತ]

ಈ ಮೂರು ವರ್ಷದಲ್ಲಿ ನರೇಂದ್ರ ಮೋದಿ ಸರಕಾರ 34 ಸಾವಿರ ಕಿ.ಮೀ. ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಇನ್ನಷ್ಟು ಹೆದ್ದಾರಿ ಯೋಜನೆಗಳಿಗೆ ಅನುಮತಿ ದೊರೆಯಲಿದೆ.

ದಿನಕ್ಕೊಂದು ಯೋಜನೆಯ ಮಹತ್ವಾಕಾಂಕ್ಷೆಯ ಯೋಜನೆಗಳ ವಿವರಗಳನ್ನು ನರೇಂದ್ರ ಮೋದಿ ಅವರಿಗೂ ತಲುಪಿಸಲಾಗಿದ್ದು, ಅವರಿಂದಲೇ ಇದು ಉದ್ಘಾಟನೆಯಾಗಲಿದೆ ಮತ್ತು ಈ ಎಲ್ಲ ಯೋಜನೆಗಳು 2019ರ ಏಪ್ರಿಲ್ ಒಳಗೆ ಮುಗಿಸುವ ಯೋಜನೆ ರೂಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+